AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗದೀಶ್ ಅಭಿಮಾನಿಗಳಿಗೆ ಸಿಹಿ ಸುದ್ದಿ; ಇನ್ನೊಂದು ರಿಯಾಲಿಟಿ ಶೋಗೆ ಜಗ್ಗು ಎಂಟ್ರಿ

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ಜಗದೀಶ್ ಅವರು ಸಿಕ್ಕಾಪಟ್ಟೆ ಸದ್ದು ಮಾಡಿದ್ದರು. ಆದರೆ ಕಾರಣಾಂತರಗಳಿಂದ ಅವರನ್ನು ಅರ್ಧಕ್ಕೆ ಶೋನಿಂದ ಹೊರಗೆ ಹಾಕಲಾಗಿತ್ತು. ಈಗ ಅವರಿಗೆ ಹೊಸ ಹೊಸ ಅವಕಾಶಗಳು ಸಿಗುತ್ತಿವೆ. ಇಷ್ಟು ದಿನ ‘ಕಲರ್ಸ್​ ಕನ್ನಡ’ ವಾಹಿನಿಯ ಶೋನಲ್ಲಿ ಮಿಂಚಿದ್ದ ಅವರು ಈಗ ‘ಜೀ ಕನ್ನಡ’ ವಾಹಿನಿಯ ವೇದಿಕೆಗೆ ಬಂದಿದ್ದಾರೆ.

ಜಗದೀಶ್ ಅಭಿಮಾನಿಗಳಿಗೆ ಸಿಹಿ ಸುದ್ದಿ; ಇನ್ನೊಂದು ರಿಯಾಲಿಟಿ ಶೋಗೆ ಜಗ್ಗು ಎಂಟ್ರಿ
ಜಗದೀಶ್
ಮದನ್​ ಕುಮಾರ್​
|

Updated on: Nov 01, 2024 | 10:46 PM

Share

ಬಿಗ್ ಬಾಸ್ ವೀಕ್ಷಿಸುವ ಬಹುತೇಕ ಪ್ರೇಕ್ಷಕರಿಗೆ ಲಾಯರ್ ಜಗದೀಶ್ ಇಷ್ಟ ಆಗಿದ್ದರು. ಆದರೆ ಬಿಗ್ ಬಾಸ್ ಮನೆಯಲ್ಲಿ ಅವರ ಆಟ ಹೆಚ್ಚು ದಿನ ನಡೆಯಲಿಲ್ಲ. ಶೋ ಬಗ್ಗೆಯೇ ಕೆಟ್ಟದಾಗಿ ಮಾತನಾಡಿದರು, ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದರು ಎಂಬ ಕಾರಣದಿಂದ ಅವರನ್ನು ಮಧ್ಯದಲ್ಲೇ ಎಲಿಮಿನೇಟ್ ಮಾಡಲಾಗಿತ್ತು. ಹಾಗಂತ ಜಗದೀಶ್ ಅವರ ಹವಾ ಕಡಿಮೆ ಆಗಿಲ್ಲ. ಎಂದಿನಂತೆ ಅವರು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಜೊತೆಗೆ ಬೇರೆ ಬೇರೆ ರಿಯಾಲಿಟಿ ಶೋನಿಂದಲೂ ಅವರಿಗೆ ಅಹ್ವಾನ ಬರುತ್ತಿದೆ. ಈಗ ಅವರು ‘ಜೀ ಕನ್ನಡ’ದ ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮಕ್ಕೆ ಬಂದಿದ್ದಾರೆ.

ಜಗಮಗಿಸುವ ವೇದಿಕೆಯಲ್ಲಿ ಕಲರ್​ಫುಲ್ ಬಟ್ಟೆ ಧರಿಸಿ ಜಗದೀಶ್ ಅವರು ಎಂಟ್ರಿ ನೀಡಿದ್ದಾರೆ. ಜೊತೆಗೆ ಭರ್ಜರಿಯಾಗಿ ಡ್ಯಾನ್ಸ್ ಕೂಡ ಮಾಡಿದ್ದಾರೆ. ಅವರ ಎಂಟ್ರಿ ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ಜಡ್ಜ್​ಗಳಾದ ರಕ್ಷಿತಾ ಪ್ರೇಮ್, ಶಿವರಾಜ್​ಕುಮಾರ್​, ವಿಜಯ್ ರಾಘವೇಂದ್ರ ಅವರು ಗ್ರ್ಯಾಂಡ್​ ವೆಲ್​ಕಮ್​ ನೀಡಿದ್ದಾರೆ. ಎಂದಿನಂತೆ ಜಗದೀಶ್ ಅವರು ಮನಬಿಚ್ಚಿ ಮಾತನಾಡಿದ್ದಾರೆ.

ಇದನ್ನೂ ಓದಿ: ಲಾಯರ್ ಅಲ್ಲ ಎಂದವರಿಗೆ ಬಿಗ್ ಬಾಸ್​ನಿಂದ ಬಂದು ತಿರುಗೇಟು ಕೊಟ್ಟ ಜಗದೀಶ್

‘ವೆಲ್​ಕಮ್​ ಜಗದೀಶ್​. ಡ್ಯಾನ್​ ಚೆನ್ನಾಗಿ ಮಾಡಿದ್ದೀರಿ’ ಎಂದು ಶಿವರಾಜ್​ಕುಮಾರ್​ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದರಿಂದ ಜಗದೀಶ್ ಅವರಿಗೆ ಸಖತ್ ಖುಷಿ ಆಗಿದೆ. ‘ನಮ್ಮಂಥವರ ಶಿವಣ್ಣ ಮುಂದೆ ನಿಂತಿರುವುದೇ ನಮ್ಮ ಅದೃಷ್ಟ’ ಎಂದು ಜಗದೀಶ್ ಹೇಳಿದ್ದಾರೆ. ‘ರಕ್ಷಿತಾ ಅವರನ್ನು ನೋಡಿ ಎಲ್ಲವನ್ನೂ ಮರೆತುಬಿಟ್ಟೆ. ಇವತ್ತು ನಾನು ಶಾರುಖ್ ಖಾನ್ ಆಗಿದ್ದೇನೆ’ ಎಂದಿದ್ದಾರೆ ಜಗದೀಶ್​.

View this post on Instagram

A post shared by Zee Kannada (@zeekannada)

‘ಜೀ ಕನ್ನಡ’ ವಾಹಿನಿಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಪ್ರೋಮೋ ಹಂಚಿಕೊಳ್ಳಲಾಗಿದೆ. ಈ ವೀಕೆಂಡ್​ನಲ್ಲಿ ಜಗದೀಶ್ ಅವರ ಈ ಸಂಚಿಕೆ ಪ್ರಕಾರ ಆಗಲಿದೆ. ‘ಬಿಗ್ ಬಾಸ್ ಶೋನಿಂದ ಜಗದೀಶ್​ ಎಲಿಮಿನೇಟ್ ಆದ ನಂತರ ನಾವು ಆ ಶೋ ನೋಡುತ್ತಿಲ್ಲ’ ಎಂದು ಅನೇಕರು ಕಮೆಂಟ್ ಮಾಡಿದ್ದರು. ಈಗ ಅವರು ‘ಡಿಕೆಡಿ’ ಕಾರ್ಯಕ್ರಮಕ್ಕೆ ಬಂದಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಫುಲ್ ಎಪಿಸೋಡ್​ ನೋಡಲು ವೀಕ್ಷಕರು ಕಾದಿದ್ದಾರೆ. ಪ್ರೋಮೋದಲ್ಲಿ ಜಗದೀಶ್ ಅವರ ಡ್ಯಾನ್ಸ್ ನೋಡಿ ಅನೇಕರಿಗೆ ಅಚ್ಚರಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.