ಬಿಗ್ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿ ಒಂದು ವಾರ ಆಗಿದೆ. ಸಾಮಾನ್ಯವಾಗಿ ಮೊದಲ ವಾರ ಬಿಗ್ಬಾಸ್ನಲ್ಲಿ ಖುಷಿಯ ವಾತಾವರಣ ಇರುತ್ತದೆ, ಪರಸ್ಪರರು ಪರಿಚಯಗೊಳ್ಳುತ್ತಾರೆ ಆದರೆ ಈ ಸೀಸನ್ ಎಲ್ಲಾ ಉಲ್ಟಾ ಆಗಿದೆ. ಬಿಗ್ಬಾಸ್ ಪ್ರಾರಂಭವಾದ ಎರಡನೇ ದಿನದಿಂದಲೇ ಮನೆಯಲ್ಲಿ ಜಗಳ, ಕಿತ್ತಾಟ, ಆರೋಪ ಪ್ರತ್ಯಾರೋಪಗಳು ಪ್ರಾರಂಭವಾಗಿದೆ. ಹಾಗೋ ಹೀಗೋ ಜಗಳ, ಮುನಿಸು ದ್ವೇಷದಲ್ಲಿಯೇ ಮೊದಲ ವಾರ ಕಳೆದು ವಾರದ ಪಂಚಾಯಿತಿಗೆ ಬಂದಿದೆ. ಪ್ರತಿ ವಾರ ಬಿಗ್ಬಾಸ್ ಮನೆಯಿಂದ ಒಬ್ಬರು ಎಲಿಮಿನೇಟ್ ಆಗುವುದು ಕಾಮನ್. ಅಂತೆಯೇ ಈ ವಾರ ಯಾರು ಆಗಲಿದ್ದಾರೆ?
ಈ ಸೀಸನ್ನ ಮೊದಲ ನಾಮಿನೇಷನ್ನಲ್ಲಿ ನಟಿ ಗೌತಮಿ, ಶಿಶಿರ್, ಯಮುನಾ ಶ್ರೀನಿಧಿ, ಹಂಸಾ, ಭವ್ಯಾ ಗೌಡ, ಲಾಯರ್ ಜಗದೀಶ್, ಮಾನಸಾ, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ ಅವರುಗಳು ನಾಮಿನೇಟ್ ಆಗಿದ್ದರು. ಶನಿವಾರ ನಡೆದ ವಾರದ ಪಂಚಾಯಿತಿಯಲ್ಲಿ ಸುದೀಪ್ ಅವರು ಮೂವರು ಸ್ಪರ್ಧಿಗಳನ್ನು ಎಲಿಮಿನೇಷನ್ನಿಂದ ಪಾರು ಮಾಡಿದರು. ಮಾನಸಾ, ಗೌತಮಿ ಮತ್ತು ಭವ್ಯಾ ಅವರುಗಳನ್ನು ಸೇಫ್ ಮಾಡಲಾಯ್ತು. ಶಿಶಿರ್, ಯಮುನಾ ಶ್ರೀನಿಧಿ, ಹಂಸಾ, ಲಾಯರ್ ಜಗದೀಶ್, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಅವರುಗಳು ಉಳಿದುಕೊಂಡಿದ್ದಾರೆ. ಇದರಲ್ಲಿ ಯಾರು ಎಲಿಮಿನೇಟ್ ಆಗಲಿದ್ದಾರೆ?
ಇದನ್ನೂ ಓದಿ:‘ಬಿಗ್ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ನಟಿ ಯಮುನಾ ಶ್ರೀನಿಧಿ ಹಾಗೂ ಚೈತ್ರಾ ಕುಂದಾಪುರ ಇಬ್ಬರಲ್ಲಿ ಒಬ್ಬರು ಮನೆಯಿಂದ ಮೊದಲ ವಾರ ಎಲಿಮಿನೇಟ್ ಆಗಲಿದ್ದಾರೆ ಎನ್ನಲಾಗುತ್ತಿದೆ. ಕೆಲವು ಮೂಲಗಳ ಪ್ರಕಾರ ಯಮುನಾ ಶ್ರೀನಿಧಿ ಅವರದ್ದೇ ಮೊದಲ ಎಲಿಮಿನೇಷನ್ ಎಂದು ಹೇಳಲಾಗುತ್ತಿದೆ. ಯಮುನಾ ಶ್ರೀನಿಧಿ ಅವರು ಭಾರಿ ಉತ್ಸಾಹದಿಂದ ಬಿಗ್ಬಾಸ್ ಮನೆ ಪ್ರವೇಶ ಮಾಡಿದ್ದರು. ಮೊದಲ ವಾರ ಸಾಕಷ್ಟು ಉತ್ಸಾಹದಿಂದಲೇ ಇದ್ದರು. ಆದರೆ ಅವರ ವ್ಯಕ್ತಿತ್ವ ಬಿಗ್ಬಾಸ್ ಮನೆಯ ಕೆಲವರಿಗೆ ಇಷ್ಟವಾಗಲಿಲ್ಲ. ಕೆಲವರೊಟ್ಟಿಗೆ ಅವರು ಜಗಳ ಸಹ ಮಾಡಿಕೊಂಡರು. ಅವರ ಜೋರು ಧನಿ, ಹಾವ ಭಾವ, ವ್ಯಕ್ತಿತ್ವ ಬಹುಷಃ ಜನರಿಗೆ ಇಷ್ಟವಾಗಲಿಲ್ಲವೆಂದು ತೋರುತ್ತದೆ.
ಇನ್ನು ಚೈತ್ರಾ ಕುಂದಾಪುರ ಹೆಸರು ಸಹ ಕೇಳಿ ಬರುತ್ತಿದೆ. ಚೈತ್ರಾ ಕುಂದಾಪುರ ಮೊದಲಲ್ಲಿ ಗಮನ ಸೆಳೆದರಾದರೂ ವಾರದ ಮಧ್ಯ ಭಾಗದಿಂದ ಈಚೆಗೆ ಯಾಕೋ ತುಸು ಮಂಕಾದರು. ಹಾಗಾಗಿ ಅವರಿಗೆ ಪ್ರೇಕ್ಷಕರು ಮತ ಹಾಕಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ನಿನ್ನೆ ಸುದೀಪ್ ನಡೆಸಿದ ವಾರದ ಪಂಚಾಯಿತಿಯಲ್ಲಿ ಸಹ ಚೈತ್ರಾ ಕುಂದಾಪುರ ಬಹುತೇಕ ಮೌನವಾಗಿಯೇ ಇದ್ದರು. ಚೈತ್ರಾ ಕುಂದಾಪುರ ನಿರೀಕ್ಷಿತ ಮಟ್ಟದಲ್ಲಿ ಮನೆಯ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುತ್ತಿಲ್ಲ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಚೈತ್ರಾ ಎಲಿಮಿನೇಟ್ ಆಗಬಹುದು ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ