
ಬಿಗ್ ಬಾಸ್ ಮನೆಯಲ್ಲಿ ಈ ವಾರ ರಾಶಿಕಾ ಶೆಟ್ಟಿ ಅವರು ಕ್ಯಾಪ್ಟನ್ ಆಗಿರುವುದು ಗೊತ್ತೇ ಇದೆ ಮತ್ತು ಅವರು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಅವರನ್ನೇ ನಗೆಪಾಟಿಲಿಗೀಡು ಮಾಡುತ್ತಿವೆ ಎಂದರೂ ತಪ್ಪಾಗಲಿಕ್ಕಿಲ್ಲ. ಈ ವಾರ ರಾಶಿಕಾ ಶೆಟ್ಟಿ ಅವರು ಹಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡರು. ಈ ಬಗ್ಗೆ ಅವರನ್ನು ಅನೇಕರು ಪ್ರಶ್ನೆ ಮಾಡಿದ್ದನ್ನು ಕಾಣಬಹುದು. ಅದೇ ರೀತಿ ರಾಶಿಕಾ ನಡೆದುಕೊಂಡಿದ್ದನ್ನು ಗಿಲ್ಲಿ ನಟ ಅವರು ನೇರವಾಗಿ ಪ್ರಶ್ನೆ ಮಾಡಿದ್ದೂ ಅಲ್ಲದೆ, ಅವರ ಅಸಲಿ ಮುಖವನ್ನು ತೆರೆದಿಟ್ಟರು. ಡಿಸೆಂಬರ್ 17ರ ಎಪಿಸೋಡ್ನಲ್ಲಿಈ ವಿಷಯ ಪ್ರಸಾರ ಕಂಡಿದೆ.
ಬಿಗ್ ಬಾಸ್ ಅಲ್ಲಿ ಗಿಲ್ಲಿ ನಟ ಅವರನ್ನು ರಾಶಿಕಾ ನಾಮಿನೇಟ್ ಮಾಡಿದರು. ಇದಕ್ಕೆ ಅವರು ನೀಡಿದ ಕಾರಣ ಸರಿ ಇರಲಿಲ್ಲ. ‘ನಾನು ಕ್ಯಾಪ್ಟನ್ ಆಗಿ ಹೇಳಿದ ಮಾತನ್ನು ಗಿಲ್ಲಿ ಕೇಳಿಲ್ಲ. ಈ ಕಾರಣಕ್ಕೆ ನಾಮಿನೇಟ್ ಮಾಡುತ್ತಿದ್ದೇನೆ’ ಎಂದು ರಾಶಿಕಾ ಹೇಳಿದ್ದನ್ನು ಕೆಳಗೆ ಎಂಬೇಡ್ ಮಾಡಿರುವ ವಿಡಿಯೋದಲ್ಲಿ ಕಾಣಬಹುದು. ಇದಕ್ಕೆ ಗಿಲ್ಲಿ ನಟ ಅವರು ಕೊಟ್ಟ ಕೌಂಟರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
She is caught and bold.
This week, she has taken the VIP ticket to the weekend episode to get bashed.
Gilli is just preparing her for the main match on Saturday 😂To be honest this is worse than losing the captaincy midway due to other’s fault#BBK12
pic.twitter.com/dzA5gYl8Es— ಅಲ್ಪಸಂಖ್ಯಾತ (@alpasankhyata) December 17, 2025
ಏಕೆಂದರೆ ಈ ಮೊದಲು ಕೂಡ ರಾಶಿಕಾ ಅವರು ಇತರ ಕ್ಯಾಪ್ಟನ್ ಮಾತನ್ನು ಧಿಕ್ಕರಿಸಿದ್ದರು. ಈ ವಿಷಯವು ಚರ್ಚೆಗೆ ಕಾರಣ ಆಗಿತ್ತು. ಮಾಳು ಅವರು ‘ರಾಶಿಕಾ ಕಸ’ ಎಂದು ಕೊಟ್ಟಾಗ ಮರ್ಯಾದೆ ಕೊಡದೆ ಮಾತನಾಡಿದ್ದು ರಾಶಿಕಾ. ರಘು ಕ್ಯಾಪ್ಟನ್ ಆದಾಗಲೂ ಇದೇ ರೀತಿ ಮಾಡಿದ್ದರು. ಇದನ್ನು ಗಿಲ್ಲಿ ನಟ ಅವರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಗಿಲ್ಲಿ ನಟನ ಮಾತಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಅಕ್ಕ-ತಂಗಿ ಬಳಿ ಹೀಗೆ ಮಾತಾಡ್ತಿದ್ರಾ? ಸೂರಜ್ ಮಾತು ರಾಶಿಕಾ ಎದೆಗೆ ಚುಚ್ತು
ಈ ವಾರ ರಾಶಿಕಾ ಅವರ ಉಸ್ತುವಾರಿ ಕೆಟ್ಟದಾಗಿತ್ತು. ವೀಕೆಂಡ್‌ನಲ್ಲಿ ಇದಕ್ಕೆ ರಾಶಿಕಾ ಅವರು ಕ್ಲಾಸ್ ತೆಗೆದುಕೊಳ್ಳೋದು ಪಕ್ಕಾ ಎನ್ನಲಾಗುತ್ತಿದೆ. ಅವರು ಯಾವ ವಿಷಯವನ್ನು ಧೈರ್ಯದಿಂದ ಹೇಳಿಲ್ಲ. ‘ನಾನು ನ್ಯಾಯಯುತವಾಗಿ ಕ್ಯಾಪ್ಟನ್ ಆಗಿದ್ದು’ ಎಂದು ರಾಶಿಕಾ ಹೇಳಿಕೊಂಡಿದ್ದರು. ಆ ಬಳಿಕ ಸೂರಜ್ನ ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆ ಮಾಡಬೇಕು ಎಂಬ ವಿಷಯವು ಬಂದಾಗ, ‘ಚೈತ್ರಾ ನಿರ್ಧಾರದಿಂದ ಸೂರಜ್ಗೆ ಕ್ಯಾಪ್ಟನ್ಸಿ ತಪ್ಪಿದೆ. ಹೀಗಾಗಿ, ಅವರನ್ನು ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆ ಮಾಡುತ್ತಿದ್ದೇನೆ’ ಎಂದಿದ್ದರು ರಾಶಿಕಾ. ಇದು ಕೂಡ ಚರ್ಚೆಗೆ ಕಾರಣ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.