Shivarajkumar: ‘ಯು ಆರ್​ ಸೋ ಕ್ಯೂಟ್​’; ನವಾಜ್​ ಡೈಲಾಗ್​ಗೆ ಫಿದಾ ಆದ ಶಿವರಾಜ್​ಕುಮಾರ್

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಹಲವು ಪ್ರತಿಭೆಗಳಿಗೆ ವೇದಿಕೆ ಆಗಿದೆ. ಈಗ ಈ ರಿಯಾಲಿಟಿ ಶೋನ ಏಳನೇ ಸೀಸನ್ ನಡೆಯುತ್ತಿದೆ. ಮಹಾಸಂಗಮದಲ್ಲಿ ನವಾಜ್​ಗೆ ಶಿವಣ್ಣನ ಎದುರು ಮಾತನಾಡುವ ಅವಕಾಶ ಸಿಕ್ಕಿದೆ.

Shivarajkumar: ‘ಯು ಆರ್​ ಸೋ ಕ್ಯೂಟ್​’; ನವಾಜ್​ ಡೈಲಾಗ್​ಗೆ ಫಿದಾ ಆದ ಶಿವರಾಜ್​ಕುಮಾರ್
ನವಾಜ್-ಶಿವರಾಜ್​ಕುಮಾರ್
Edited By:

Updated on: Aug 01, 2023 | 8:55 AM

ಸಿನಿಮಾಗಳನ್ನು ಭಿನ್ನವಾಗಿ ವಿಮರ್ಶೆ ಮಾಡುವ ಮೂಲಕ ನವಾಜ್ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಅವರ ಟ್ಯಾಲೆಂಟ್ ನೋಡಿ ‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ (BBK 9) ಅವಕಾಶ ನೀಡಲಾಯಿತು. ಅಲ್ಲಿಯೂ ಅವರು ಪ್ರಾಸದ ಡೈಲಾಗ್ ಹೊಡೆದು ಗಮನ ಸೆಳೆದರು. ಆದರೆ, ಹೆಚ್ಚು ದಿನ ದೊಡ್ಮನೆಯಲ್ಲಿ ಇರೋಕೆ ಅವರಿಗೆ ಸಾಧ್ಯವಾಗಿಲ್ಲ. ಈಗ ನವಾಜ್ ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆಯುತ್ತಿದ್ದಾರೆ. ‘ಜೀ ಕನ್ನಡ ವಾಹಿನಿ’ಯಲ್ಲಿ ಪ್ರಸಾರ ಕಾಣುತ್ತಿರುವ ‘ಭರ್ಜರಿ ಬ್ಯಾಚುಲರ್ಸ್​’ಗೆ ಅವರು ಆಗಮಿಸಿದ್ದಾರೆ. ಇತ್ತೀಚೆಗೆ  ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7’ ಹಾಗೂ ‘ಭರ್ಜರಿ ಬ್ಯಾಚುಲರ್ಸ್​’ ಮಹಾಸಂಗಮದ ವೇದಿಕೆ ಮೇಲೆ ನವಾಜ್ ಮಸ್ತ್ ಆಗಿ ಡೈಲಾಗ್ ಹೇಳಿದ್ದಾರೆ. ಇದನ್ನು ಕೇಳಿ ಶಿವರಾಜ್​ಕುಮಾರ್ (Shivarajkumar) ಫಿದಾ ಆಗಿದ್ದಾರೆ.

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಹಲವು ಪ್ರತಿಭೆಗಳಿಗೆ ವೇದಿಕೆ ಆಗಿದೆ. ಈಗ ಈ ರಿಯಾಲಿಟಿ ಶೋನ ಏಳನೇ ಸೀಸನ್ ನಡೆಯುತ್ತಿದೆ. ಶಿವಣ್ಣ ಅವರು ಡ್ಯಾನ್ಸ್​ನಲ್ಲಿ ಕಿಂಗ್. ಈ ಕಾರಣಕ್ಕೆ ಅವರನ್ನು ಜಡ್ಜ್ ಸ್ಥಾನದಲ್ಲಿ ಕೂರಿಸಲಾಗಿದೆ. ಅವರು ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡಿ, ಅವರನ್ನು ಹುರಿದುಂಬಿಸುವ ಕೆಲಸ ಮಾಡುತ್ತಿದ್ದಾರೆ. ಮಹಾಸಂಗಮದಲ್ಲಿ ನವಾಜ್​ಗೆ ಶಿವಣ್ಣನ ಎದುರು ಮಾತನಾಡುವ ಅವಕಾಶ ಸಿಕ್ಕಿದೆ.

‘ಅವರೆಲ್ಲೋದ್ರೆ ಅಲ್ಲಿ ಅಭಿಮಾನಿಗಳು ಹಾಕ್ತಾರೆ ಹಾರ, ಅವರೆಲ್ಲೋದ್ರೆ ಅಲ್ಲಿ ಅಭಿಮಾನಿಗಳು ಹಾಕ್ತಾರೆ ಹಾರ. ಏಕೆಂದ್ರೆ ಅಲ್ಲಿರೋದು ನಮ್ಮ ಕರ್ನಾಟಕ ಚಕ್ರವರ್ತಿ ಶಿವರಾಜ್​ಕುಮಾರ’ ಎಂದಿದ್ದಾರೆ ನವಾಜ್​. ಮುಂದುವರಿದು, ‘ನಮ್ಮ ಗ್ಯಾರೇಜ್​​ನಲ್ಲಿದೆ ಗೇಜು, ನಮ್ಮ ಶಿವಣ್ಣಗೆ ಯಾವಾಗಲೂ ಆಗಲ್ಲ ಏಜು’ ಎಂದರು. ಇದನ್ನು ಕೇಳಿ ಶಿವರಾಜ್​ಕುಮಾರ್ ಖುಷಿಪಟ್ಟರು.


‘ನೀವು ಹೇಳುವ ಡೈಲಾಗ್​​ನೆಲ್ಲ ನಾನು ಕೇಳ್ತಾ ಇರ್ತೀನಿ. ಯೂ ಆರ್​ ಸೋ ಕ್ಯೂಟ್’ ಎಂದು ಮನಸ್ಫೂರ್ತಿಯಾಗಿ ಶಿವರಾಜ್​ಕುಮಾರ್ ಅವರು ನವಾಜ್ ಅವರನ್ನು ಹೊಗಳಿದರು. ವೇದಿಕೆ ಮೇಲೆ ರವಿಚಂದ್ರನ್, ರಕ್ಷಿತಾ, ಚಿನ್ನಿ ಮಾಸ್ಟರ್, ವಿಜಯ್ ರಾಘವೇಂದ್ರ ಕೂಡ ಇದ್ದರು. ಇವರ ಬಗ್ಗೆಯೂ ಪ್ರಾಸದ ಮಾತುಗಳನ್ನು ಹೇಳಿ ಗಮನ ಸೆಳೆದಿದ್ದಾರೆ ನವಾಜ್. ರಕ್ಷಿತಾ, ರವಿಚಂದ್ರನ್ ಕೂಡ ನವಾಜ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ಅನುಶ್ರೀ ಅವರು ಆ್ಯಂಕರ್ ಆಗಿ ಹಲವು ವರ್ಷಗಳಿಂದ ಕಿರುತೆರೆ ಲೋಕದಲ್ಲಿದ್ದಾರೆ. ಅವರ ಬಗ್ಗೆಯೂ ನವಾಜ್ ಡೈಲಾಗ್ ಹೊಡೆದಿದ್ದಾರೆ. ಇದನ್ನು ಕೇಳಿ ಅವರು ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: ಶಿವರಾಜ್​ಕುಮಾರ್ ಸಿಟಿ ರೌಂಡ್ಸ್​; ಅಭಿಮಾನಿಗಳ ಸೆಲ್ಫಿಗೆ ಪೋಸ್ ಕೊಟ್ಟ ನಟ

ನವಾಜ್ ಅವರು ಬಡ ಕುಟುಂಬದ ಹಿನ್ನೆಲೆಯಿಂದ ಬಂದವರು. ಆದರೆ, ಅವರಲ್ಲಿರುವ ಟ್ಯಾಲೆಂಟ್ ಅವರ ಜೀವನವನ್ನೇ ಬದಲಾಯಿಸಿದೆ. ‘ಬಿಗ್ ಬಾಸ್’ ಅವರ ಜನಪ್ರಿಯತೆ ಹೆಚ್ಚಿಸಿತು. ಈಗ ‘ಭರ್ಜರಿ ಬ್ಯಾಚುಲರ್ಸ್’ ವೇದಿಕೆ ಮೂಲಕ ಅವರು ಗಮನ ಸೆಳೆಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us