ಸುದೀಪ್ ಎಚ್ಚರಿಕೆ ನೀಡಿದ ಮೇಲೂ ಉದ್ಧಟತನ ಮುಂದುವರಿಸಿದ ಚೈತ್ರಾ ಕುಂದಾಪುರ
ಹೆಣ್ಮಕ್ಕಳಿಗೆ ಗೌರವ ಕೊಡಬೇಕು ಎಂದು ಭಾಷಣ ಹೊಡೆಯುವ ಚೈತ್ರಾ ಕುಂದಾಪುರ ಅವರು ಮಾತಿನ ಭರದಲ್ಲಿ ‘ಒಬ್ಬ ಅಪ್ಪನಿಗೆ ಹುಟ್ಟಿದ್ದರೆ..’ ಎಂದು ಹೇಳಿದ್ದನ್ನು ಸುದೀಪ್ ಟೀಕಿಸಿದ್ದಾರೆ. ಅದಕ್ಕಾಗಿ ಚೈತ್ರಾ ಕ್ಷಮೆ ಕೇಳಿದರೂ ಕೂಡ ನಂತರ ತಮ್ಮನ್ನು ತಾವು ಸಮರ್ಥನೆ ಮಾಡಿಕೊಳ್ಳುವುದನ್ನು ಮುಂದುವರಿಸಿದರು. ಆ ಮೂಲಕ ಉದ್ಧಟತನ ತೋರಿಸಿದ್ದಾರೆ.
ಕಳೆದ ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಅವರು ಅನೇಕರಿಗೆ ಕ್ಲಾಸ್ ತೆಗೆದುಕೊಂಡರು. ಅದಕ್ಕೆ ಕಾರಣ ಆಗಿದ್ದು ಬಿಗ್ ಬಾಸ್ ಸ್ಪರ್ಧಿಗಳ ವರ್ತನೆ. ಅದರಲ್ಲೂ ಚೈತ್ರಾ ಕುಂದಾಪುರ ಅವರು ಆಡಿದ ಮಾತುಗಳ ಬಗ್ಗೆ ಸುದೀಪ್ ಅವರು ಆಕ್ಷೇಪ ವ್ಯಕ್ತಪಡಿಸಿದರು. ಜಗದೀಶ್ ಅವರಿಗೆ ಚೈತ್ರಾ ಅವರು ಕೆಟ್ಟ ಮಾತುಗಳಲ್ಲಿ ನಿಂದಿಸಿದ್ದರು. ‘ಒಬ್ಬ ಅಪ್ಪನಿಗೆ ಹುಟ್ಟಿದರೆ..’ ಎಂದು ಚೈತ್ರಾ ಕುಂದಾಪುರ ಹೇಳಿದ್ದರು. ಹೆಣ್ಮಕ್ಕಳ ಬಗ್ಗೆ ಗೌರವ ಕೊಡಬೇಕು ಎಂದು ಕೂಗಾಡುವ ಚೈತ್ರಾ ಅವರು ಇಂಥ ವಾಕ್ಯ ಬಳಕೆ ಮಾಡಿದ್ದು ಸರಿಯಲ್ಲ ಎಂದು ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದರು. ಹಾಗಿದ್ದರೂ ಕೂಡ ಚೈತ್ರಾ ಅವರು ತಮ್ಮನ್ನು ಸಮರ್ಥನೆ ಮಾಡಿಕೊಳ್ಳುವ ಕೆಲಸ ಮುಂದುವರಿಸಿದ್ದಾರೆ.
‘ಒಬ್ಬ ಅಪ್ಪನಿಗೆ ಹುಟ್ಟಿದ್ದರೆ..’ ಎಂದು ಚೈತ್ರಾ ಹೇಳಿದ್ದರಿಂದ ಅದು ನೇರವಾಗಿ ಜಗದೀಶ್ ಅವರ ತಾಯಿಗೆ ಬೈಯ್ದಂತೆ ಆಗುತ್ತದೆ. ಹಾಗಾಗಿಯೇ ಸುದೀಪ್ ಅವರು ಉಗ್ರ ರೂಪ ತಾಳಿ ಚೈತ್ರಾ ಅವರ ಮಾತನ್ನು ಖಂಡಿಸಿದ್ದರು. ಸುದೀಪ್ ಎದುರಿನಲ್ಲಿಯೇ ಅವರು ತಮ್ಮನ್ನು ಸಮರ್ಥನೆ ಮಾಡಿಕೊಳ್ಳುವ ಕೆಲಸ ಮಾಡಿದರು. ಅಲ್ಲದೇ ಮಾತಿನ ನಡುವೆ ವಿಷಯಾಂತರ ಮಾಡಲು ಮುಂದಾದರು. ಅದಕ್ಕೆ ಸುದೀಪ್ ಬ್ರೇಕ್ ಹಾಕಿದರು.
ಸುದೀಪ್ ಅವರು ಭಾನುವಾರದ (ಅಕ್ಟೋಬರ್ 20) ಸಂಚಿಕೆಯನ್ನು ನಡೆಸಿಕೊಟ್ಟ ಬಳಿಕ ಚೈತ್ರಾ ಅವರು ಬಿಗ್ ಬಾಸ್ ಮನೆಯಲ್ಲಿ ಕುಳಿತು, ಮಾತನಾಡಲು ಆರಂಭಿಸಿದರು. ‘ನೀನು ನನಗೆ ಕೆಸರು ಎರಚಿದರೆ ನಾನು ಕೂಡ ಅದೇ ಕೆಸರನ್ನು ಎರಚುತ್ತೇನೆ. ನಿನ್ನ ಮೇಲೆ ಗುಲಾಬಿ ಹೂವನ್ನು ಎಸೆಯೋಕೆ ಆಗಲ್ಲ. ಆ ಮನುಷ್ಯನ (ಜಗದೀಶ್) ಬಗ್ಗೆ ಅಷ್ಟು ಸ್ಪಷ್ಟನೆ ಕೊಡುತ್ತಾರೋ ಗೊತ್ತಿಲ್ಲ’ ಎಂದು ಚೈತ್ರಾ ಗೊಣಗಿದ್ದಾರೆ. ಚೈತ್ರಾ ಈ ರೀತಿ ವಾದ ಮುಂದುವರಿಸುವುದು ತಪ್ಪು ಎಂದು ಗೋಲ್ಡ್ ಸುರೇಶ್ ಮತ್ತು ಶಿಶಿರ್ ಮಾತನಾಡಿಕೊಂಡಿದ್ದಾರೆ.
ವಾಪಸ್ ಕರೆಸಬೇಕು ಅಂದ್ರೆ ಹುಚ್ಚ ವೆಂಕಟ್ನೂ ಕರೆಸಬೇಕಾಗತ್ತೆ, ಅದು ಆಗಲ್ಲ: ಸುದೀಪ್ ಖಡಕ್ ನಿರ್ಧಾರ
ಹಂಸಾ ಅವರಿಗೆ ಅವಾಚ್ಯ ಪದ ಬಳಕೆ ಮಾಡಿದ್ದರಿಂದ ಜಗದೀಶ್ ಅವರನ್ನು ಮನೆಯಿಂದ ಹೊರಗೆ ಹಾಕಲಾಯಿತು. ಜಗದೀಶ್ ಮೇಲೆ ರಂಜಿತ್ ಕೈ ಮಾಡಿದ್ದಕ್ಕಾಗಿ ಅವರನ್ನು ಕೂಡ ಮನೆಯಿಂದ ಎಲಿಮಿನೇಟ್ ಮಾಡಲಾಗಿದೆ. ಇವರಿಬ್ಬರು ಮಾಡಿದ್ದ ತಪ್ಪು ಎಂಬುದಾದರೆ ಚೈತ್ರಾ ಆಡಿದ ಮಾತುಗಳು ಸರಿಯೇ ಎಂಬುದು ಸುದೀಪ್ ಪ್ರಶ್ನೆ. ಅದೇ ರೀತಿ ಉಗ್ರಂ ಮಂಜು ಅವರು ಜಗದೀಶ್ ಅವರನ್ನು ಕೆಣಕಿದ್ದು ಕೂಡ ಸರಿಯಲ್ಲ ಎಂದು ಸುದೀಪ್ ಕ್ಲಾಸ್ ತೆಗೆದುಕೊಂಡರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.