‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಆರಂಭದಿಂದಲೇ ಸಾಕಷ್ಟು ವಿವಾದಗಳು ಸೃಷ್ಟಿ ಆದವು. ಇದಕ್ಕೆ ಕಾರಣಗಳು ಹಲವು. ವಕೀಲ ಜಗದೀಶ್ ಅವರು ದೊಡ್ಮನೆಗೆ ತೆರಳಿ ಸಾಕಷ್ಟು ಸದ್ದು ಮಾಡಿದ್ದಾರೆ. ಅವರು ಎಲ್ಲರ ವಿರುದ್ಧಕೂಗಾಡಿದ್ದರಿಂದ, ಅವಾಚ್ಯ ಶಬ್ದಗಳ ಬಳಕೆಯಿಂದ ಹೊರ ಹೋಗಿದ್ದಾರೆ. ಈ ಕಾರಣಕ್ಕೆ ಅವರು ಹೊರ ನಡೆದಿದ್ದಾರೆ. ಜಗದೀಶ್ನ ತಳ್ಳಿದ ಕಾರಣಕ್ಕೆ ರಂಜಿತ್ ದೊಡ್ಮನೆಯಿಂದ ಹೊರಕ್ಕೆ ಹೋಗಿದ್ದಾರೆ. ಈ ಎಲ್ಲಾ ಬೆಳವಣಿಗೆ ಬಳಿಕ ಚೈತ್ರಾ ಕುಂದಾಪುರ ಅವರು ಜೈಲು ಸೇರಿದ್ದಾರೆ. ಹಾಗಂತ ಹೊರಗಿನ ಜೈಲಲ್ಲ. ಬಿಗ್ ಬಾಸ್ ಮನೆಯಲ್ಲಿ ಇರೋ ಜೈಲು.
ಪ್ರತಿ ಬಿಗ್ ಬಾಸ್ ಸೀಸನ್ನಲ್ಲೂ ಜೈಲು ಇಡಲಾಗುತ್ತದೆ. ಕಳಪೆ ಕಾರಣ ನೀಡಿ ಪ್ರತಿ ವಾರ ಒಬ್ಬರನ್ನು ಜೈಲಿಗೆ ಕಳುಹಿಸಲಾಗುತ್ತದೆ. ಈ ಬಾರಿ ಪ್ರಕ್ರಿಯೆಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಅಪ್ರಾಮಣಿಕ ಹಾಗೂ ಕುತಂತ್ರಿ ಯಾರು ಎಂದು ಸೂಚಿಸಬೇಕು ಮತ್ತು ಅದಕ್ಕೆ ಸೂಕ್ತ ಕಾರಣ ನೀಡಬೇಕು. ಅಂತಿಮವಾಗಿ ಯಾರ ಬಳಿ ಹೆಚ್ಚು ಹಣೆಪಟ್ಟಿ ಇರುತ್ತದೆಯೋ ಅವರು ಜೈಲು ಸೇರಬೇಕು.
ಇದರ ಅನುಸಾರ ಚೈತ್ರಾ ಕುಂದಾಪುರ ಅವರು ಅತಿ ಹೆಚ್ಚು ಹಣೆಪಟ್ಟಿ ಪಡೆದುಕೊಂಡಿದ್ದಾರೆ. ಈ ಕಾರಣಕ್ಕೆ ಅವರು ಜೈಲು ಸೇರಿದ್ದಾರೆ. ಅವರು ಜೈಲಿಗೆ ಕಾಲಿಡುವಾಗ ಖುಷಿಯಿಂದಲೇ ತೆರಳಿದ್ದಾರೆ. ‘ನನಗೆ ಖಾಸಗಿತನ ಸಿಗುತ್ತದೆ. ಇಲ್ಲೆಲ್ಲ ನಿಮ್ಮ ಮುಖ ನೋಡಿ ಸಾಕಾಗಿದೆ’ ಎಂದರು ಅವರು. ಅವರಿಗೆ ಜೈಲಿಗೆ ಹೋಗುತ್ತಿರುವುದಕ್ಕೆ ಯಾವುದೇ ಬೇಸರ ಇಲ್ಲ.
ಇದನ್ನೂ ಓದಿ: ಮಾತಿನ ಭರಾಟೆಯಲ್ಲಿ ಕೇಳಿಸಿಕೊಳ್ಳಲು ಸೋಲುತ್ತಿರುವ ಚೈತ್ರಾ ಕುಂದಾಪುರ
ಚೈತ್ರಾ ಕುಂದಾಪುರ ಅವರು ಉದ್ಯಮಿ ಒಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸೋ ಆಮಿಷ ಒಡ್ಡಿ 5 ಕೋಟಿ ರೂಪಾಯಿ ಹಣ ಪಡೆದಿರುವ ಆರೋಪ ಹೊಂದಿದ್ದಾರೆ. ಈ ಆರೋಪವನ್ನು ಅವರು ತಳ್ಳಿ ಹಾಕಿದ್ದಾರೆ. ಈ ಪ್ರಕರಣದಲ್ಲಿ ಅವರು ಜೈಲು ಸೇರಿ ಬಂದಿದ್ದಾರೆ. ಈಗ ಬಿಗ್ ಬಾಸ್ ಮನೆಯೂ ಜೈಲಿನ ಫೀಲ್ ನೀಡಿತೇ ಎನ್ನುವ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:13 am, Sat, 19 October 24