ಚೈತ್ರಾ ಕುಂದಾಪುರಗೆ ದತ್ತು ಮಕ್ಕಳಾದ ಹನುಮಂತ ಹಾಗೂ ಧನರಾಜ್

ಬಿಗ್ ಬಾಸ್ ಕನ್ನಡದಲ್ಲಿ ಚೈತ್ರಾ ಕುಂದಾಪುರ ಅವರು ಧನರಾಜ್ ಮತ್ತು ಹನುಮಂತ ಅವರನ್ನು ದತ್ತು ಮಕ್ಕಳು ಎಂದಿದ್ದಾರೆ. ಕಳೆದ ವಾರ ಎಲಿಮಿನೇಷನ್‌ನಿಂದ ಪಾರಾದ ನಂತರ, ಅವರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಅವರ ತಾಯಿ-ಮಕ್ಕಳ ಬಾಂಧವ್ಯ ಬಿಗ್ ಬಾಸ್ ಮನೆಯಲ್ಲಿ ಹೇಗೆ ಮುಂದುವರಿಯುತ್ತದೆ ಎಂಬುದು ಕುತೂಹಲಕಾರಿ.

ಚೈತ್ರಾ ಕುಂದಾಪುರಗೆ ದತ್ತು ಮಕ್ಕಳಾದ ಹನುಮಂತ ಹಾಗೂ ಧನರಾಜ್
ಚೈತ್ರಾ-ಹನುಮಂತ
Follow us
ರಾಜೇಶ್ ದುಗ್ಗುಮನೆ
|

Updated on: Dec 12, 2024 | 7:21 AM

ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗೂ ಮನರಂಜನೆ ನೀಡುತ್ತಾ ಸಾಗುತ್ತಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ಅವರ ಆಟ ಕೂಡ ದಿನ ಕಳೆದಂತೆ ಏಳ್ಗೆ ಕಾಣುತ್ತಿದೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗುತ್ತಿದ್ದಾರೆ. ಈಗ ಚೈತ್ರಾ ಕುಂದಾಪುರ ಅವರು ಒಂದು ಕಾರಣಕ್ಕೆ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಅದಕ್ಕೆ ಕಾರಣ ಆಗಿರೋದು ಅವರ ದತ್ತು ಮಕ್ಕಳ ವಿಚಾರ. ಬಿಗ್ ಬಾಸ್ ಮನೆಯಲ್ಲಿ ಧನರಾಜ್ ಹಾಗೂ ಹನುಮಂತ ಅವರಿಗೆ ದತ್ತು ಮಕ್ಕಳಾಗಿದ್ದಾರೆ.

ಕಳೆದ ವೀಕೆಂಡ್​ನಲ್ಲಿ ಚೈತ್ರಾ ಅವರು ಎಲಿಮಿನೇಷನ್ ಹಂತಕ್ಕೆ ಹೋಗಿದ್ದರು. ಅವರನ್ನು ಕನ್​ಫೆಷನ್​ರೂಂನಲ್ಲಿ ಕೂರಿಸಿ ಬಿಗ್ ಬಾಸ್​ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತೋರಿಸಲಾಗುತ್ತಿತ್ತು. ಅದು ಅವರಿಗೆ ಸಾಕಷ್ಟು ಟೆನ್ಷನ್ ಕೊಟ್ಟಿತ್ತಂತೆ. ಸೇವ್ ಆಗಿ ಬಂದ ಬಳಿಕ ಚೈತ್ರಾ ಅವರು ಧನರಾಜ್ ಹಾಗೂ ಹನುಮಂತ ಬಳಿ ಈ ವಿಚಾರ ಹೇಳಿಕೊಂಡಿದ್ದರು. ‘ಹೆರಿಗೆ ನೋವು ಹೆಣ್ಣುಮಕ್ಕಳಿಗೆ ಮರುಜನ್ಮ ಎನ್ನುತ್ತಾರೆ. ಆ ನೋವು ಹೇಗಿರುತ್ತದೆ ಎಂಬುದು ಗೊತ್ತಿಲ್ಲ. ಆದರೆ, ಕನ್​ಫೆಷನ್​ ರೂಂನಲ್ಲಿ ಕುಳಿತಾಗ ಒಂದು ರೀತಿಯ ಅನುಭವ ಆಯಿತು. ಬಹುಶಃ ಆ ನೋವು ಹಾಗೆಯೇ ಇರಬಹುದು ಎಂದುಕೊಂಡೆ’ ಎಂದಿದ್ದಾರೆ ಅವರು.

‘ಆ ಹೆರಿಗೆ ನೋವಿಗೆ ಜನಿಸಿದವರು ನಾವಿಬ್ಬರು’ ಎಂದು ಧನರಾಜ್ ಅವರು ಹೇಳಿದರು. ಅಲ್ಲಿಂದ ಚೈತ್ರಾ ಅವರು ಹನುಮಂತ-ಧನರಾಜ್ ಅವರನ್ನು ಮಕ್ಕಳಂತೆ ಕಾಣುತ್ತಾ ಇದ್ದಾರೆ. ಈ ವಾರವೂ ಆ ಬಾಂಧವ್ಯ ಮುಂದುವರಿದಿದೆ. ವೀಕೆಂಡ್​ನಲ್ಲಿ ಈ ವಿಚಾರ ಚರ್ಚೆಗೆ ಬರೋ ಸಾಧ್ಯತೆ ಇದೆ.

ಇದನ್ನೂ ಓದಿ: ಮುನಿಸು ಮರೆತು ಮತ್ತೆ ಒಂದಾದ ಮೋಕ್ಷಿತಾ-ಗೌತಮಿ; ಮಂಜುನ ದೂರ ಇಟ್ಟ ಜೋಡಿ

ಚೈತ್ರಾ ಒಂದು ತಂಡ ಆದರೆ, ಹನುಮಂತ ಹಾಗೂ ಧನರಾಜ್ ಮತ್ತೊಂದು ತಂಡದಲ್ಲಿ ಇದ್ದಾರೆ. ‘ಮಕ್ಕಳಾ ನೀವು ಮತ್ತೊಂದು ತಂಡದಲ್ಲಿ ಇದ್ದೀರಾ. ನಿಮ್ಮ ಅಮ್ಮ ಮತ್ತೊಂದು ತಂಡದಲ್ಲಿದ್ದಾಳೆ’ ಎಂದು ಚೈತ್ರಾ ಹೇಳಿದರು. ಅಲ್ಲಿದ್ದವರು, ‘ತಾಯಿನ ಗೆಲ್ಲಿಸೋಕೆ ಸಹಾಯ’ ಮಾಡಿ ಎಂದು ಕೋರಿದರು. ಆಗ ಚೈತ್ರಾ ಕೂಡ ನಕ್ಕರು. ಈ ವಾರ ಧನರಾಜ್, ಚೈತ್ರಾ ಹಾಗೂ ಹನುಮಂತ ನಾಮಿನೇಷನ್ ಲಿಸ್ಟ್​ನಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ