AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಟಿಟಿಗೆ ಬಂತು ಕನ್ನಡದ ಹಿಟ್ ಹಾರರ್​ ಥ್ರಿಲ್ಲರ್ ಸಿನಿಮಾ; ಇಂಟರ್​ವಲ್​ ಟ್ವಿಸ್ಟ್​ನ ಊಹಿಸೋಕೂ ಸಾಧ್ಯವಿಲ್ಲ

2016ರಲ್ಲಿ ರಿಲೀಸ್ ಆದ ‘ಕರ್ವ’ ಸಿನಿಮಾ ಭರ್ಜರಿ ಮೆಚ್ಚುಗೆ ಪಡೆಯಿತು. ರಾಜಾ ಬಂಗಲೆ, ಅದರಲ್ಲಿ ನಡೆಯುವ ಭಯ ಬೀಳಿಸುವ ಘಟನೆ ಪ್ರಮುಖ ಹೈಲೈಟ್ ಆಗಿದ್ದವು. ಈ ಚಿತ್ರದ ಟ್ವಿಸ್ಟ್​ಗಳು ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಈ ಚಿತ್ರ ನಿರ್ದೇಶನ ಮಾಡಿದ್ದ ನವನೀತ್ ಅವರು ಈ ಬಾರಿ ಹೊಸ ಸಿನಿಮಾ ಮಾಡಿದ್ದಾರೆ. ಅದು ಒಟಿಟಿಗೆ ಬಂದಿದೆ.

ಒಟಿಟಿಗೆ ಬಂತು ಕನ್ನಡದ ಹಿಟ್ ಹಾರರ್​ ಥ್ರಿಲ್ಲರ್ ಸಿನಿಮಾ; ಇಂಟರ್​ವಲ್​ ಟ್ವಿಸ್ಟ್​ನ ಊಹಿಸೋಕೂ ಸಾಧ್ಯವಿಲ್ಲ
ಛೂ ಮಂತರ್
ರಾಜೇಶ್ ದುಗ್ಗುಮನೆ
|

Updated on:Mar 29, 2025 | 1:24 PM

Share

ವೀಕೆಂಡ್ ಬಂತು ಎಂದರೆ ಸಿನಿಪ್ರಿಯರು ಒಟಿಟಿಯಲ್ಲಿ ಒಂದೊಳ್ಳೆಯ ಸಿನಿಮಾಗೆ ಹುಡುಕಾಡುತ್ತಾರೆ. ಯಾವ ಚಿತ್ರ ನೋಡಬೇಕು ಎಂದು ನಿರ್ಧರಿಸುವುದೇ ದೊಡ್ಡ ಚಾಲೆಂಜ್. ಆನ್​ಲೈನ್ ರೇಟಿಂಗ್ ನೋಡಿ ಸಿನಿಮಾ ನೋಡಿದವರಿಗೆ ಕೆಲವೊಮ್ಮೆ ನಿರಾಸೆ ಉಂಟಾಗಿದ್ದೂ ಇದೆ. ಆದರೆ, ಇಂದು ನಾವು ಹೇಳುತ್ತಿರುವ ಸಿನಿಮಾ ನೋಡಿದರೆ ನಿಮಗೆ ನಿರಾಸೆ ಆಗುವುದಿಲ್ಲ. ಕಾಮಿಡಿ, ಹಾರರ್, ಥ್ರಿಲ್ಲರ್ ಇರುವ ಈ ಚಿತ್ರ ಐಂಡಿಬಿಯಲ್ಲಿ 9+ ರೇಟಿಂಗ್ ಪಡೆದಿದೆ. ಈ ಚಿತ್ರ ಯಾವುದು? ಯಾವ ಒಟಿಟಿಯಲ್ಲಿ (OTT) ವೀಕ್ಷಣೆಗೆ ಸಿನಿಮಾ ಲಭ್ಯವಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಶರಣ್ ನಟನೆಯ ‘ಛೂ ಮಂತರ್’ ಸಿನಿಮಾ ಈಗ ಒಟಿಟಿಗೆ ಬಂದಿದೆ. ಶರಣ್ ಅವರು ಇತ್ತೀಚೆಗೆ ಹಾರರ್ ವಿಚಾರಗಳನ್ನು ಹೆಚ್ಚು ಎತ್ತಿಕೊಳ್ಳುತ್ತಿದ್ದಾರೆ. ಹಾಗಂತ ಇದು ಕೇವಲ ಹಾರರ್ ಸಿನಿಮಾ ಅಲ್ಲ. ಶರಣ್ ಇದ್ದಲ್ಲಿ ಹಾಸ್ಯ ಇರಲೇಬೇಕು. ಅದರಲ್ಲೂ ಚಿಕ್ಕಣ್ಣ ಜೊತೆಗಿದ್ದರೆ ಕೇಳಬೇಕೆ? ಈ ಚಿತ್ರದಲ್ಲಿ ಹಾಸ್ಯವೂ ಕೂಡ ಕೊಂಚ ಹೆಚ್ಚೇ ಇದೆ.

ಇನ್ನು, ಅದಿತಿ ಪ್ರಭುದೇವ, ಮೇಘನಾ ಗಾಂವ್ಕರ್, ಪ್ರಭು ಮುಂದ್ಕರ್, ರಜನಿ ಭಾರದ್ವಾಜ್, ವಿಜಯ್ ಚೆಂಡೂರ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಂಗೀತ ಸಂಯೋಜಕ ಗುರು ಕಿರಣ್ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಒಂದು ಬಂಗಲೆಯಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಈ ಚಿತ್ರದಲ್ಲಿ ಹಲವು ಟ್ವಿಸ್ಟ್​ಗಳು ಬರುತ್ತವೆ. ಅದರಲ್ಲೂ ಮಧ್ಯಂತರದಲ್ಲಿ ಸಿಗೋ ಟ್ವಿಸ್ಟ್​ನ ಯಾರೂ ಊಹಿಸಲು ಸಾಧ್ಯವಿಲ್ಲ. ಸಿನಿಮಾದ ನಿಜವಾದ ಚಿತ್ರಕಥೆ ತಿಳಿದಾಗ ಥ್ರಿಲ್ ಆಗೋದು ಗ್ಯಾರಂಟಿ.

ಇದನ್ನೂ ಓದಿ
Image
ಸೌಂದರ್ಯಾ ಜಾತಕದಲ್ಲಿ ಏನಿತ್ತು? ಸಾವಿನ ವಿಚಾರ ತಂದೆಗೆ ಮೊದಲೇ ತಿಳಿದಿತ್ತು
Image
‘ನಿಮಗಿಂತ ಮೂಗೇ ಮೊದಲು ಬರುತ್ತೆ’; ಪೂಜಾ ಗಾಂಧಿಗೆ ಹೇಳಿದ್ದ ಯೋಗರಾಜ್ ಭಟ್
Image
ಉತ್ತಮ TRP ಮಧ್ಯೆಯೂ ಕೊನೆಯಾಗಲಿದೆ ಕಲರ್ಸ್​ನ ಈ ಸೂಪರ್ ಹಿಟ್ ಧಾರಾವಾಹಿ?
Image
ಎಷ್ಟು ದಿನ ಬದುಕುತ್ತೇನೋ ಗೊತ್ತಿಲ್ಲ, ದೇವರಿಗೆ ಬಿಟ್ಟಿದ್ದು: ಸಲ್ಮಾನ್ ಖಾನ್
Choo Mantar (1)

ಛೂ ಮಂತರ್

ಕರ್ವ ನವನೀತ್ ಅವರು ‘ಛೂ ಮಂತರ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಮೊದಲು ಅವರು ‘ಕರ್ವ’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ‘ಛೂ ಮಂತರ್’ ಸಿನಿಮಾ ಈಗ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ. ಮಿಸ್ ಮಾಡದೇ ಈ ಚಿತ್ರವನ್ನು ನೀವು ನೋಡಿ.

ಇದನ್ನೂ ಓದಿ: ‘ಛೂ ಮಂತರ್’ ವಿಮರ್ಶೆ; ತಿರುವುಗಳ ಹಾದಿಯಲ್ಲಿ ಅಮಾನುಷ ಶಕ್ತಿಗಳ ಕಾಟ

ಕೆಲವರಿಗೆ ಹಾರರ್ ಸಿನಿಮಾಗಳು ಇಷ್ಟ ಆಗೋದಿಲ್ಲ. ಆದರೆ, ‘ಛೂ ಮಂತರ್’ ಆ ರೀತಿ ಇಲ್ಲ. ಇಲ್ಲಿ ಹಾರರ್ ಅಂಶಗಳು ಇದ್ದರೂ ಅದನ್ನು ಆರಾಮಾಗಿ ವೀಕ್ಷಿಸಬಹುದು. ಈ ಮೂಲಕ ವೀಕೆಂಡ್​ನ ಎಂಜಾಯ್ ಮಾಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:43 am, Sat, 29 March 25