
ಕನ್ನಡ ಬಿಗ್ ಬಾಸ್ ಸೀಸನ್ 8ಕ್ಕೆ ಇತ್ತೀಚೆಗಷ್ಟೇ ತೆರೆಬಿದ್ದಿದೆ. ಮಂಜು ಪಾವಗಡ ಅವರು ಬಿಗ್ ಬಾಸ್ ಟ್ರೋಫಿ ಎತ್ತಿ ಹಿಡಿದಿರುವುದು ಅವರ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ. ಮುಂದಿನ ಸೀಸನ್ ಆದಷ್ಟು ಬೇಗ ಶುರುವಾಗಲಿ ಎಂದು ವೀಕ್ಷಕರು ಕಾಯುತ್ತಿದ್ದಾರೆ. ಹೊಸ ಸೀಸನ್ನಲ್ಲೂ ಕಿಚ್ಚ ಸುದೀಪ್ (Kichcha Sudeep) ಅವರೇ ನಿರೂಪಣೆ ಮಾಡಲಿದ್ದಾರೆ. ಆದರೆ ಬೇರೆ ಭಾಷೆಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಿರೂಪಕರ ಆಯ್ಕೆ ಬಗ್ಗೆ ವೀಕ್ಷಕರಿಗೆ ಕಿರಿಕಿರಿ ಎನಿಸಿದೆ. ತೆಲುಗು ಬಿಗ್ ಬಾಸ್ಗೆ ಜ್ಯೂ. ಎನ್ಟಿಆರ್, ನಾನಿ ಮತ್ತು ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಅವರು ಹೋಸ್ಟ್ ಆಗಿ ಕೆಲಸ ಮಾಡಿದ್ದರು. ಹೊಸ ಸೀಸನ್ನಲ್ಲಿ ದಯವಿಟ್ಟು ನಿರೂಪಕರನ್ನು ಬದಲಾಯಿಸಿ ಎಂಬ ಕೂಗು ವೀಕ್ಷಕರ ವಯಲದಿಂದ ಕೇಳಿಬರುತ್ತಿದೆ.
ಈವರೆಗೂ ತೆಲುಗು ಬಿಗ್ ಬಾಸ್ ಕಾರ್ಯಕ್ರಮವು 4 ಸೀಸನ್ಗಳನ್ನು ಪೂರ್ಣಗೊಳಿಸಿದೆ. 5ನೇ ಸೀಸನ್ಗೆ ಸಿದ್ಧತೆಗಳು ನಡೆದಿವೆ. ಮೂರು ಮತ್ತು ನಾಲ್ಕನೇ ಸೀಸನ್ಗೆ ನಿರೂಪಕರಾಗಿದ್ದ ನಾಗಾರ್ಜುನ ಅವರೇ 5ನೇ ಸೀಸನ್ನಲ್ಲೂ ಮುಂದುವರಿಯಲಿದ್ದಾರೆ ಎಂಬುದು ಖುಚಿತವಾಗಿದೆ. ಆ.14ರಂದು ಹೊಸ ಸೀಸನ್ನ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಅದನ್ನು ಕಂಡು ವೀಕ್ಷಕರು ನಿರಾಶರಾಗಿದ್ದಾರೆ.
ಒಂದು ವರ್ಗದ ವೀಕ್ಷಕರಿಗೆ ನಾಗಾರ್ಜುನ ನಿರೂಪಣೆ ಮಾಡುವ ಶೈಲಿ ಇಷ್ಟವಾಗಿಲ್ಲ. ಹಾಗಾಗಿ ಈ ಬಾರಿ ದಯವಿಟ್ಟು ನಾಗಾರ್ಜುನ ಬಿಗ್ ಬಾಸ್ ನಿರೂಪಣೆ ಮಾಡುವುದು ಬೇಡ ಎಂದು ಕೆಲವರು ಪಟ್ಟು ಹಿಡಿದಿದ್ದಾರೆ. ಪ್ರೋಮೋದಲ್ಲಿ ನಾಗಾರ್ಜುನ ಅವರನ್ನು ಕಂಡ ಅನೇಕರು ಕಮೆಂಟ್ಗಳ ಮೂಲಕ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ಅವರ ಬದಲಿಗೆ ದಯವಿಟ್ಟು ನಟ ನಾನಿ ಅವರನ್ನು ಕರೆತನ್ನಿ ಎಂಬ ಒತ್ತಾಯ ಕೇಳಿಬರುತ್ತಿದೆ. ಆದರೆ ಈಗಾಗಲೇ ನಾಗಾರ್ಜುನ ಜೊತೆ ‘ಸ್ಟಾರ್ ಮಾ’ ಮಾಹಿನಿ ಒಪ್ಪಂದ ಮಾಡಿಕೊಂಡಿರುವುದರಿಂದ 5ನೇ ಸೀಸನ್ನಲ್ಲೂ ಅವರೇ ನಿರೂಪಕರಾಗಿ ಮುಂದುವರಿಯಲಿದ್ದಾರೆ.
ತಮ್ಮ ಸಿನಿಮಾಗಳ ಶೂಟಿಂಗ್ ಇದ್ದಾಗ ನಾಗಾರ್ಜುನ ಅವರು ಬಿಗ್ ಬಾಸ್ ನಿರೂಪಣೆಗೆ ಚಕ್ಕರ್ ಹಾಕುತ್ತಾರೆ. ಮೂರು ಮತ್ತು ನಾಲ್ಕನೇ ಸೀಸನ್ನಲ್ಲಿ ಅದೇ ರೀತಿ ಆಗಿತ್ತು. ಆಗ ಅವರ ಬದಲಿಗೆ ಒಮ್ಮೆ ರಮ್ಯಾ ಕೃಷ್ಣ ಹಾಗೂ ಇನ್ನೊಮ್ಮೆ ಸಮಂತಾ ಅಕ್ಕಿನೇನಿ ಬಂದು ನಿರೂಪಣೆ ಮಾಡಿದ್ದರು. ಈ ಬಾರಿ ಕೂಡ ಅದು ಮರುಕಳಿಸಿದರೆ ಅಚ್ಚರಿ ಏನಿಲ್ಲ.
ಇದನ್ನೂ ಓದಿ:
ಕಿಚ್ಚ ಸುದೀಪ್ ಹೆಸರು ಹೇಳಿಕೊಂಡು ಹಣ ಲೂಟಿ; ಸಿಕ್ಕಿ ಬಿದ್ದ ಇಬ್ಬರು ಖದೀಮರು
‘ಮಂಜು ತಂದೆ-ತಾಯಿ ಬಳಿ ಮದುವೆ ಬಗ್ಗೆ ಮಾತಾಡಿದ್ದೇನೆ’; ಎಲ್ಲರ ಮುಂದೆ ವಿಷಯ ತಿಳಿಸಿದ ದಿವ್ಯಾ ಸುರೇಶ್