AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜತ್ ದುರ್ವರ್ತನೆ ಬಗ್ಗೆ ದೂರಿನ ಸರಮಾಲೆ: ಇದು ಅತಿಯಾಯ್ತೆ?

Bigg Boss Kannada 12: ಈ ಸೀಸನ್​​ನಲ್ಲಿಯೂ ಸಹ ರಜತ್ ತಮ್ಮ ‘ರೌಡಿ ರೀತಿ’ ವರ್ತನೆಯನ್ನು ಮುಂದುವರೆಸಿದ್ದಾರೆ. ವೈಲ್ಡ್​ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಾಗಿನಿಂದಲೂ ರಜತ್ ಮನೆಯ ಕೆಲ ಸದಸ್ಯರ ಮೇಲೆ ಜಗಳ ಮಾಡುತ್ತಲೇ ಇದ್ದಾರೆ. ಜಗಳದ ಸಮಯದಲ್ಲಿಯೂ ಸಹ ಅನವಶ್ಯಕ ಹೀಗಳೆಯುವಿಕೆ, ಕೆಟ್ಟ ಪದಗಳ ಬಳಕೆ, ಕನಿಷ್ಟ ಗೌರವ ಇಲ್ಲದಂತೆ ಮಾತನಾಡುವುದು ಮಾಡುತ್ತಲೇ ಇದ್ದರು. ಅದು ಈ ವಾರ ಎಲ್ಲೆ ಮೀರಿ ಹೋಗಿದೆ. ಇದೇ ಕಾರಣಕ್ಕೆ ಅಶ್ವಿನಿ ಮತ್ತು ಧ್ರುವಂತ್ ಅವರು ಸುದೀಪ್ ಎದುರು ರಜತ್, ದುರ್ವರ್ತನೆ ಬಗ್ಗೆ ಸರಣಿ ದೂರುಗಳನ್ನು ಹೇಳಿದರು.

ರಜತ್ ದುರ್ವರ್ತನೆ ಬಗ್ಗೆ ದೂರಿನ ಸರಮಾಲೆ: ಇದು ಅತಿಯಾಯ್ತೆ?
Bigg Boss Kannada 12
ಮಂಜುನಾಥ ಸಿ.
|

Updated on: Dec 13, 2025 | 10:58 PM

Share

ಬಿಗ್​​ಬಾಸ್ 12 (Bigg Boss 12) ಮನೆಗೆ ರಜತ್ ಮತ್ತು ಚೈತ್ರಾ ಕುಂದಾಪುರ ಅವರುಗಳು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದುಕೊಂಡು ಬಂದಿದ್ದಾರೆ. ರಜತ್, ಕಳೆದ ಬಾರಿಯೂ ರಜತ್ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಆಗಿದ್ದರು. ಕಳೆದ ಬಾರಿಯೂ ಸಹ ರಜತ್ ತಮ್ಮ ಆಕ್ರಮಣಕಾರಿ ಮಾತು, ಆಕ್ರಮಣಕಾರಿ ವರ್ತನೆ, ಒಣ ಬೆದರಿಕೆಗಳು, ಕೆಟ್ಟ ಪದಗಳ ಬಳಕೆಯಿಂದಾಗಿ ಸುದೀಪ್ ಅವರಿಗೆ ಬೈಸಿಕೊಂಡಿದ್ದರು. ಆದರೆ ಒಂದು ಸೀಸನ್ ಕಳೆದರೂ ಸಹ ಅವರು ಬುದ್ಧಿ ಕಲಿತಂತಿಲ್ಲ.

ಈ ಸೀಸನ್​​ನಲ್ಲಿಯೂ ಸಹ ರಜತ್ ತಮ್ಮ ‘ರೌಡಿ ರೀತಿ’ ವರ್ತನೆಯನ್ನು ಮುಂದುವರೆಸಿದ್ದಾರೆ. ವೈಲ್ಡ್​ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಾಗಿನಿಂದಲೂ ರಜತ್ ಮನೆಯ ಕೆಲ ಸದಸ್ಯರ ಮೇಲೆ ಜಗಳ ಮಾಡುತ್ತಲೇ ಇದ್ದಾರೆ. ಜಗಳದ ಸಮಯದಲ್ಲಿಯೂ ಸಹ ಅನವಶ್ಯಕ ಹೀಗಳೆಯುವಿಕೆ, ಕೆಟ್ಟ ಪದಗಳ ಬಳಕೆ, ಕನಿಷ್ಟ ಗೌರವ ಇಲ್ಲದಂತೆ ಮಾತನಾಡುವುದು ಮಾಡುತ್ತಲೇ ಇದ್ದರು. ಅದು ಈ ವಾರ ಎಲ್ಲೆ ಮೀರಿ ಹೋಗಿದೆ. ಇದೇ ಕಾರಣಕ್ಕೆ ಅಶ್ವಿನಿ ಮತ್ತು ಧ್ರುವಂತ್ ಅವರು ಸುದೀಪ್ ಎದುರು ರಜತ್, ದುರ್ವರ್ತನೆ ಬಗ್ಗೆ ಸರಣಿ ದೂರುಗಳನ್ನು ಹೇಳಿದರು.

ಮೊದಲು ಮಾತನಾಡಿದ ಅಶ್ವಿನಿ, ರಜತ್ ವರ್ತಿಸುವ ರೀತಿ, ಆಡುವ ಮಾತುಗಳು, ಹೆಣ್ಣು ಮಕ್ಕಳ ಬಗ್​ಗೆ ನಡೆದುಕೊಳ್ಳುವ ರೀತಿಯ ಬಗ್ಗೆ ದೂರು ಹೇಳಿದರು. ರಜತ್ ಅನ್ನು ಮೊದಲಿಗೆ ಸ್ಟುಪಿಡ್ ಎಂದು ಕರೆದ ಅಶ್ವಿನಿ, ಸುದೀಪ್ ಆಕ್ಷೇಪಣೆಯಿಂದಾಗಿ ಕ್ಷಮೆ ಕೇಳಿದರು. ಆದರೆ ಬಳಿಕ ಅವಕಾಶ ದೊರೆತಾದ ರಜತ್ ಆಡುವ ಮಾತು, ನಡೆದುಕೊಳ್ಳುವ ರೀತಿಯ ಬಗ್ಗೆ ಉದಾಹರಣೆ ಸಹಿತ ಸುದೀಪ್ ಅವರ ಮುಂದೆ ಹೇಳಿದರು. ‘ಮುದುಕಿಯನ್ನು ಹೊಡೆಯುತ್ತೀನಿ ಸುಬ್ಬಿ’ ಎಂದು ಹೇಳಿದ್ದನ್ನು ಸಹ ಬಹಳ ನೋವಿನಿಂದಲೇ ಅಶ್ವಿನಿ ಹೇಳಿಕೊಂಡರು.

ಇದನ್ನೂ ಓದಿ:ತೆಲುಗು ಬಿಗ್​​ಬಾಸ್ ಫಿನಾಲೆ ತಲುಪಿದ ಕನ್ನಡತಿ ತನುಜಾ

‘ಈ ಮನೆಯ ಸದಸ್ಯರು ಜಗಳ ಮಾಡಿದ್ದಾರೆ, ಏಕವಚನದಲ್ಲಿ ಮಾತನಾಡಿದ್ದಾರೆ, ಆದರೆ ರಜತ್ ಅಷ್ಟು ನೀಚವಾಗಿ, ಅವಾಚ್ಯವಾಗಿ, ಅಗೌರವವಾಗಿ ಮಾತನಾಡಿದ್ದು ಇಲ್ಲ’ ಎಂದು ಅಶ್ವಿನಿ, ತುಸು ಭಾವುಕರಾಗಿ, ‘ರಜತ್ ಅಷ್ಟು ಕಳಪೆ ಇನ್ಯಾರೂ ಇಲ್ಲ ಎಂಬುದನ್ನು ನಾನು ಎದೆ ತಟ್ಟಿಕೊಂಡು ಹೇಳುತ್ತೀನಿ’ ಎಂದರು. ಬಳಿಕ ಮಾತನಾಡಿದ ಧ್ರುವಂತ್, ಸಹ ತಮ್ಮದೇ ಶೈಲಿಯಲ್ಲಿ ರಜತ್ ಅವರ ದುರ್ವರ್ತನೆಯನ್ನು ದೂರಿದರು. ಅಸಲಿಗೆ ನೋಡಿದರೆ ಕಳೆದ ವರ್ಷ ರಜತ್ ಬಗ್ಗೆ ಬರುತ್ತಿದ್ದ ದೂರುಗಳು ಈ ವರ್ಷವೂ ಬರುತ್ತಿವೆ, ಒಂದು ವರ್ಷದಲ್ಲಿ ಅವರ ವರ್ತನೆಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ