AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೀಕೆಂಡ್​ನಲ್ಲಿ ಸುದೀಪ್ ಬರ್ತಾರಾ ಅಥವಾ ಇಲ್ಲವಾ? ಸೂಚನೆ ಕೊಟ್ಟ ಬಿಗ್ ಬಾಸ್

ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಅವರ ನಿಧನದ ನಂತರ ಬಿಗ್ ಬಾಸ್ ಕನ್ನಡದಲ್ಲಿ ಅವರ ಭಾಗವಹಿಸುವಿಕೆ ಚರ್ಚೆಯ ವಿಷಯವಾಗಿದೆ. ತಾಯಿಯ ಅಗಲಿಕೆಯ ನೋವಿನ ನಂತರ ಅವರು ಈ ವಾರದ ಎಪಿಸೋಡ್‌ಗೆ ಹಾಜರಾಗುತ್ತಾರೆಯೇ ಎಂಬುದು ಅನಿಶ್ಚಿತವಾಗಿದೆ. ಆದರೆ, ದೀಪಾವಳಿ ಆಚರಣೆಯ ಹಿನ್ನೆಲೆಯಲ್ಲಿ ವಿಶೇಷ ಎಪಿಸೋಡ್‌ಗೆ ಸುದೀಪ್ ಅವರ ಆಗಮನದ ನಿರೀಕ್ಷೆ ಇದೆ.

ವೀಕೆಂಡ್​ನಲ್ಲಿ ಸುದೀಪ್ ಬರ್ತಾರಾ ಅಥವಾ ಇಲ್ಲವಾ? ಸೂಚನೆ ಕೊಟ್ಟ ಬಿಗ್ ಬಾಸ್
ಸುದೀಪ್
ರಾಜೇಶ್ ದುಗ್ಗುಮನೆ
|

Updated on: Nov 01, 2024 | 7:35 AM

Share

ಕಿಚ್ಚ ಸುದೀಪ್ ಅವರು ತಮ್ಮ ತಾಯಿಯನ್ನು ಇತ್ತೀಚೆಗೆ ಕಳೆದುಕೊಂಡರು. ಅವರ ತಾಯಿ ಸರೋಜಾ ಅವರು ನಿಧನ ಹೊಂದಿದರು. ಎರಡು ವಾರಗಳ ಹಿಂದೆ ಬಿಗ್ ಬಾಸ್ ನಡೆಸಿಕೊಡುವಾಗ ತಾಯಿ ಅನಾರೋಗ್ಯದ ಬಗ್ಗೆ ಅವರಿಗೆ ಮಾಹಿತಿ ಸಿಕ್ಕಿತ್ತು. ಶನಿವಾರದ ಎಪಿಸೋಡ್ ನಡೆಸಿಕೊಟ್ಟು ಆ ಬಳಿಕ ಅವರು ದೊಡ್ಮನೆಯಿಂದ ಹೊರ ಬಂದರು. ತಾಯಿ ಕಳೆದುಕೊಂಡ ನೋವಲ್ಲಿ ಕಳೆದ ವಾರ ಅವರು ಬಿಗ್ ಬಾಸ್ ನಡೆಸಿಕೊಟ್ಟಿರಲಿಲ್ಲ. ಈ ವಾರ ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡಲು ಬರುತ್ತಾರೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆ ಬಂದಿತ್ತು. ಅದಕ್ಕೆ ಬಿಗ್ ಬಾಸ್ ಪರೋಕ್ಷವಾಗಿ ಉತ್ತರ ನೀಡಿದ್ದಾರೆ.

ಎಲ್ಲ ಕಡೆಗಳಲ್ಲಿ ದೀಪಾವಳಿ ಆಚರಣೆ ಜೋರಾಗಿದೆ. ಶನಿವಾರವೂ (ನವೆಂಬರ್ 2) ದೀಪಾವಳಿ ಹಬ್ಬ ಆಚರಣೆ ಇರುತ್ತದೆ. ಹೀಗಾಗಿ ಮನೆಯವರಿಗೆ ಗ್ರ್ಯಾಂಡ್ ಆಗಿ ರೆಡಿ ಆಗೋಕೆ ಅವಕಾಶ ಇರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಚಟುವಟಿಕೆ ಒಂದನ್ನು ಬಿಗ್ ಬಾಸ್ ನೀಡಿದ್ದರು.

ಚಟುವಟಿಕೆ​ ಪ್ರಕಾರ ಖಾಸಗಿ ಬಟ್ಟೆ ಕಂಪನಿಯೊಂದರ ಕ್ಯಾಟ್​ಲಾಗ್​ನ ಕಳುಹಿಸಿಕೊಟ್ಟಿದ್ದರು ಬಿಗ್ ಬಾಸ್. ಅವರಿಷ್ಟದ ಬಟ್ಟೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದನ್ನು ವಾರಾಂತ್ಯದ ಎಪಿಸೋಡ್​ಗೆ ಕಳುಹಿಸಿಕೊಡುವುದಾಗಿ ಸೂಚನೆ ಬಂದಿದೆ. ಇಷ್ಟು ಗ್ರ್ಯಾಂಡ್ ಆಗಿ ವೀಕೆಂಡ್ ಎಪಿಸೋಡ್ ನಡೆಯಲಿದೆ ಎಂದರೆ ಸುದೀಪ್ ಬಂದೇ ಬರುತ್ತಾರೆ ಅನ್ನೋದು ಮನೆಯ ಸದಸ್ಯರ ನಂಬಿಕೆ.

ಕಳೆದ ವೀಕೆಂಡ್​ನಲ್ಲಿ ಯೋಗರಾಜ್ ಭಟ್ ಹಾಗೂ ಸೃಜನ್ ಲೋಕೇಶ್ ಅವರು ದೊಡ್ಮನೆ ಒಳಗೆ ಬಂದಿದ್ದರು. ಈ ಸಂದರ್ಭದಲ್ಲಿ ಸಾಕಷ್ಟು ಫನ್ ಚಟುವಟಿಕೆಗಳು ನಡೆದಿದ್ದವು. ಈ ಬಾರಿ ಸುದೀಪ್ ಅವರೇ ಬರಲಿ ಎಂದು ವೀಕ್ಷಕರು ಹಾಗೂ ಮನೆಯ ಸದಸ್ಯರು ಬಯಸುತ್ತಿದ್ದಾರೆ.

ಇದನ್ನೂ ಓದಿ: ‘ಆ ಎಪಿಸೋಡ್ ನಡೆಸಿಕೊಡದಿದ್ದರೆ ಸುದೀಪ್ ಕೊನೆಯದಾಗಿ ತಾಯಿ ಜೊತೆ ಮಾತನಾಡುತ್ತಿದ್ದರು’; ಕಣ್ಣೀರಲ್ಲಿ ಮನೆ ಮಂದಿ

ಸುದೀಪ್ ಅವರ ತಾಯಿ ನಿಧನದ ವಿಚಾರ ಮನೆಯಲ್ಲಿ ಇರುವವರಿಗೆ ಗೊತ್ತಾಗಿದೆ. ಯೋಗರಾಜ್ ಭಟ್ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದು ಮನೆಯ ಸದಸ್ಯರಿಗೂ ದುಃಖ ತಂದಿದೆ. ಈ ವಾರ ಸುದೀಪ್ ತಾಯಿ ನೆನಪಲ್ಲಿ ಮೌನಚರಣೆ ನಡೆಸೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್