ಮೋಕ್ಷಿತಾನ ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದ ಗೌತಮಿ; ಮುಂದುವರಿದ ದ್ವೇಷದ ಕಾವು

ಮೋಕ್ಷಿತಾ ಪೈ ಮತ್ತು ಗೌತಮಿ ಜಾದವ್ ನಡುವೆ ಇರುವ ಮನಸ್ತಾಪ ಹೆಚ್ಚಾಗುತ್ತಲೇ ಇದೆ. ಮೋಕ್ಷಿತಾಗೆ ಮತ್ತೆ ಕ್ಯಾಪ್ಟನ್ ಆಗುವ ಅವಕಾಶ ಮಿಸ್ ಆಗಿದೆ. ಈ ನಿರ್ಧಾರ ತೆಗೆದುಕೊಂಡಿದ್ದೇ ಗೌತಮಿ. ಕಳೆದ ವಾರ ಸಹ ಮೋಕ್ಷಿತಾ ಅವರು ಕ್ಯಾಪ್ಟನ್ ಆಗುವ ಚಾನ್ಸ್ ಮಿಸ್ ಮಾಡಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಈ ವಾರವೂ ಅದು ರಿಪೀಟ್ ಆಗಿದೆ.

ಮೋಕ್ಷಿತಾನ ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದ ಗೌತಮಿ; ಮುಂದುವರಿದ ದ್ವೇಷದ ಕಾವು
ಗೌತಮಿ ಜಾದವ್, ಮೋಕ್ಷಿತಾ ಪೈ
Follow us
ಮದನ್​ ಕುಮಾರ್​
|

Updated on: Dec 12, 2024 | 10:29 PM

‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ 73 ದಿನಗಳ ಕಳೆದಿವೆ. ಇನ್ನು ಉಳಿದಿರುವುದು ಕೆಲವೇ ದಿನಗಳ ಮಾತ್ರ. ಹಾಗಾಗಿ ಎಲ್ಲರೂ ತಮ್ಮ ಆಟದ ಮೇಲೆ ಗಮನ ಹರಿಸುತ್ತಿದ್ದಾರೆ. ಮೊದಲು ಸ್ನೇಹಿತರಾಗಿದ್ದವರೆಲ್ಲ ಈಗ ದುಷ್ಮನ್​ಗಳ ರೀತಿ ಆಗಿದ್ದಾರೆ. ಅದರಲ್ಲೂ ಗೌತಮಿ ಜಾದವ್ ಮತ್ತು ಮೋಕ್ಷಿತಾ ಪೈ ಅವರ ನಡುವಿನ ಜಗಳ ಜಾಸ್ತಿ ಆಗಿದೆ. ಈಗ ಮೋಕ್ಷಿತಾ ಪೈ ಅವರಿಗೆ ಗೌತಮಿ ಇನ್ನಷ್ಟು ಸಂಕಷ್ಟ ತಂದೊಡ್ಡಿದ್ದಾರೆ. ಮುಂದಿನ ವಾರಕ್ಕೆ ಕ್ಯಾಪ್ಟನ್ ಆಗುವ ಅವಕಾಶವನ್ನು ಮೋಕ್ಷಿತಾ ಅವರಿಂದ ಗೌತಮಿ ತಪ್ಪಿಸಿದ್ದಾರೆ.

ಪ್ರತಿ ವಾರ ಕ್ಯಾಪ್ಟೆನ್ಸಿ ಟಾಸ್ಕ್​ ನಡೆಯುತ್ತದೆ. ಅದರಲ್ಲಿ ಗೆಲ್ಲಲು ಎಲ್ಲರೂ ಕಷ್ಟಪಡುತ್ತಾರೆ. ಯಾಕೆಂದರೆ, ಒಮ್ಮೆ ಕ್ಯಾಪ್ಟನ್ ಆದರೆ ಮುಂದಿನ ವಾರಕ್ಕೆ ಇಮ್ಯುನಿಟಿ ಸಿಗುತ್ತದೆ. ಅಂದರೆ, ನಾಮಿನೇಷನ್​ನಿಂದ ಬಜಾಚ್ ಆಗುತ್ತಾರೆ. ಹಾಗಾಗಿ ಎಲ್ಲರಿಗೂ ಕ್ಯಾಪ್ಟನ್ ಆಗಬೇಕು ಎಂಬ ಆಸೆ ಇರುತ್ತದೆ. ಕಳೆದ ವಾರ ಕ್ಯಾಪ್ಟನ್ ಆಗುವ ಅವಕಾಶ ಕಳೆದುಕೊಂಡಿದ್ದ ಮೋಕ್ಷಿತಾ ಅವರಿಗೆ ಈ ವಾರ ಕೂಡ ಚಾನ್ಸ್ ಮಿಸ್ ಆಗಿದೆ.

ಕ್ಯಾಪ್ಟೆನ್ಸಿ ಟಾಸ್ಕ್​ಗಾಗಿ ಎರಡು ತಂಡಗಳಲ್ಲಿ ಪೈಪೋಟಿ ನಡೆಯುತ್ತಿದೆ. ಒಂದು ತಂಡಕ್ಕೆ ಹನುಮಂತ ಲೀಡರ್ ಆಗಿದ್ದರೆ, ಇನ್ನೊಂದು ತಂಡವನ್ನು ಗೌತಮಿ ಜಾದವ್ ಮುಂದುವರಿಸುತ್ತಿದ್ದಾರೆ. ಮೊದಲ ಸುತ್ತಿನಲ್ಲಿ ಗೌತಮಿಯ ತಂಡ ಸೋತಿತು. ಆಗ ಇಬ್ಬರನ್ನು ಕ್ಯಾಪ್ಟೆನ್ಸಿ ಆಟದಿಂದ ಹೊರಗೆ ಇರಬೇಕಾಯಿತು. ಆಗ ಮೋಕ್ಷಿತಾ ಮತ್ತು ತ್ರಿವಿಕ್ರಮ್ ಹೆಸರನ್ನು ಗೌತಮಿ ಹೇಳಿದರು.

ಇದನ್ನೂ ಓದಿ: ಮುಖಕ್ಕೆ ಹೊಡೆದಂತೆ ಮಾತಾಡಿದ ಗೌತಮಿ; ಸ್ನೇಹ ಮಾಡಿದ್ದಕ್ಕೆ ಮಂಜುಗೆ ಸಿಕ್ಕಿದ್ದು ಇಷ್ಟೇ

ಕಳೆದ ವಾರ ಕ್ಯಾಪ್ಟೆನ್ಸಿ ಟಾಸ್ಕ್​ನಲ್ಲಿ ಮೋಕ್ಷಿತಾ ಇದ್ದರು. ಆದರೆ ಸ್ವಾಭಿಮಾನದ ಕಾರಣಕ್ಕಾಗಿ ಅವರು ಗೌತಮಿಯ ಬಳಿ ಸಹಾಯ ಕೇಳುವ ಬದಲು ಆಟವನ್ನು ಬಿಟ್ಟುಕೊಡಲು ನಿರ್ಧರಿಸಿದ್ದರು. ಆದ್ದರಿಂದ ಅವರಿಗೆ ಕ್ಯಾಪ್ಟನ್ ಆಗುವ ಅವಕಾಶ ತಪ್ಪಿ ಹೋಗಿತ್ತು. ಮೋಕ್ಷಿತಾ ಅವರ ಅವಕಾಶವನ್ನು ಬಳಸಿಕೊಂಡು ಗೌತಮಿ ಕ್ಯಾಪ್ಟನ್ ಆಗಿದ್ದರು. ಈ ವಾರ ಕೂಡ ಮೋಕ್ಷಿತಾಗೆ ಕ್ಯಾಪ್ಟನ್ ಆಗುವ ಅವಕಾಶ ಕೈತಪ್ಪಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ