ರಜತ್-ವಿನಯ್ ಅಂದರ್ ಆಗಿದ್ದಕ್ಕೆ ಈ ವಾರದ ‘ಬಾಯ್ಸ್ vs ಗರ್ಲ್ಸ್’ ಶೋ ಕ್ಯಾನ್ಸಲ್?
ರಜತ್ ಕಿಶನ್ ಮತ್ತು ವಿನಯ್ ಗೌಡ ಅವರು ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ನಂತರ ಮಚ್ಚು ಹಿಡಿದು ರೀಲ್ಸ್ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದಾರೆ. ಅವರಿಗೆ ಜಾಮೀನು ಸಿಕ್ಕಿದ್ದರೂ, ಅವರ ಅನುಪಸ್ಥಿತಿಯಿಂದ ಶೋ ಮೇಲೆ ಪರಿಣಾಮ ಬೀರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ವಾರದ ಶೋ ರದ್ದಾಗುವ ಸಾಧ್ಯತೆಯಿದೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ರಜತ್ ಕಿಶನ್ ಹಾಗೂ ವಿನಯ್ ಗೌಡ (Vinay Gowda) ಅವರು ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ಅಂದರ್ ಆಗಿದ್ದಾರೆ. ಅವರಿಗೆ ಕೋರ್ಟ್ನಿಂದ ಜಾಮೀನು ಕೂಡ ಸಿಕ್ಕಿದ್ದು ಇಂದು (ಮಾರ್ಚ್ 29) ಬಿಡುಗಡೆ ಹೊಂದಲಿದ್ದಾರೆ. ರಜತ್ ಹಾಗೂ ವಿನಯ್ ‘ಬಾಯ್ಸ್ vs ಗರ್ಲ್ಸ್’ (Boys vs Girls) ಶೋನಲ್ಲಿ ಸ್ಪರ್ಧಿಸಿದ್ದಾರೆ. ಅವರು ಜೈಲಿನಲ್ಲಿ ಇರೋ ಕಾರಣದಿಂದ ಈ ಶೋನಲ್ಲಿ ಅವರು ಭಾಗವಹಿಸಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಈ ವಾರದ ಶೋ ರದ್ದಾಯಿತೇ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.
‘ಬಾಯ್ಸ್ vs ಗರ್ಲ್ಸ್’ ಶೋ ಕಲರ್ಸ್ ಕನ್ನಡದಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಪ್ರಸಾರ ಕಾಣುತ್ತಿತ್ತು. ಈ ಶೋ ಮುಗಿದ ಬಳಿಕ ವಿನಯ್ ಹಾಗೂ ರಜತ್ ಅವರು ಶೋಗೆ ಬಳಸಿದ ಮಚ್ಚನ್ನು ಹಿಡಿದುಕೊಂಡು ರೀಲ್ಸ್ ಮಾಡಿದ್ದರು. ರಸ್ತೆಯ ಮೇಲೆ ಅದನ್ನು ಝಳಪಿಸುತ್ತಾ ಮಿಂಚಿದ್ದರು. ಆದರೆ, ಇದುವೇ ಅವರಿಗೆ ಮುಳುವಾಗಿದೆ. ಅವರು ಕೆಲವು ದಿನ ಅಂದರ್ ಆಗಿದ್ದಾರೆ. ಈಗ ಕೋರ್ಟ್ನಿಂದ ಜಾಮೀನು ಸಿಕ್ಕಿದ್ದು ಅವರು ನಿರಾಳರಾಗಿದ್ದಾರೆ. ಅವರಿಲ್ಲದೆ, ‘ಬಾಯ್ಸ್ vs ಗರ್ಲ್ಸ್’ ಶೋ ನಡೆದಿಲ್ಲವೇ ಎನ್ನುವ ಪ್ರಶ್ನೆ ಮೂಡಿದೆ.
ವಿನಯ್ ಅವರು ಬಾಯ್ಸ್ ತಂಡದ ಕ್ಯಾಪ್ಟನ್ ಆಗಿದ್ದಾರೆ. ಅದೇ ರೀತಿ ರಜತ್ ಕೂಡ ಪ್ರಮುಖ ಸ್ಪರ್ಧಿಯೇ. ಇಬ್ಬರೂ ಇಲ್ಲದೆ ಹೋದರೆ ತಂಡಕ್ಕೆ ದೊಡ್ಡ ಬಲವೇ ಇಲ್ಲದಂತೆ ಆಗುತ್ತದೆ. ಈ ಕಾರಣದಿಂದ ಈ ವಾರದ ಸಂಚಿಕೆಯನ್ನು ರದ್ದು ಮಾಡಲಾಯಿತೇ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಈ ಬಗ್ಗೆ ವಾಹಿನಿ ಕಡೆಯಿಂದ ಸ್ಪಷ್ಟನೆ ಸಿಗಬೇಕಿದೆ.
ಇದನ್ನೂ ಓದಿ: ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ? ವಿವರಿಸಿದ ಲಾಯರ್
ಹಾಗಾದರೆ ಆ ಸಮಯದಲ್ಲಿ ಏನನ್ನು ಪ್ರಸಾರ ಮಾಡಲಾಗುತ್ತದೆ? ಅದಕ್ಕೂ ಉತ್ತರ ಇದೆ. ‘ಮಜಾ ಟಾಕೀಸ್’ ಇಂದು (ಮಾರ್ಚ್ 29) ಮಹಾ ಸಂಚಿಕೆ ಪ್ರಸಾರ ಕಾಣಲಿದೆ. ಅಂದರೆ ಎರಡು ಎಪಿಸೋಡ್ಗಳು ಒಂದೇ ದಿನ ಪ್ರಸಾರ ಆಗಲಿವೆ. ಭಾನುವಾರ (ಮಾರ್ಚ್ 30) ಯುಗಾದಿ ಪ್ರಯುಕ್ತ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ‘ಭೀಮ’ ಸಿನಿಮಾ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.