ಕೈ-ಕೈ ಮಿಲಾಸಿಯಿಸಿದ ಬಿಗ್ಬಾಸ್ ಸ್ಪರ್ಧಿಗಳು, ಭಾರಿ ಹೊಡೆದಾಟ
Bigg Boss: ಬಿಗ್ಬಾಸ್ ಮನೆಯಲ್ಲಿ ಜಗಳಗಳು ನಡೆಯುವುದು ತೀರಾ ಸಾಮಾನ್ಯ. ಆದರೆ ನಿಯಮದ ಪ್ರಕಾರ ಯಾವ ಸ್ಪರ್ಧಿಯೂ ಸಹ ಮತ್ತೊಬ್ಬ ಸ್ಪರ್ಧಿಯ ಮೇಲೆ ಕೈ ಮಾಡುವಂತಿಲ್ಲ. ಆಗೊಮ್ಮೆ ಕೈ ಮಾಡಿದರೆ ಮನೆಯಿಂದ ಎಲಿಮಿನೇಟ್ ಮಾಡಲಾಗುತ್ತದೆ. ಆದರೆ ಇದೀಗ ಬಿಗ್ಬಾಸ್ ಮನೆಯಲ್ಲಿ ಭಾರಿ ಗಲಾಟೆಯೇ ನಡೆದಿದೆ. ಇಬ್ಬರು ಸ್ಪರ್ಧಿಗಳು ಬೀದಿ ರೌಡಿಗಳಂತೆ ಹೊಡೆದಾಡಿಕೊಂಡಿದ್ದಾರೆ.

ಬಿಗ್ಬಾಸ್ (Bigg Boss) ಮನೆಯಲ್ಲಿ ಜಗಳ ಸಾಮಾನ್ಯ ಆದರೆ, ಬಿಗ್ಬಾಸ್ ಮನೆಗೆ ಹೋಗುವ ಮುಂಚೆಯೇ ಸ್ಪರ್ಧಿಗಳಿಗೆ ಷರತ್ತು ವಿಧಿಸಲಾಗಿರುತ್ತದೆ, ಯಾರೂ ಸಹ ಯಾರ ಮೇಲೂ ಸಹ ಹಲ್ಲೆ ಮಾಡಬಾರದು, ಕೈ ಎತ್ತಬಾರದು ಎಂದು. ಒಂದೊಮ್ಮೆ ಹೀಗೆ ಯಾರ ವಿರುದ್ಧವಾದರೂ ಕೈ ಎತ್ತಿದರೆ ಕೂಡಲೇ ಆ ಸ್ಪರ್ಧಿಯನ್ನು ಎಲಿಮಿನೇಟ್ ಮಾಡಲಾಗುತ್ತದೆ. ಕನ್ನಡ ಶೋನಲ್ಲಿ ಈ ಹಿಂದೆ ಹೀಗೆ ಸಹ ಸ್ಪರ್ಧಿಯ ಮೇಲೆ ಕೈ ಮಾಡಿದವರನ್ನು ಎಲಿಮಿನೇಟ್ ಮಾಡಲಾಗಿದೆ. ಆದರೆ ಇದೀಗ ಮತ್ತೊಮ್ಮೆ ಇಂಥಹುದೇ ಒಂದು ಘಟನೆ ನಡೆದಿದೆ, ಆದರೆ ಕನ್ನಡ ಬಿಗ್ಬಾಸ್ನಲ್ಲಿ ಅಲ್ಲ ಬದಲಿಗೆ ತಮಿಳು ಬಿಗ್ಬಾಸ್ನಲ್ಲಿ.
ತಮಿಳು ಬಿಗ್ಬಾಸ್ ಸೀಸನ್ 09 ನಡೆಯುತ್ತಿದ್ದು, ಶೋ ಪ್ರಾರಂಭವಾಗಿ ಐದು ವಾರಗಳಾಗಿವೆ. ಮನೆಯಲ್ಲಿ ಹೆಚ್ಚಿನ ಸಂಖ್ಯೆಯ ಸದಸ್ಯರು ಇದ್ದಾರೆ. ಇದೀಗ ಇಬ್ಬರು ಸ್ಪರ್ಧಿಗಳ ಮಧ್ಯೆ ಜಗಳ ಶುರುವಾಗಿದ್ದು ಈ ಜಗಳದಲ್ಲಿ ಇನ್ನೂ ಕೆಲವು ಮಂದಿ ಪಾಲ್ಗೊಳ್ಳುವ ಮೂಲಕ ದೊಡ್ಡ ಗಲಾಟೆಯಾಗಿ ಮಾರ್ಪಟ್ಟಿದೆ ಇಬ್ಬರು ಸ್ಪರ್ಧಿಗಳು ಪರಸ್ಪರ ಕೈ-ಕೈ ಮಿಲಾಯಿಸಿದ್ದು, ಒಬ್ಬರ ತಲೆಗೆ ಪೆಟ್ಟು ಬಿದ್ದಿದೆ.
ಇದನ್ನೂ ಓದಿ:ಡೆವಿಲ್ ಸಿನಿಮಾದಲ್ಲಿ ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟ
ತಮಿಳು ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳಾದ ಕಮುರುದ್ಧೀನ್ ಮತ್ತು ಪ್ರವೀಣ್ ರಾಜ್ ವಿರುದ್ಧ ಜಗಳ ಉಂಟಾಗಿದೆ. ಬಿಡುಗಡೆ ಆಗಿರುವ ಪ್ರೋಮೋನಲ್ಲಿ ತೋರಿಸಿರುವಂತೆ, ಪ್ರವೀಣ್ ಯಾವುದೋ ವಿಚಾರಕ್ಕೆ ಕಮರುದ್ಧೀನ್ ಗೆ ಟಾಂಗ್ ಕೊಡುತ್ತಿದ್ದರು ಆದರೆ ಇದರಿಂದ ಸಿಟ್ಟಾದ ಕಮುರುದ್ಧೀನ್ ಏಕಾ-ಏಕಿ ಪ್ರವೀಣ್ ಮೇಲೆ ಏರಿ ಬಂದಿದ್ದಾರೆ. ಮೊದಲ ಬಾರಿಗೆ ಇತರೆ ಸ್ಪರ್ಧಿಗಳೆಲ್ಲ ಸೇರಿ ಕಮರುದ್ಧೀನ್ ಅನ್ನು ತಡೆದಿದ್ದಾರಾದರೂ ಬಳಿಕ ಪ್ರವೀಣ್ ಸಹ ಮುಂದೆ ಬಂದು ಕಮರುದ್ಧೀನ್ಗೆ ಒದೆಯಲು ಯತ್ನಿಸಿದ್ದಾರೆ. ಆಗ ಕಮರುದ್ಧೀನ್ ಕೈ ಬೀಸಿ ಪ್ರವೀಣ್ ಮುಖಕ್ಕೆ ಹೊಡೆದಿದ್ದಾರೆ. ಏಟಿನ ರಭಸಕ್ಕೆ ಪ್ರವೀಣ್ ನೆಲಕ್ಕೆ ಬಿದ್ದಿದ್ದಾರೆ.
#Day30 #Promo1 of #BiggBossTamil
Bigg Boss Tamil Season 9 – இன்று இரவு 9:30 மணிக்கு நம்ம விஜய் டிவில.. #BiggBossTamilSeason9 #OnnumePuriyala #BiggBossSeason9Tamil #BiggBoss9 #BiggBossSeason9 #VijaySethupathi #BiggBossTamil #BB9 #BiggBossSeason9 #VijayTV #VijayTelevision pic.twitter.com/jrFCHSPK8j
— Vijay Television (@vijaytelevision) November 4, 2025
ಈ ಜಗಳದಲ್ಲಿ ಇತರೆ ಕೆಲ ಸ್ಪರ್ಧಿಗಳು ಸಹ ಪರಸ್ಪರ ಎಳೆದಾಡಿರುವುದು ಪ್ರೋಮೊನಲ್ಲಿ ಕಾಣಿಸಿದೆ ಮಾತ್ರವಲ್ಲದೆ ಕಮುರುದ್ಧೀನ್ ಅವರ ಧರಿಸಿದ್ದ ಅಂಗಿಯನ್ನು ಸಹ ಹರಿಯಲಾಗಿದೆ. ಆದರೆ ಇಬ್ಬರ ನಡುವೆ ಸ್ಪಷ್ಟವಾಗಿ ಯಾವ ಕಾರಣಕ್ಕೆ ಜಗಳ ಶುರುವಾಗಿದೆ ಎಂಬುದು ಪ್ರೋಮೋದಿಂದ ತಿಳಿದು ಬಂದಿಲ್ಲ. ವಿಜಯ್ ಸೇತುಪತಿ ಈ ಶೋನ ನಿರೂಪಕರಾಗಿದ್ದು, ಈ ಇಬ್ಬರ ಜಗಳದ ಬಗ್ಗೆ ಅವರ ವ್ಯಾಖ್ಯೆ ಏನಿರಲಿದೆ ಎಂಬುದು ಶನಿವಾರ ತಿಳಿಯಲಿದೆ.
ತಮಿಳು ಬಿಗ್ಬಾಸ್ ಮನೆಯಲ್ಲಿ ಪ್ರಸ್ತುತ 20 ಮಂದಿ ಸ್ಪರ್ಧಿಗಳಿದ್ದಾರೆ. ಇತ್ತೀಚೆಗಷ್ಟೆ ನಾಲ್ಕು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ನಾಮಿನೇಷನ್ ಸಹ ಈ ಬಾರಿ ಜೋರಾಗಿ ಆಗಿದೆ. ಬರೋಬ್ಬರಿ 12 ಮಂದಿ ನಾಮಿನೇಟ್ ಆಗಿದ್ದಾರೆ. ನಾಮಿನೇಟ್ ಆದವರಲ್ಲಿ ಪ್ರವೀಣ್ ಮತ್ತು ಕಮರುದ್ಧೀನ್ ಸಹ ಇದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




