ಮತ್ತೆ ಬಿಗ್ ಬಾಸ್​ಗೆ ಬರ್ತಾರಾ ಜಗದೀಶ್? ನೆರವೇರುತ್ತಾ ಕೋರಿಕೆ?

ಕಲರ್ಸ್ ಕನ್ನಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಪೋಸ್ಟ್​ಗಳಲ್ಲಿ ಫ್ಯಾನ್ಸ್ ಈ ಬಗ್ಗೆ ಬರೆದುಕೊಳ್ಳುತ್ತಿದ್ದಾರೆ. ‘ಜಗದೀಶ್ ಅವರನ್ನು ಮರಳಿ ತನ್ನಿ’ ಎಂದು ಕೆಲವರು ಬರೆದರೆ ಇನ್ನೂ ಕೆಲವರು, ‘ಜಗದೀಶ್ ಇಲ್ಲದ ಬಿಗ್ ಬಾಸ್​ನ ನಾವು ನೋಡಲ್ಲ’ ಎಂದಿದ್ದಾರೆ.

ಮತ್ತೆ ಬಿಗ್ ಬಾಸ್​ಗೆ ಬರ್ತಾರಾ ಜಗದೀಶ್? ನೆರವೇರುತ್ತಾ ಕೋರಿಕೆ?
ಜಗದೀಶ್
Follow us
ರಾಜೇಶ್ ದುಗ್ಗುಮನೆ
|

Updated on: Oct 19, 2024 | 1:04 PM

ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿದ ಕಾರಣಕ್ಕೆ ಜಗದೀಶ್ ಅವರನ್ನು ಬಿಗ್ ಬಾಸ್​ನಿಂದಲೇ ಎಲಿಮಿನೇಟ್ ಆಗಿದ್ದಾರೆ. ಇದು ಇಡೀ ಬಿಗ್ ಬಾಸ್ ಮನೆಗೆ ಖುಷಿ ನೀಡಿದೆ. 1 vs 15 ಎನ್ನುವ ರೀತಿಯ ಪರಿಸ್ಥಿತಿ ನಿರ್ಮಾಣ ಆಗಿತ್ತು. ಅವರು ಬಳಕೆ ಮಾಡಿರೋ ಪದಗಳ ಬಗ್ಗೆ ಕೆಲವರಿಗೆ ಬೇಸರ ಇದೆ. ಹೀಗಿರುವಾಗಲೇ ಜಗದೀಶ್ ಅವರನ್ನು ಬಿಗ್ ಬಾಸ್​ ಮನೆಗೆ ಮರಳಿ ಕರೆತರಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ.

‘ಬಿಗ್ ಬಾಸ್​’ನಲ್ಲಿ ಜಗದೀಶ್ ಅವರು ಭರ್ಜರಿ ಎಂಟರ್​ಟೇನ್​ಮೆಂಟ್ ನೀಡಿದ್ದರು. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗಿದ್ದರು. ಅವರು ನಡೆದುಕೊಳ್ಳೋದು ಮನೆಯವರಿಗೆ ಇಷ್ಟ ಆಗದೇ ಇದ್ದರೂ ಹೊರಗಿದ್ದವರು ಅವರನ್ನು ಹೆಚ್ಚು ಇಷ್ಟಪಟ್ಟಿದ್ದರು. ಆದರೆ, ಅವರು ಮೂರನೇ ವಾರದ ಮಧ್ಯದಲ್ಲೇ ಎಲಿಮಿನೇಟ್ ಆಗಿದ್ದರು. ಅವರನ್ನು ಮರಳಿ ಕರೆತರಬೇಕು ಎನ್ನುವ ಆಗ್ರಹ ಜೋರಾಗಿದೆ.

ಕಲರ್ಸ್ ಕನ್ನಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಪೋಸ್ಟ್​ಗಳಲ್ಲಿ ಫ್ಯಾನ್ಸ್ ಈ ಬಗ್ಗೆ ಬರೆದುಕೊಳ್ಳುತ್ತಿದ್ದಾರೆ. ‘ಜಗದೀಶ್ ಅವರನ್ನು ಮರಳಿ ತನ್ನಿ’ ಎಂದು ಕೆಲವರು ಬರೆದರೆ ಇನ್ನೂ ಕೆಲವರು, ‘ಜಗದೀಶ್ ಇಲ್ಲದ ಬಿಗ್ ಬಾಸ್​ನ ನಾವು ನೋಡಲ್ಲ’ ಎಂದಿದ್ದಾರೆ.

ಇನ್ನೂ ಕೆಲವರು ಬಿಗ್ ಬಾಸ್​ನ ಉಳಿದ ಸ್ಪರ್ಧಿಗಳನ್ನು ಟೀಕೆ ಮಾಡಿದ್ದಾರೆ. ‘ಮಾನಸಾ ಹಾಗೂ ಚೈತ್ರಾ ಬಾಯಲ್ಲೂ ಕೆಟ್ಟ ಶಬ್ದಗಳು ಬಂದಿವೆ. ಅವರನ್ನೂ ಹರೊಕ್ಕೆ ಕಳುಹಿಸಬೇಕು’ ಎನ್ನುವ ಆಗ್ರಹ ಜೋರಾಗಿದೆ. ಇದರಿಂದ ಬಿಗ್ ಬಾಸ್ ಆಯೋಜಕರು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೀಡಬೇಕಿದೆ.

ಇದನ್ನೂ ಓದಿ: ‘ಸುದೀಪ್ ಸರಿಯಾದ ನಿರ್ಧಾರವೇ ತೆಗೆದುಕೊಂಡಿರ್ತಾರೆ’; ಕಿಚ್ಚ ಬಿಗ್ ಬಾಸ್ ತೊರೆದ ಬಗ್ಗೆ ಮಿತ್ರ ಮಾತು

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಜಗದೀಶ್ ಅವರು ಮರಳಿ ಬರಲಿ ಫ್ಯಾನ್ಸ್ ಬೇಡಿಕೊಳ್ಳುತ್ತಿದ್ದಾರೆ. ಇದು ಹೊಸ ಅಧ್ಯಾಯ ಆಗಿರುವುದರಿಂದ ಟ್ವಿಸ್ಟ್​​ಗಳನ್ನು ನೀಡೋದಾಗಿ ಈ ಮೊದಲೇ ಸೂಚನೆ ನೀಡಲಾಗಿದೆ. ಈಗ ನಡೆದಿರೋದು ಕೂಡ ಅದರ ಭಾಗವೇ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ