ಸೋತು ಸುಣ್ಣವಾದ ಗೌತಮಿ; ವಾರದ ಟಾಸ್ಕ್​ನಲ್ಲಿ ಕ್ಲೀನ್ ಸ್ವೀಪ್ ಮಾಡಿದ ಹನುಮಂತ ಟೀಂ

ಬಿಗ್ ಬಾಸ್ ಕನ್ನಡ ಸೀಸನ್ 11 ರ 11 ನೇ ವಾರದಲ್ಲಿ ಗೌತಮಿ ಮತ್ತು ಹನುಮಂತರ ನಾಯಕತ್ವದ ಸ್ಪರ್ಧೆ ಕುತೂಹಲಕಾರಿಯಾಗಿತ್ತು. ಹನುಮಂತ ಎಲ್ಲಾ ಮೂರು ಟಾಸ್ಕ್‌ಗಳನ್ನು ಗೆದ್ದು ತಮ್ಮ ತಂಡಕ್ಕೆ ಕ್ಯಾಪ್ಟನ್ಸಿ ಓಟದಲ್ಲಿ ಸ್ಥಾನ ಗಳಿಸಿಕೊಟ್ಟರು. ಗೌತಮಿ ತಂಡ ಸೋತಿದ್ದರಿಂದ ಅವರಿಗೆ ಕಷ್ಟದ ಸಮಯ ಎದುರಾಗುವ ಸಾಧ್ಯತೆ ಇದೆ. ವಾರಗಳು ಕಳೆದಂತೆ ಸ್ಪರ್ಧೆ ತೀವ್ರಗೊಳ್ಳುತ್ತಿದೆ ಎಂಬುದು ಸ್ಪಷ್ಟ.

ಸೋತು ಸುಣ್ಣವಾದ ಗೌತಮಿ; ವಾರದ ಟಾಸ್ಕ್​ನಲ್ಲಿ ಕ್ಲೀನ್ ಸ್ವೀಪ್ ಮಾಡಿದ ಹನುಮಂತ ಟೀಂ
ಗೌತಮಿ-ಹನುಮಂತ್
Follow us
ರಾಜೇಶ್ ದುಗ್ಗುಮನೆ
|

Updated on:Dec 13, 2024 | 8:04 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರ 11ನೇ ವಾರ ಸಾಕಷ್ಟು ಕುತೂಹಲಗಳೊಂದಿಗೆ ಕೂಡಿತ್ತು. ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ವಾರ ಕಳೆದಂತೆ ಜೋರಾಗುತ್ತಿದೆ. ಇನ್ನಿರುವುದು ಕೆಲವೇ ವಾರ. ಈಗ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಬೇಕು. ಹೀಗಿರುವಾಗಲೇ ಗೌತಮಿ ಅವರಿಗೆ ಕ್ಯಾಪ್ಟನ್ ಆದ ಖುಷಿ ಒಂದು ಕಡೆ ಆದರೆ, ಸೋತು ಸುಣ್ಣವಾಗಿದ್ದು ಮತ್ತೊಂದು ಕಡೆ. ಈ ವಿಚಾರದಲ್ಲಿ ಅವರಿಗೆ ಬೇಸರ ಇದೆ. ಹನುಮಂತ ಅವರ ಕ್ಯಾಪ್ಟನ್ಸಿ ಬಗ್ಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಅವರ ತಂಡದ ಎಲ್ಲರೂ ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆ ಆಗಿದ್ದಾರೆ.

ಈ ವಾರ ಎರಡು ತಂಡಗಳನ್ನಾಗಿ ವಿಂಗಡಿಸಲಾಗಿತ್ತು. ಒಂದಕ್ಕೆ ಮನೆಯ ಕ್ಯಾಪ್ಟನ್ ಗೌತಮಿ ನಾಯಕಿ ಆದರೆ,  ಮತ್ತೊಂದು ತಂಡಕ್ಕೆ ಹನುಮಂತ ಅವರು ನಾಯಕನಾದರು. ಎರಡೂ ತಂಡಕ್ಕೆ ಒಟ್ಟೂ ಮೂರು ಟಾಸ್ಕ್​ಗಳನ್ನು ನೀಡಲಾಗಿತ್ತು. ಈ ಪೈಕಿ ಮೂರಕ್ಕೆ ಮೂರು ಟಾಸ್ಕ್​ಗಳನ್ನು ಹನುಮಂತ ಗೆದ್ದಿದ್ದಾರೆ. ಈ ಮೂಲಕ ಅವರ ತಂಡದ ಎಲ್ಲರೂ ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆ ಆದರು.

ಅತ್ತ ಗೌತಮಿ ತಂಡದಲ್ಲಿ ಇರುವ ಚೈತ್ರಾ, ಗೌತಮಿ ಮೊದಲದವರು ಎಲ್ಲ ಆಟವನ್ನೂ ಸೋತರು. ಇದು ಅವರ ತಂಡಕ್ಕೆ ಹಿನ್ನಡೆ ಉಂಟು ಮಾಡಿತು. ತಂಡದ ನಾಯಕನಾಗಿ ಸೋತ ಗೌತಮಿ ಸಾಕಷ್ಟು ನೊಂದುಕೊಂಡಿದ್ದಾರೆ. ಇದರಿಂದ ಅವರಿಗೆ ಕಳಪೆ ಪಟ್ಟ ಸಿಗುವ ಸಾಧ್ಯತೆ ಇದೆ. ಇದು ಅವರ ಆತಂಕ ಹೆಚ್ಚಿಸಿದೆ.

ಇದನ್ನೂ ಓದಿ: ಮೋಕ್ಷಿತಾನ ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದ ಗೌತಮಿ; ಮುಂದುವರಿದ ದ್ವೇಷದ ಕಾವು

ಅತ್ತ ಹನುಮಂತ ಅವರ ಚಾಕಚಕ್ಯತೆಗೆ ಎಲ್ಲರೂ ಭೇಷ್ ಎಂದಿದ್ದಾರೆ. ಅವರು ಸೈಲೆಂಟ್ ಆಗಿ ನಾಯಕತ್ವದಲ್ಲಿ ಯಶಸ್ಸು ಕಂಡಿದ್ದಾರೆ. ಈ ಎಲ್ಲಾ ಕಾರಣದಿಂದ ಅವರು ಗಮನ ಸೆಳೆದಿದ್ದಾರೆ. ಈ ವಾರ ಅವರ ತಂಡದಿಂದ ಯಾರು ನಾಯಕತ್ವ ಪಡೆದುಕೊಳ್ಳುತ್ತಾರೆ ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.

ವಾರಗಳು ಕಳೆದಂತೆ ಆಟ ಮತ್ತಷ್ಟು ಟಫ್ ಆಗುತ್ತದೆ. ಹೀಗಾಗಿ, ಈ ಸಂದರ್ಭದಲ್ಲಿ ಎಡವಿದರೆ ಮುಂದೆ ದೊಡ್ಡ ಮಟ್ಟದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ. ಈಗ ಗೌತಮಿ ಕೂಡ ಮುಂದಿನ ದಿನಗಳಲ್ಲಿ ದೊಡ್ಡ ಕಷ್ಟ ಎದುರಿಸುವ ಸೂಚನೆ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:02 am, Fri, 13 December 24

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ