
ಚೈತ್ರಾ ಕುಂದಾಪುರ (Chaithra Kundapura) ಅವರು ಶ್ರೀಕಾಂತ್ ಕಶ್ಯಪ್ ಜೊತೆ ಹಸೆಮಣೆ ಏರಿದ್ದಾರೆ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆಗಳು ಬರುತ್ತಾ ಇವೆ. ಅವರ ವಿವಾಹ ಈ ಮೊದಲೇ ನಿಗದಿ ಆಗಿತ್ತು. ಈಗ ಅದು ನೆರವೇರಿದೆ. ಶುಭ ಶುಕ್ರವಾರ ಕುಂದಾಪುರದಲ್ಲಿ ಚೈತ್ರಾ ಕುಂದಾಪುರ ಅವರು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಮದುವೆ ಆಗುತ್ತಿರುವ ವ್ಯಕ್ತಿಯ ಹೆಸರು ಹಾಗೂ ಅವರ ಹಿನ್ನೆಲೆ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.
ಚೈತ್ರಾ ಕುಂದಾಪುರ ಅವರು ವಿವಾದದ ಮೂಲಕ ಸುದ್ದಿ ಆದವರು. ವಿಧಾನಸಭೆ ಟಿಕೆಟ್ ಕೊಡೋದಾಗಿ ನಂಬಿಸಿ ಕುಂದಾಪುರ ಉದ್ಯಮಿಗೆ 5 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪ ಇವರ ಮೇಲೆ ಇದೆ. ಈ ಪ್ರಕರಣ ಇನ್ನೂ ಕೋರ್ಟ್ನಲ್ಲಿ ಇದೆ. ಈ ಕಾರಣಕ್ಕೆ ಅವರು ಟ್ರೋಲ್ ಆದರು. ಆದರೆ ಬಿಗ್ ಬಾಸ್ ಮನೆ ಅವರ ಬದುಕನ್ನು ಬದಲಿಸಿತು. ಅವರ ಮೇಲೆ ಪಾಸಿಟಿವ್ ಟಾಕ್ಗೆ ಈ ಶೋ ಸಹಾಯ ಆಯಿತು. ಆ ಬಳಿಕ ‘ಬಾಯ್ಸ್ vs ಗರ್ಲ್ಸ್’ ಶೋಗೆ ಬಂದರು. ಈಗ ಅವರು ಹಸೆಮಣೆ ಏರಿದ್ದಾರೆ.
ಶ್ರೀಕಾಂತ್ ಕಶ್ಯಪ್ ಅವರ ಜೊತೆ ಚೈತ್ರಾ ವಿವಾಹ ನಡೆದಿದೆ. ಚೈತ್ರಾ ಅವರು ಹಾರ ಬದಲಿಸಿಕೊಂಡಿದ್ದಾರೆ. ಶ್ರೀಕಾಂತ್ ಅವರು ಓದಿರೋದು ಅನಿಮೇಷನ್. ಆದರೆ, ಅವರಿಗೆ ನಕ್ಷತ್ರಗಳು, ಖಗೋಳಶಾಸ್ತ್ರ ಮತ್ತು ಬ್ರಹ್ಮಾಂಡದ ಬಗ್ಗೆ ತೀವ್ರ ಆಸಕ್ತಿ ಹೊಂದಿರೋ ವ್ಯಕ್ತಿ ಆಗಿದ್ದಾರೆ. ಇವರ ದಾಂಪತ್ಯಕ್ಕೆ ಎಲ್ಲರೂ ಶುಭ ಕೋರುತ್ತಿದ್ದಾರೆ.
ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಪೂರ್ಣಗೊಂಡ ಬಳಿಕವೇ ವಿವಾಹ ಆಗುವ ಆಲೋಚನೆಯಲ್ಲಿ ಇದ್ದರು. ಆದರೆ, ಆಗ ಅವರಿಗೆ ‘ಬಾಯ್ಸ್ vs ಗರ್ಲ್ಸ್’ ಶೋನ ಆಫರ್ ಬಂತು. ಇದನ್ನು ಒಪ್ಪಿದ್ದರಿಂದ ಪ್ರತಿ ವಾರ ಈ ಶೋನ ಶೂಟ್ಗೆ ಅವರು ಹೋಗಬೇಕಿತ್ತು. ಈ ಕಾರಣಕ್ಕೆ ವಿವಾಹ ವಿಳಂಬ ಆಯಿತು. ಈಗ ಇವರು ಎಲ್ಲಾ ಜವಾಬ್ದಾರಿಗಳನ್ನು ಪೂರ್ಣಗೊಳಿಸಿಕೊಂಡಿದ್ದು, ವಿವಾಹ ಆಗಿದ್ದಾರೆ.
ಇದನ್ನೂ ಓದಿ: ಮದುವೆ ವಿಚಾರದಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತಿನಂತೆ ನಡೆದುಕೊಂಡ ಚೈತ್ರಾ ಕುಂದಾಪುರ
ಚೈತ್ರಾ ಅವರು ವಿಡಿಯೋ ಹಂಚಿಕೊಂಡು ತಾವು ಮದುವೆ ಆಗುತ್ತಿರುವ ಹುಡುಗ ಯಾರು ಎಂಬುದನ್ನು ರಿವೀಲ್ ಮಾಡಿದರು. ಈಗ ವಿವಾಹ ಆಗಿ ಹೊಸ ಬಾಳನ್ನು ಈ ದಂಪತಿ ಆರಂಭಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.