ವೈಲ್ಡ್ ಕಾರ್ಡ್ ಎಂಟ್ರಿಗಳಿಗೆ ವೈಲ್ಡ್ ಆಗೇ ಕ್ಲಾಸ್ ತೆಗೆದುಕೊಂಡ ಕಿಚ್ಚ
Bigg Boss Kannada 12: ಈ ಸೀಸನ್ನಲ್ಲಿ ವಿಶೇಷವಾಗಿ ರಜತ್ ಬಂದಾಗಿನಿಂದ ಆ ಮಿತಿ ಮೀರಿ ಹೋಗಿದೆ. ಅಶ್ವಿನಿ ಅವರಿಗೆ ‘ಮುದುಕಿ’ ಎನ್ನುವುದು ಸೇರಿದಂತೆ, ಅವಾಚ್ಯ ಬದಗಳ ಬಳಕೆ, ಬೆದರಿಕೆಯ ಭಾಷೆಯ ಬಳಕೆ ಎಲ್ಲ ಹೆಚ್ಚಾಗಿದೆ. ಈ ಬಗ್ಗೆ ಅಶ್ವಿನಿ ಅವರು ಶನಿವಾರದ ಎಪಿಸೋಡ್ನಲ್ಲಿ ಸುದೀಪ್ ಎದುರು ದೂರು ಹೇಳಿದರು. ದೂರು ಹೇಳುವಾಗ ತುಸು ಭಾವುಕರೂ ಸಹ ಆದರು ಅಶ್ವಿನಿ. ಧ್ರುವಂತ್ ಸಹ ರಜತ್, ದುವರ್ತನೆ ಬಗ್ಗೆ ದೂರು ಹೇಳಿದರು.

ಈ ವಾರ ಬಿಗ್ಬಾಸ್ (Bigg Boss) ಮನೆಯಲ್ಲಿ ಸಾಕಷ್ಟು ಜಗಳ ನಡೆದಿದೆ. ಜಗಳಗಳು ಬಿಗ್ಬಾಸ್ ಮನೆಯಲ್ಲಿ ಸಾಮಾನ್ಯವಾದರೂ ಸಹ ಜಗಳ ಮಾಡುವಾಗಲೂ ಸಹ ಎದುರಿರುವವರ ವಯಸ್ಸು, ವ್ಯಕ್ತಿತ್ವವನ್ನು ಗಣನೆಗೆ ತೆಗೆದುಕೊಂಡು ಜಗಳ ಮಾಡಬೇಕಾಗುತ್ತದೆ. ಬಿಗ್ಬಾಸ್ನ ಹಲವು ಸೀಸನ್ನಲ್ಲಿ ಸ್ಪರ್ಧಿಗಳು ವಯಸ್ಸು, ವ್ಯಕ್ತಿತ್ವದ ಮಿತಿಯಲ್ಲಿಯೇ ಜಗಳ ಮಾಡಿದ್ದಾರೆ ಆದರೆ ಈ ಸೀಸನ್ನಲ್ಲಿ ವಿಶೇಷವಾಗಿ ರಜತ್ ಬಂದಾಗಿನಿಂದ ಆ ಮಿತಿ ಮೀರಿ ಹೋಗಿದೆ. ಅಶ್ವಿನಿ ಅವರಿಗೆ ‘ಮುದುಕಿ’ ಎನ್ನುವುದು ಸೇರಿದಂತೆ, ಅವಾಚ್ಯ ಬದಗಳ ಬಳಕೆ, ಬೆದರಿಕೆಯ ಭಾಷೆಯ ಬಳಕೆ ಎಲ್ಲ ಹೆಚ್ಚಾಗಿದೆ. ಈ ಬಗ್ಗೆ ಅಶ್ವಿನಿ ಅವರು ಶನಿವಾರದ ಎಪಿಸೋಡ್ನಲ್ಲಿ ಸುದೀಪ್ ಎದುರು ದೂರು ಹೇಳಿದರು. ದೂರು ಹೇಳುವಾಗ ತುಸು ಭಾವುಕರೂ ಸಹ ಆದರು ಅಶ್ವಿನಿ. ಧ್ರುವಂತ್ ಸಹ ರಜತ್, ದುವರ್ತನೆ ಬಗ್ಗೆ ದೂರು ಹೇಳಿದರು.
ಇಬ್ಬರೂ ದೂರು ಹೇಳಿದ ಬಳಿಕ ಸುದೀಪ್ ತಮಗೆ ಏನೂ ಕೇಳಲೇ ಇಲ್ಲವೇನೋ ಎಂಬಂತೆ ಇದ್ದರು, ದೂರು ಹೇಳುತ್ತಿದ್ದಂತೆ ಸುದೀಪ್ ಬೇರೆ ಏನೋ ವಿಷಯ ಪ್ರಾರಂಭಿಸಿದರು. ಆದರೆ ಸುದೀಪ್ ಅವರು ನೇರವಾಗಿ ಅಶ್ವಿನಿ, ಧ್ರುವಂತ್ ಹೇಳಿದ ದೂರುಗಳನ್ನು ಪ್ರಸ್ತಾಪಿಸದೆ, ಮೊದಲು ಟಾಸ್ಕ್ ವಿಷಯ ಮಾತನಾಡಿದರು. ಅಲ್ಲಿಂದ ಆರಂಭ ಮಾಡಿದರು. ಅಂತಿಮವಾಗಿ ದೂರಿನತ್ತ ಬಂದರು. ದೂರು ಹೇಳುವವರು ಭಾವುಕರಾಗಿ ದೂರು ಹೇಳಿದರೂ ಸಹ ಸುದೀಪ್ ಅವರು ಸಮಚಿತ್ತದಿಂದ, ಜಾಗೃತೆಯಿಂದ ವಿಷಯ ವಿಮರ್ಶೆ ಮಾಡಿದರು.
ಮೊದಲಿಗೆ ಟಾಸ್ಕ್ ವಿಷಯ ಮಾತನಾಡಿದ ಕಿಚ್ಚ, ಚೈತ್ರಾ ಅವರು ಮಾಡಿದ ತಪ್ಪುಗಳನ್ನು ಎತ್ತಿ ತೋರಿಸಿದರು. ಅಲ್ಲದೆ, ಚೈತ್ರಾ ಅವರು ಮನೆಯಲ್ಲಿ ಈ ವಾರ ‘ಕರ್ನಾಟಕ ನೋಡುತ್ತಿದೆ’ ಎಂದೆಲ್ಲ ಪದೇ ಪದೇ ಬಳಕೆ ಮಾಡಿದ್ದರು, ಸುದೀಪ್ ಅವರು ಸಹ ಅದೇ ವಾಕ್ಯ ಬಳಸಿ ಚೈತ್ರಾ ಅವರ ವರ್ತನೆಯನ್ನು ವಿಮರ್ಶೆಗೆ ಒಳಪಡಿಸಿದರು. ‘ನಿಮ್ಮಿಬ್ಬರನ್ನು (ರಜತ್-ಚೈತ್ರಾ) ಸ್ಪರ್ಧಿಗಳಾಗಿ ಕಳಿಸಿರುವುದಾ ಅಥವಾ ಒಂದು ಯೂನಿಟ್ ಆಗಿ ಕಳಿಸಿ, ಒಟ್ಟಿಗೆ ಆಟ ಆಡಿ ಎಂದಿರುವುದಾ? ಹೊರಗಡೆಯೂ ಸಹ ಜನ ಹೀಗೆಯೇ ಮಾತನಾಡುತ್ತಿದ್ದಾರೆ’ ಎಂದರು ಸುದೀಪ್.
ಇದನ್ನೂ ಓದಿ:ರಜತ್ ದುರ್ವರ್ತನೆ ಬಗ್ಗೆ ದೂರಿನ ಸರಮಾಲೆ: ಇದು ಅತಿಯಾಯ್ತೆ?
ಚೈತ್ರಾ ಅವರ ಟಾಸ್ಕ್ ವಿಷಯ, ಉಸ್ತುವಾರಿ ವಹಿಸಿದ್ದ ರೀತಿ, ಉಸ್ತುವಾರಿ ವಹಿಸಿದ್ದ ಮಾಡಿದ ತಪ್ಪುಗಳ ಬಗ್ಗೆ ಮಾತನಾಡಿದ ಬಳಿಕ ಸುದೀಪ್ ಅವರು ರಜತ್ ಕಡೆಗೆ ಬಂದರು. ರಜತ್ ಅವರಿಗೆ ಸಮಾಧಾನಕರವಾದ ಭಾಷೆಯಲ್ಲಿಯೇ ಅವರ ವರ್ತನೆಯನ್ನು ಟೀಕೆ ಮಾಡಿದರು. ಅವರ ವರ್ತನೆ, ಎದುರಿಗೆ ಇರುವವರಿಗೆ ಎಷ್ಟು ನೋವು ಉಂಟು ಮಾಡಬಹುದು ಎಂಬುದನ್ನು ಬಿಡಿಸಿ ಹೇಳಿದರು. ‘ನೀವು ಎಂಥೆಥ ಮಾತುಗಳನ್ನು ಆಡಿದ್ದೀರಿ ಎಂದರೆ, ಅದರ ಬಗ್ಗೆ ನಾನು ಮಾತನಾಡಬೇಕು ಎಂದರೆ ನಾನು ಈಗ ಅದೇ ಮಾತುಗಳನ್ನು ಹೇಳಬೇಕಾಗುತ್ತದೆ. ಈಗ ನಾನು ಅವನ್ನು ಹೇಳಬೇಕಾ? ಹೇಳಲು ಸಹ ಆಗದಷ್ಟು ಕೆಟ್ಟ ಭಾಷೆ ಬಳಸಿದ್ದೀರಿ’ ಎಂದರು ಸುದೀಪ್.
‘ಕಳೆದ ಸೀಸನ್ನಲ್ಲಿಯೂ ಸಹ ಇದೇ ವಿಷಯಕ್ಕೆ ನಿಮ್ಮೊಂದಿಗೆ ನಾನು ಗಟ್ಟಿಯಾಗಿ ಮಾತನಾಡಿದ್ದೇನೆ. ಈ ಸೀಸನ್ನಲ್ಲಿ ಸೆಡೆ ಎಂಬ ಪದ ಬಂದಿದ್ದಕ್ಕೆ ನಾನು ಸುಧಿ ಅವರನ್ನು ಟೀಕೆ ಮಾಡಿದ್ದೀನಿ, ಅದನ್ನು ನೀವೂ ಸಹ ನೋಡಿದ್ದೀರಿ, ಆದರೂ ಮತ್ತೊಮ್ಮೆ ನೀವು ಅದೇ ಪದವನ್ನು ಬಳಸಿದ್ದೀರಿ, ಅದಕ್ಕಿಂತಲೂ ಹೆಚ್ಚಿನ ಪದಗಳನ್ನು ಬಳಸಿದ್ದೀರಿ. ಇನ್ನು ಧ್ರುವಂತ್ ಅವರು ಯಾವುದೊ ಒಂದು ಪದ ಬಳಸಿದ್ದರು, ಅದರ ಬಗ್ಗೆ ಚರ್ಚೆ ಮಾಡಿದ್ದು ಸಹ ಆಯ್ತು, ಆದರೆ ನೀವು ಉದ್ದೇಶಪೂರ್ವಕವಾಗಿ ಅದನ್ನು ಕ್ಯಾರಿ ಫಾರ್ವರ್ಡ್ ಮಾಡುತ್ತಿದ್ದೀರಿ’ ಎಂದರು ಸುದೀಪ್.
ಸುದೀಪ್ ಅವರ ಬುದ್ಧಿ ಮಾತು ಕೇಳಿದ ಬಳಿಕ, ‘ಇನ್ನು ಮುಂದೆ ನಾನು ಹಾಗೆ ಮಾತನಾಡುವುದಿಲ್ಲ. ನಾನು ಸಾಕಷ್ಟು ಶಾಂತವಾಗಿಯೇ ಇದ್ದೆ, ಆದರೆ ಆ ಕ್ಷಣದಲ್ಲಿ ನನ್ನಿಂದ ತಡೆದುಕೊಳ್ಳಲು ಆಗದೆ ಮಾತನಾಡಿಬಿಟ್ಟೆ’ ಎಂದರು ರಜತ್. ಸುದೀಪ್ ಅವರ ಬುದ್ಧಿವಾದದ ಬಳಿಕವಾದರೂ ರಜತ್ ತಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರಾ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:30 pm, Sat, 13 December 25




