ಮಚ್ಚಿನ ಕೇಸ್​ ಬಳಿಕ ‘ಬಾಯ್ಸ್ vs ಗರ್ಲ್ಸ್’ ಶೋಗೆ ರಜತ್ ಹಾಜರ್; ವಿನಯ್ ಗೌಡ ಅಬ್ಸೆಂಟ್

|

Updated on: Apr 04, 2025 | 12:08 PM

‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಲ್ಲಿ ಮಚ್ಚು ಪ್ರಕರಣದಲ್ಲಿ ಭಾಗಿಯಾಗಿದ್ದ ರಜತ್ ಮತ್ತೆ ಕಾಣಿಸಿಕೊಂಡಿದ್ದಾರೆ. ಆದರೆ, ವಿನಯ್ ಗೌಡ ಅವರ ಅನುಪಸ್ಥಿತಿ ಕುತೂಹಲ ಮೂಡಿಸಿದೆ. ಮಚ್ಚು ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಇಬ್ಬರೂ ಜಾಮೀನು ಪಡೆದ ನಂತರ ಶೋಗೆ ಮರಳಿದ್ದಾರೆ. ವಿನಯ್ ಅವರ ಅನುಪಸ್ಥಿತಿಯ ಕಾರಣ ಅಸ್ಪಷ್ಟವಾಗಿದೆ.

ಮಚ್ಚಿನ ಕೇಸ್​ ಬಳಿಕ ‘ಬಾಯ್ಸ್ vs ಗರ್ಲ್ಸ್’ ಶೋಗೆ ರಜತ್ ಹಾಜರ್; ವಿನಯ್ ಗೌಡ ಅಬ್ಸೆಂಟ್
ವಿನಯ್ ರಜತ್
Follow us on

‘ಬಾಯ್ಸ್ vs ಗರ್ಲ್ಸ್’ (Boys Vs Girls) ರಿಯಾಲಿಟಿ ಶೋ ಗಮನ ಸೆಳೆಯುತ್ತಿದೆ. ಬಹುತೇಕ ಮಾಜಿ ಬಿಗ್ ಬಾಸ್ ಸ್ಪರ್ಧಿಗಳೇ ಇರುವ ಈ ಶೋ ನಾನಾ ಕಾರಣಗಳಿಂದ ಸದ್ದು ಮಾಡುತ್ತಿದೆ. ಈ ಶೋನ ಸ್ಕಿಟ್ ಒಂದಕ್ಕೆ ರಜತ್ ಅವರು ಮಚ್ಚನ್ನು ಬಳಿಸಿದ್ದರು. ಶೋ ಪೂರ್ಣಗೊಂಡ ಬಳಿಕ ವಿನಯ್ ಹಾಗೂ ರಜತ್ ಮಾಡಿದ್ದ ರೀಲ್ಸ್ ಸಾಕಷ್ಟು ಸಂಚಲನ ಸೃಷ್ಟಿ ಮಾಡಿತ್ತು. ಇವರು ಈ ಪ್ರಕರಣದಲ್ಲಿ ಅರೆಸ್ಟ್ ಕೂಡ ಆಗಬೇಕಾಯಿತು. ಈಗ ಈ ವಾರದ ‘ಬಾಯ್ಸ್ vs ಗರ್ಲ್ಸ್’ ಪ್ರೋಮೋನ ಕಲರ್ಸ್ ಕನ್ನಡ ಹಂಚಿಕೊಂಡಿದೆ. ಆದರೆ, ವಿನಯ್ ಗೌಡ ಅವರ ಅನುಪಸ್ಥಿತಿ ಕಾಣಿಸಿದೆ. ಅತಿಥಿಗಳಾಗಿ ಅದಿತಿ ಪ್ರಭುದೇವ ಹಾಗೂ ನೆನಪಿರಲಿ ಪ್ರೇಮ್ ಬಂದಿದ್ದಾರೆ.

ರಜತ್ ಹಾಗೂ ವಿನಯ್ ಗೌಡ ಅವರು ಸ್ಟುಡಿಯೋ ಹೊರ ಭಾಗದಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಈ ರೀಲ್ಸ್ ಸಾಕಷ್ಟು ವೈರಲ್ ಆಯಿತು. ಈ ಬೆನ್ನಲ್ಲೆ ಪೊಲೀಸರು ಕೇಸ್ ದಾಖಲಿಸಿಕೊಂಡು ಇವರನ್ನು ಬಂಧಿಸಿದರು. ರಜತ್ ಹಾಗೂ ವಿನಯ್ ಬಂಧನದ ಬಳಿಕ ರೀಲ್ಸ್​ಗೆ ಬಳಕೆ ಮಾಡಿದ್ದ ಮಚ್ಚನ್ನು ನೀಡಲಾಯಿತು. ಆದರೆ, ಇದು ರಬ್ಬರ್ ಮಚ್ಚಾಗಿತ್ತು. ರೀಲ್ಸ್​ಗೆ ಬಳಕೆ ಮಾಡಿದ್ದ ನಿಜವಾದ ಮಚ್ಚು ಸಿಗದ ಕಾರಣ ಇವರ ಮೇಲೆ ಸಾಕ್ಷಿ ನಾಶದ ಆರೋಪ ಎದುರಾಗಿದೆ. ಹೀಗಾಗಿ ಕೆಲ ಸಮಯ ಜೈಲಿನಲ್ಲಿ ಕಳೆಯಬೇಕಾಯಿತು. ಈಗ ಜಾಮೀನು ಪಡೆದು ಮತ್ತೆ ಶೂಟ್​ಗೆ ಮರಳಿದ್ದಾರೆ.

ಇದನ್ನೂ ಓದಿ
ಮಹೇಶ್ ಬಾಬು ಕಾರಣಕ್ಕೆ ಶಾಲೆ ಬಂಕ್ ಮಾಡ್ತಾರೆ ಸಿತಾರಾ
‘ಬಜರಂಗಿ ಭಾಯಿಜಾನ್’ ಆಫರ್ ಮೊದಲು ಹೋಗಿದ್ದು ಆಮಿರ್ ಬಳಿ
48ನೇ ವಯಸ್ಸಿಗೆ ತಂದೆಯಾದ ಖ್ಯಾತ ಹಾಸ್ಯ ನಟ; ಕಲಾವಿದನ ಬಾಳಲ್ಲಿ ಖುಷಿಯೋ ಖುಷಿ
ದೇವರ 2 ಚಿತ್ರದ ಶೂಟ್​ಗೆ ರೆಡಿ ಆಯ್ತು ಕುಮಟಾ; ಸಿದ್ಧವಾಗ್ತಿದೆ ಬೃಹತ್ ಸೆಟ್

ಕಳೆದ ವಾರ ವಿನಯ್ ಹಾಗೂ ರಜತ್ ಇಲ್ಲದೆ ‘ಬಾಯ್ಸ್ vs ಗರ್ಲ್ಸ್’ ಶೋ ಶೂಟ್ ಮಾಡಿರಲಿಲ್ಲ. ಶನಿವಾರ ‘ಮಜಾ ಟಾಕೀಸ್’ ಸುದೀರ್ಘ ಸಂಚಿಕೆ ಪ್ರಸಾರ ಮಾಡಿದರೆ, ಭಾನುವಾರ ‘ಭೀಮ’ ಸಿನಿಮಾ ಪ್ರಸಾರ ಕಂಡಿತು. ಈ ಕಾರಣಕ್ಕೆ ‘ಬಾಯ್ಸ್ vs ಗರ್ಲ್ಸ್​’ಗೆ ಯಾವುದೇ ತೊಂದರೆ ಉಂಟಾಗಿಲ್ಲ. ಈ ವಾರ ಶೋ ಮತ್ತೆ ಪ್ರಸಾರ ಕಾಣುತ್ತಿದೆ.

ಇದನ್ನೂ ಓದಿ: ರಜತ್-ವಿನಯ್ ಅಂದರ್ ಆಗಿದ್ದಕ್ಕೆ ಈ ವಾರದ ‘ಬಾಯ್ಸ್ vs ಗರ್ಲ್ಸ್’ ಶೋ ಕ್ಯಾನ್ಸಲ್?

ಸದ್ಯ ರಿಲೀಸ್ ಆಗಿರೋ ಪ್ರೋಮೋದಲ್ಲಿ ವಿನಯ್ ಗೌಡ ಅವರು ಕಾಣಿಸಿಲ್ಲ. ಈ ಬಗ್ಗೆ ಕಮೆಂಟ್ ಬಾಕ್ಸ್​​ನಲ್ಲಿ ಅನೇಕರು ಪ್ರಶ್ನೆ ಮಾಡಿದ್ದಾರೆ. ಕುತೂಹಲ ಮೂಡಬೇಕು ಎನ್ನುವ ಕಾರಣಕ್ಕೆ ಉದ್ದೇಶ ಪೂರ್ವಕವಾಗಿಯೇ ಈ ರೀತಿ ಮಾಡಿರಬಹುದು ಎಂಬುದು ಕೆಲವರ ವಾದ.  ಆದರೆ, ಮೂಲಗಳ ಪ್ರಕಾರ ಅವರು ಈ ವಾರದ ಶೂಟ್​ಗೆ ಬಂದಿಲ್ಲವಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.