ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗೂ ಮನರಂಜನೆ ನೀಡುತ್ತಾ ಸಾಗುತ್ತಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ಅವರ ಆಟ ಕೂಡ ದಿನ ಕಳೆದಂತೆ ಏಳ್ಗೆ ಕಾಣುತ್ತಿದೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗುತ್ತಿದ್ದಾರೆ. ಈಗ ಚೈತ್ರಾ ಕುಂದಾಪುರ ಅವರು ಒಂದು ಕಾರಣಕ್ಕೆ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಅದಕ್ಕೆ ಕಾರಣ ಆಗಿರೋದು ಅವರ ದತ್ತು ಮಕ್ಕಳ ವಿಚಾರ. ಬಿಗ್ ಬಾಸ್ ಮನೆಯಲ್ಲಿ ಧನರಾಜ್ ಹಾಗೂ ಹನುಮಂತ ಅವರಿಗೆ ದತ್ತು ಮಕ್ಕಳಾಗಿದ್ದಾರೆ.
ಕಳೆದ ವೀಕೆಂಡ್ನಲ್ಲಿ ಚೈತ್ರಾ ಅವರು ಎಲಿಮಿನೇಷನ್ ಹಂತಕ್ಕೆ ಹೋಗಿದ್ದರು. ಅವರನ್ನು ಕನ್ಫೆಷನ್ರೂಂನಲ್ಲಿ ಕೂರಿಸಿ ಬಿಗ್ ಬಾಸ್ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತೋರಿಸಲಾಗುತ್ತಿತ್ತು. ಅದು ಅವರಿಗೆ ಸಾಕಷ್ಟು ಟೆನ್ಷನ್ ಕೊಟ್ಟಿತ್ತಂತೆ. ಸೇವ್ ಆಗಿ ಬಂದ ಬಳಿಕ ಚೈತ್ರಾ ಅವರು ಧನರಾಜ್ ಹಾಗೂ ಹನುಮಂತ ಬಳಿ ಈ ವಿಚಾರ ಹೇಳಿಕೊಂಡಿದ್ದರು. ‘ಹೆರಿಗೆ ನೋವು ಹೆಣ್ಣುಮಕ್ಕಳಿಗೆ ಮರುಜನ್ಮ ಎನ್ನುತ್ತಾರೆ. ಆ ನೋವು ಹೇಗಿರುತ್ತದೆ ಎಂಬುದು ಗೊತ್ತಿಲ್ಲ. ಆದರೆ, ಕನ್ಫೆಷನ್ ರೂಂನಲ್ಲಿ ಕುಳಿತಾಗ ಒಂದು ರೀತಿಯ ಅನುಭವ ಆಯಿತು. ಬಹುಶಃ ಆ ನೋವು ಹಾಗೆಯೇ ಇರಬಹುದು ಎಂದುಕೊಂಡೆ’ ಎಂದಿದ್ದಾರೆ ಅವರು.
‘ಆ ಹೆರಿಗೆ ನೋವಿಗೆ ಜನಿಸಿದವರು ನಾವಿಬ್ಬರು’ ಎಂದು ಧನರಾಜ್ ಅವರು ಹೇಳಿದರು. ಅಲ್ಲಿಂದ ಚೈತ್ರಾ ಅವರು ಹನುಮಂತ-ಧನರಾಜ್ ಅವರನ್ನು ಮಕ್ಕಳಂತೆ ಕಾಣುತ್ತಾ ಇದ್ದಾರೆ. ಈ ವಾರವೂ ಆ ಬಾಂಧವ್ಯ ಮುಂದುವರಿದಿದೆ. ವೀಕೆಂಡ್ನಲ್ಲಿ ಈ ವಿಚಾರ ಚರ್ಚೆಗೆ ಬರೋ ಸಾಧ್ಯತೆ ಇದೆ.
ಇದನ್ನೂ ಓದಿ: ಮುನಿಸು ಮರೆತು ಮತ್ತೆ ಒಂದಾದ ಮೋಕ್ಷಿತಾ-ಗೌತಮಿ; ಮಂಜುನ ದೂರ ಇಟ್ಟ ಜೋಡಿ
ಚೈತ್ರಾ ಒಂದು ತಂಡ ಆದರೆ, ಹನುಮಂತ ಹಾಗೂ ಧನರಾಜ್ ಮತ್ತೊಂದು ತಂಡದಲ್ಲಿ ಇದ್ದಾರೆ. ‘ಮಕ್ಕಳಾ ನೀವು ಮತ್ತೊಂದು ತಂಡದಲ್ಲಿ ಇದ್ದೀರಾ. ನಿಮ್ಮ ಅಮ್ಮ ಮತ್ತೊಂದು ತಂಡದಲ್ಲಿದ್ದಾಳೆ’ ಎಂದು ಚೈತ್ರಾ ಹೇಳಿದರು. ಅಲ್ಲಿದ್ದವರು, ‘ತಾಯಿನ ಗೆಲ್ಲಿಸೋಕೆ ಸಹಾಯ’ ಮಾಡಿ ಎಂದು ಕೋರಿದರು. ಆಗ ಚೈತ್ರಾ ಕೂಡ ನಕ್ಕರು. ಈ ವಾರ ಧನರಾಜ್, ಚೈತ್ರಾ ಹಾಗೂ ಹನುಮಂತ ನಾಮಿನೇಷನ್ ಲಿಸ್ಟ್ನಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.