AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಕ-ತಂಗಿ ಬಳಿ ಹೀಗೆ ಮಾತಾಡ್ತಿದ್ರಾ? ಸೂರಜ್ ಮಾತು ರಾಶಿಕಾ ಎದೆಗೆ ಚುಚ್ತು

ಈ ವಾರ ರಾಶಿಕಾ ಅವರು ಕ್ಯಾಪ್ಟನ್ ಆದರು. ಈ ಆಟದಲ್ಲಿ ಉಸ್ತುವಾರಿ ವಹಿಸಿಕೊಂಡಿದ್ದು ಚೈತ್ರಾ ಅವರಾಗಿತ್ತು. ಚೈತ್ರಾ ಅವರು ಸರಿಯಾಗಿ ಉಸ್ತುವಾರಿ ಮಾಡಿದ್ದಾರೆ ಎಂಬ ವಾದ ಸೂರಜ್ ಅವರದ್ದಾಗಿತ್ತು. ಇದನ್ನು ಸೂರಜ್ ಅವರು ಮನಸ್ಸಿನಲ್ಲೇ ಇಟ್ಟುಕೊಂಡಿದ್ದರು. ಮನಸ್ಸಿನಲ್ಲಿ ಇದ್ದಿದ್ದನ್ನು ನೇರವಾಗಿ ಹೇಳಿಲ್ಲ ಸೂರಜ್. ಇದು ಕಿತ್ತಾಟಕ್ಕೆ ಅನುವು ಮಾಡಿಕೊಟ್ಟಿತ್ತು.

ಅಕ್ಕ-ತಂಗಿ ಬಳಿ ಹೀಗೆ ಮಾತಾಡ್ತಿದ್ರಾ? ಸೂರಜ್ ಮಾತು ರಾಶಿಕಾ ಎದೆಗೆ ಚುಚ್ತು
ರಾಶಿಕಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Dec 14, 2025 | 6:21 AM

Share

ಬಿಗ್ ಬಾಸ್ ಮನೆಯಲ್ಲಿ ರಾಶಿಕಾ ಹಾಗೂ ಸೂರಜ್ ಅವರು ಒಟ್ಟಾಗಿ ಇದ್ದರು. ಇವರ ಮಧ್ಯೆ ಪ್ರೀತಿ ಇದೆ ಎಂದೆಲ್ಲ ಸುದ್ದಿ ಹಬ್ಬುವಷ್ಟು ಇವರು ಆಪ್ತವಾಗಿದ್ದರು ಎಂದರೂ ತಪ್ಪಾಗಲಿಕ್ಕಿಲ್ಲ. ಆದರೆ, ರಾಶಿಕಾ ಅವರು ಕ್ಯಾಪ್ಟನ್ ಆದ ಬಳಿಕ ಎಲ್ಲವೂ ಬದಲಾಗಿಬಿಟ್ಟಿತ್ತು. ರಾಶಿಕಾ ಹಾಗೂ ಸೂರಜ್ ಮಧ್ಯೆ ಕಿರಿಕ್ ಆಗಿದೆ. ಅದು ಸಾಕಷ್ಟು ತೀರಾನೇ ಆಳಕ್ಕೆ ಹೋಗಿದೆ ಎಂದರೂ ತಪ್ಪಾಗಲಾರದು. ಇವರ ಕಿತ್ತಾಟಕ್ಕೆ ಕಾರಣ ಏನು? ಆ ಬಗ್ಗೆ ಇಲ್ಲಿ ಇದೆ ವಿವರ.

ಈ ವಾರ ರಾಶಿಕಾ ಅವರು ಕ್ಯಾಪ್ಟನ್ ಆದರು. ಈ ಆಟದಲ್ಲಿ ಉಸ್ತುವಾರಿ ವಹಿಸಿಕೊಂಡಿದ್ದು ಚೈತ್ರಾ ಅವರಾಗಿತ್ತು. ಚೈತ್ರಾ ಅವರು ಸರಿಯಾಗಿ ಉಸ್ತುವಾರಿ ಮಾಡಿದ್ದಾರೆ ಎಂಬ ವಾದ ಸೂರಜ್ ಅವರದ್ದಾಗಿತ್ತು. ಇದನ್ನು ಸೂರಜ್ ಅವರು ಮನಸ್ಸಿನಲ್ಲೇ ಇಟ್ಟುಕೊಂಡಿದ್ದರು. ಮನಸ್ಸಿನಲ್ಲಿ ಇದ್ದಿದ್ದನ್ನು ನೇರವಾಗಿ ಹೇಳಿಲ್ಲ ಸೂರಜ್.

ಸೂರಜ್ ಅವರು ಮೈಕ್ ಹಾಕದ ಕಾರಣದಿಂದ ಕ್ಯಾಪ್ಟನ್ ರಾಶಿಕಾ ಶಿಕ್ಷೆ ಕೊಡಲು ಹೋದರು. ಆದರೆ, ಇದಕ್ಕೆ ಸೂರಜ್ ಅವರು ಧಿಮಾಕಿನಿಂದ ಮಾತನಾಡಿದರು. ‘ನಾನು ನೀರಿಗೆ ಇಳಿಯಲ್ಲ’ ಎಂದರು. ಇದಕ್ಕೆ ಕಾರಣ ಏನು ಎಂಬುದು ರಾಶಿಕಾಗೆ ಗೊತ್ತಾಗಲಿಲ್ಲ. ಆ ಬಳಿಕ ಸಿಟ್ಟಿನಿಂದ ಹೋಗಿ ರಾಶಿಕಾ ಅವರು ಸೂರಜ್​ನ ಬಟ್ಟೆಯನ್ನು ಸ್ವಿಮಿಂಗ್​ಪೂಲ್​ಗೆ ಹಾಕಿದರು. ಆ ಬಳಿಕ ಸಿಟ್ಟಾದರು ಸೂರಜ್.

ಸ್ವಿಮ್ಮಿಂಗ್ ಪೂಲ್ ಬಳಿ ‘ನಾನು ಬಂದಾಗ ನನ್ನ ಜೊತೆ, ಬೇರೆಯವರು ಬಂದಾಗ ಮತ್ತೊಬ್ಬರ ಜೊತೆ ಇರ್ತಾರೆ’ ಎಂಬ ಮಾತನ್ನು ಹೇಳಿದ್ದರು. ಅಲ್ಲದೆ, ‘ರಾಶಿಕಾ ಮಾತನಾಡಿದ್ದು ಇಷ್ಟ ಆಗಿಲ್ಲ’ ಎಂದಿದ್ದರು. ಈ ಮಾತು ರಾಶಿಕಾಗೆ ಸಾಕಷ್ಟು ಬೇಸರ ಮೂಡಿಸಿದೆ. ‘ಈ ಮಾತು ಎಷ್ಟು ಸರಿ? ನಾನು ಬಂದಾಗ ನನ್ನ ಜೊತೆ, ಬೇರೆಯವರು ಬಂದಾಗ ಮತ್ತೊಬ್ಬರ ಜೊತೆ ಮಾತಾಡ್ತೀರಲ್ಲ. ನಿಮ್ಮ ಅಕ್ಕ ತಂಗಿ ಇದ್ರೆ ಹೀಗೆ ಮಾತಾಡ್ತೀರಾ’ ಎಂದರು ರಾಶಿಕಾ. ಆ ಬಳಿಕ ಅವರು ಕಣ್ಣೀರು ಹಾಕಿದರು.

ಇದನ್ನೂ ಓದಿ: ವೈಲ್ಡ್ ಕಾರ್ಡ್ ಎಂಟ್ರಿಗಳಿಗೆ ವೈಲ್ಡ್ ಆಗೇ ಕ್ಲಾಸ್ ತೆಗೆದುಕೊಂಡ ಕಿಚ್ಚ ಸೂರಜ್ ಮಾತನಾಡಿದ್ದು ತುಂಬಾನೇ ಕೀಳಾಗಿದೆ ಎಂದು ರಾಶಿಕಾ ಅಭಿಪ್ರಾಯಪಟ್ಟರು. ರಾಶಿಕಾ ಅವರು ಮಾತನಾಡಿದ್ದು ತುಂಬಾನೇ ಚುಚ್​ಚಿದೆ. ಆ ಬಳಿಕ ನಿರಂತರವಾಗಿ ಕಣ್ಣೀರು ಹಾಕಿದರು. ಆ ಬಳಿಕ ಮನೆಯವರೆಲ್ಲ ಬಂದು ಚರ್ಚೆ ಮಾಡುವಂತೆ ಹೇಳಿ ಇಬ್ಬರ ಮಧ್ಯೆ ಸಮಾಧಾನಪಡಿಸಿದರು. ‘ನಾನು ಅಷ್ಟು ಕೆಟ್ಟ ಅರ್ಥದಲ್ಲಿ ಹೇಳಿಲ್ಲ’ ಎಂದರು ಸೂರಜ್. ಆ ಬಳಿಕ ಇಬ್ಬರ ಮಧ್ಯೆ ಸಂಧಾನ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ
ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ
ವಾಣಿಜ್ಯ LPG ಸಿಲಿಂಡರ್ ಬೆಲೆ ಏರಿಕೆ: ಹೋಟೆಲ್ ಊಟ-ತಿಂಡಿ ದರ ಹೆಚ್ಚಾಗುತ್ತಾ?
ವಾಣಿಜ್ಯ LPG ಸಿಲಿಂಡರ್ ಬೆಲೆ ಏರಿಕೆ: ಹೋಟೆಲ್ ಊಟ-ತಿಂಡಿ ದರ ಹೆಚ್ಚಾಗುತ್ತಾ?