AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bharjari Bachelors: ಜೀ ಕನ್ನಡದಲ್ಲಿ ಹೊಸ ಶೋ ‘ಭರ್ಜರಿ ಬ್ಯಾಚುಲರ್ಸ್’; ಮದುವೆ ಆಗದ ಹುಡುಗರೇ ಇಲ್ಲಿ ಕೇಳಿ..

Zee Kannada: ಬ್ಯಾಚುಲರ್​ ಹುಡುಗರ ಬಯೋಡಾಟಾ ಶೀಘ್ರದಲ್ಲೇ ಕನ್ನಡಿಗರ ಮುಂದೆ ಬರಲಿದೆ. ಜೂನ್ 24ರ ಶನಿವಾರ ರಾತ್ರಿ 9 ಗಂಟೆಗೆ ‘ಜೀ ಕನ್ನಡ’ ವಾಹಿನಿಯಲ್ಲಿ ಈ ರಿಯಾಲಿಟಿ ಶೋ ಆರಂಭ ಆಗಲಿದೆ.

Bharjari Bachelors: ಜೀ ಕನ್ನಡದಲ್ಲಿ ಹೊಸ ಶೋ ‘ಭರ್ಜರಿ ಬ್ಯಾಚುಲರ್ಸ್’; ಮದುವೆ ಆಗದ ಹುಡುಗರೇ ಇಲ್ಲಿ ಕೇಳಿ..
‘ಭರ್ಜರಿ ಬ್ಯಾಚುಲರ್ಸ್’ ಶೋ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Jun 22, 2023 | 12:53 PM

ಕನ್ನಡ ಕಿರುತೆರೆ ವಾಹಿನಿಗಳ ನಡುವೆ ಸಖತ್​ ಪೈಪೋಟಿ ಇದೆ. ಧಾರಾವಾಹಿ ಮಾತ್ರವಲ್ಲದೇ ರಿಯಾಲಿಟಿ ಶೋಗಳಲ್ಲೂ ವಾಹಿನಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಹಾಗಾಗಿ ಭಿನ್ನವಾದ ಕಾನ್ಸೆಪ್ಟ್​ಗಳಲ್ಲಿ ರಿಯಾಲಿಟಿ ಶೋಗಳನ್ನು (Reality Show) ಜನರಿಗೆ ಪರಿಚಯಿಸಲಾಗುತ್ತಿದೆ. ಇಷ್ಟು ದಿನಗಳ ಕಾಲ ಜೀ ಕನ್ನಡದಲ್ಲಿ ‘ವೀಕೆಂಡ್​ ವಿತ್​ ರಮೇಶ್​ ಸೀಸನ್​ 5’ ಪ್ರಸಾರ ಆಯಿತು. ಈಗ ವಾರಾಂತ್ಯದ ಮನರಂಜನೆಗೆ ಹೊಸ ಶೋ ಬರುತ್ತಿದೆ. ‘ಭರ್ಜರಿ ಬ್ಯಾಚುಲರ್ಸ್’ (Bharjari Bachelors) ಎಂಬುದು ಈ ಕಾರ್ಯಕ್ರಮದ ಹೆಸರು. ಇದು ಮದುವೆ ಆಗದೇ ಇರುವ ಹುಡುಗರಿಗೆ ಸಂಬಂಧಿಸಿದ ಕಾರ್ಯಕ್ರಮ ಎಂಬುದು ವಿಶೇಷ. ಈ ಶೋ ಮೂಲಕ ಜೀ ಕನ್ನಡ (Zee Kannada) ವಾಹಿನಿಯು ಈಗ ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಮದುವೆಯ ವಯಸ್ಸಿಗೆ ಬಂದ ಹದಿಹರೆಯದ ಹುಡುಗರಿಗೆ ಸಮಾಜದಲ್ಲಿ ಏನೆಲ್ಲ ತೊಂದರೆ ಎದುರಾಗುತ್ತಿದೆ ಎಂಬುದನ್ನು ಆಧಾರವಾಗಿ ಇಟ್ಟುಕೊಂಡು ಈ ರಿಯಾಲಿಟಿ ಶೋ ರೂಪಿಸಲಾಗಿದೆ. ಕರ್ನಾಟಕದ ಟಿವಿ ಲೋಕದಲ್ಲಿನ ಆಯ್ದ ಕೆಲವು ಬ್ಯಾಚುಲರ್​ಗಳನ್ನ ಒಂದೆಡೆ ಸೇರಿಸಿ ಅವರನ್ನ ಬ್ಯಾಚುಲರ್ ಬದುಕಿನಿಂದ ಮದುವೆಗೆ ಎಲಿಜಿಬಲ್ ಮಾಡಿಸುವ ಪ್ರಯತ್ನವೇ ಈ ಹೊಸ ರಿಯಾಲಿಟಿ ಶೋನ ಮುಖ್ಯ ಕಾನ್ಸೆಪ್ಟ್​!

ಕನ್ನಡ ಕಿರುತೆರೆಯ 10 ಎಲಿಜಿಬಲ್ ಬ್ಯಾಚುಲರ್​ಗಳ ಕನಸನ್ನ ನನಸು ಮಾಡುತ್ತಾ, ಅವರ ಆಸೆಗಳ ಅಖಾಡದಲ್ಲಿ ಅವರ ಸಾಮರ್ಥ್ಯವನ್ನು ಕರುನಾಡಿನ ಜನತೆಗೆ ತೋರಿಸಲಾಗುತ್ತದೆ. ಬ್ಯಾಚುಲರ್ ಆಗಿದ್ದವನು ಮದುವೆಗೆ ಎಲಿಜಿಬಲ್ ಆಗಲು ಏನೆಲ್ಲ ಮಾಡಬೇಕು ಎಂಬುದನ್ನು ಕರುನಾಡಿಗೆ ಸಾರಿ ಹೇಳುವ ಈ ಕಾರ್ಯಕ್ರಮದ ನಿರೂಪಣೆಯ ಹೊಣೆಯನ್ನು ಅಕುಲ್ ಬಾಲಾಜಿ ಅವರಿಗೆ ನೀಡಲಾಗಿದೆ. ಹಲವು ದಿನಗಳ ನಂತರ ಅವರು ಜೀ ಕನ್ನಡಕ್ಕೆ ಮರಳುತ್ತಿರುವುದು ವಿಶೇಷ.

ಇದನ್ನೂ ಓದಿ: ಜೀ ಕನ್ನಡಕ್ಕೆ ಎಂಟ್ರಿ ಕೊಟ್ಟ ಸಾರಾ ಅಣ್ಣಯ್ಯ

ಕರುನಾಡಿಗೆ ಪ್ರೀತಿ-ಪ್ರೇಮದ ಪಾಠ ಹೇಳಿಕೊಟ್ಟ ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಅವರು ಈ ರಿಯಾಲಿಟಿ ಶೋನಲ್ಲಿ ಲವ್ ಗುರು ಆಗಿ ಪಡ್ಡೆ ಹುಡುಗರನ್ನ ತಿದ್ದಿತೀಡುವ ಕೆಲಸ ಮಾಡಲಿದ್ದಾರೆ. ಹಾಗೆಯೇ, ನಟಿ ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಅವರು ಬ್ಯಾಚುಲರ್ಸ್ ಪಾಲಿನ ಕನಸಿನ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆ ಮೂಲಕ ತೀರ್ಪುಗಾರರು ಖುರ್ಚಿಯ ಮೆರುಗನ್ನು ಅವರು ಹೆಚ್ಚು ಮಾಡಲಿದ್ದಾರೆ. ಈ ಶೋನ ಟೈಟಲ್​ ಸಾಂಗ್​ಗೆ ಚಂದನ್​ ಶೆಟ್ಟಿ ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಕೇಶ್ ಸಿ.ಎ. ಅವರ ಸಾಹಿತ್ಯದಲ್ಲಿ ಈ ಹಾಡು ಮೂಡಿಬಂದಿದೆ.

ಇದನ್ನೂ ಓದಿ: ಅಕುಲ್​ ಬಾಲಾಜಿ ಆ್ಯಕ್ಷನ್ ಮೂಲಕ ತೋರಿಸಿದ ಈ ಹಾಡು ಯಾವುದು ಎಂದು ಊಹಿಸ್ತೀರಾ?

ಬ್ಯಾಚುಲರ್​ ಹುಡುಗರ ಬಯೋ ಡಾಟಾ ಶೀಘ್ರದಲ್ಲೇ ಕನ್ನಡಿಗರ ಮುಂದೆ ಬರಲಿದೆ. ಜೂನ್ 24ರ ಶನಿವಾರ ರಾತ್ರಿ 9 ಗಂಟೆಗೆ ‘ಜೀ ಕನ್ನಡ’ ವಾಹಿನಿಯಲ್ಲಿ ಈ ರಿಯಾಲಿಟಿ ಶೋ ಆರಂಭ ಆಗಲಿದೆ. ‘ವೀಕೆಂಡ್ ವಿತ್ ರಮೇಶ್​’ ಸೀಸನ್ 5ರ ಯಶಸ್ಸಿನ ಬಳಿಕ ಈ ವಾಹಿನಿ ಯಾವ ರಿಯಾಲಿಟಿ ಶೋ ಅನ್ನು ಜನರಿಗೆ ಪರಿಚಯಿಸಲಿದೆ ಎಂಬುದು ವೀಕ್ಷಕರ ಕುತೂಹಲ ಆಗಿತ್ತು. ಅದಕ್ಕೆ ಉತ್ತರವಾಗಿ ‘ಭರ್ಜರಿ ಬ್ಯಾಚುಲರ್ಸ್​’ ಶೋ ಶುರುವಾಗುತ್ತಿದೆ. ಬ್ಯಾಚುಲರ್ಸ್‍ ಹುಡುಗರು ಅನುಭವಿಸುವ ಸಮಸ್ಯೆಗಳನ್ನ ಕೇಂದ್ರವಾಗಿ ಇಟ್ಟುಕೊಂಡು ಅದಕ್ಕೆ ಒಂದಿಷ್ಟು ಮನರಂಜನೆ ಸೇರಿಸಿ ಜನರ ಮುಂದೆ ಇಡುವ ಪ್ರಯತ್ನವೇ ಈ ಶೋನ ಹೈಲೈಟ್​.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ