ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಉಗ್ರಂ ಮಂಜು ಉಗ್ರವಾಗಿ ಆಡಿ ಗಮನ ಸೆಳೆದಿದ್ದರು. ಆದರೆ, ದಿನ ಕಳೆದಂತೆ ಅವರು ಡಲ್ ಆದರು. ಇದಕ್ಕೆ ಗೌತಮಿ ಅವರು ಕಾರಣ ಎನ್ನುವ ಮಾತು ಮೊದಲಿನಿಂದಲೂ ಚರ್ಚೆಯಲ್ಲಿ ಇರುವ ವಿಷಯ. ಆದರೆ, ಇದನ್ನು ಅನೇಕರು ಒಪ್ಪಿಕೊಂಡಿಲ್ಲ. ಮಂಜು ಅವರಿಗೆ ಈಗ 38 ವರ್ಷ ವಯಸ್ಸು. ಮದುವೆ ಯಾವಾಗ ಎನ್ನುವ ಪ್ರಶ್ನೆ ಅವರಲ್ಲಿ ಇದೆ. ಇದಕ್ಕೆ ‘ಮಹರ್ಷಿ ದರ್ಶನ’ ಖ್ಯಾತಿಯ ವಿದ್ಯಾಶಂಕರಾನಂದ ಸರಸ್ವತಿ ಉತ್ತರಿಸಿದ್ದಾರೆ.
ಮಂಜು ಅವರನ್ನು ನೋಡುತ್ತಿದ್ದಂತೆ ಕಗ್ಗವನ್ನು ಹೇಳಿದರು ವಿದ್ಯಾಶಂಕರಾನಂದ ಸರಸ್ವತಿ ಅವರು. ‘ಎದ್ದಾಡಿ ಬೀಳುತಿಹೆ, ಗುದ್ದಾಡಿ ಸೋತಿಹೆ, ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ, ಜಗತ್ತನ್ನು ಉದ್ದರಿಸುವೆ ಎನ್ನುವ ಸಖನೆ ನಿನ್ನ ಉದ್ದಾರವೆಷ್ಟಾಯ್ತು ಮಂಕುತಿಮ್ಮ’ ಎಂದರು. ಇದರ ಅರ್ಥವನ್ನು ಹಡುಕಲು ಮಂಜು ಅವರು ಪ್ರಯತ್ನಿಸಿದರು. ಆ ಬಳಿಕ ವೈಯಕ್ತಿಕವಾಗಿ ಮಂಜು ಅವರನ್ನು ಭೇಟಿ ಮಾಡಿ ಅವರು ಮಾತನಾಡಿದರು.
‘ತಂಗಿಯರ ಮದುವೆ ಆದಮೇಲೆ ಆಗೋಣ ಎಂದುಕೊಂಡಿದ್ದೆ. ಈಗ 38 ವರ್ಷ ವಯಸ್ಸು’ ಎಂದರು ಮಂಜು ಅವರು. ಇದಕ್ಕೆ ಉತ್ತರಿಸಿದ ವಿದ್ಯಾಶಂಕರಾನಂದ ಸರಸ್ವತಿ, ‘ನೀನು ಎಮೋಷನಲ್ ಫೂಲ್. ಹೊರಗಡೆ ನೋಡೋದಕ್ಕೆ ಹಲಸಿನ ಹಣ್ಣಿನ ರೀತಿ ಒರಟು ಆಗಿದ್ದೀಯಾ. ಆದರೆ, ನಿನ್ನ ಮನಸ್ಸು ತೊಳೆಗಳ ರೀತಿ ಮೃದು. ಯಾವಾಗಲೂ ಅಸ್ಥಿರತೆ ಕಾಡುತ್ತಿದೆ. ಮೋಸ ಹೋದರೆ ಅಥವಾ ಬೇರೆಯವರಿಗೆ ಅನ್ಯಾಯ ಆದರೆ ಎನ್ನುವ ಭಾವನೆಯಲ್ಲೇ ಬದುಕುತ್ತೀಯ’ ಎಂದರು ಗುರೂಜಿ.
‘ಬದುಕು ಯಾವಾಗಲೂ ಅಸ್ಥಿರವೇ, ಅದರಲ್ಲಿ ಸ್ಥಿರತೇ ಕಂಡುಕೊಳ್ಳಬೇಕು. ಮುಂದಿನ ನಾಲ್ಕು ವರ್ಷ ಅಂದರೆ 2029ರವರೆಗೆ ತಿರುಗಿ ನೋಡುವ ಮಾತೇ ಇಲ್ಲ. 2026ರವರೆಗೆ ಕಂಕಣ ಬಲ ಇದೆ. ಹೊರಗೆ ಹೋಗ್ತಾ ಇದ್ದ ಹಾಗೆ ಮದುವೆ ಆಗುತ್ತದೆ. ಒಳ್ಳೆಯ ಸಂಗಾತಿ ಬರ್ತಾಳೆ. ಮಂಜು ಎಂದರೆ, ಒಳ್ಳೆಯ ಹೆಸರು ಬರುತ್ತದೆ. ತಲೆಗೆ ಏರಿಸಿಕೊಳ್ಳಬೇಡ’ ಎಂದು ಕಿವಿಮಾತು ಹೇಳಿದರು. ಇದಕ್ಕೆ ಮಂಜು ಖುಷಿಯಿಂದ ತಲೆ ಆಡಿಸಿದರು.
ಇದನ್ನೂ ಓದಿ: ‘ಅಪನಿಂದನೆ ಮಾತ್ರ ನಿನಗೆ ಸಿಕ್ಕಿದ್ದು’; ಮಕ್ಕಳ ಕಳ್ಳಿ ಆರೋಪದ ಬಗ್ಗೆ ಮೋಕ್ಷಿತಾಗೆ ಪರೋಕ್ಷವಾಗಿ ಹೇಳಿದ್ರಾ ಗುರೂಜಿ?
‘ತಾಯಿಯ ಆರೋಗ್ಯದ ಬಗ್ಗೆ ಗಮನ ಇರಲಿ. ತಾಯಿಯನ್ನು ಕಳೆದುಕೊಳ್ಳೋಕೆ ಹೋಗಲೇಬಾರದು’ ಎಂದು ಗುರೂಜಿ ಹೇಳುತ್ತಿದ್ದಂತೆ ನೀವು ಹೇಳಿದ್ದು ಸರಿ ಇದೆ ಎಂದರು ಮಂಜು. ಮಂಜು ಅವರು ಫಿನಾಲೆಯಲ್ಲಿ ಕಪ್ ಎತ್ತುವ ಕನಸು ಕಾಣುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.