‘ಬಿಗ್ ಬಾಸ್​’ನಿಂದ ನೇರವಾಗಿ ಜೈಲು ಸೇರಿದ ಚೈತ್ರಾ ಕುಂದಾಪುರ

ಚೈತ್ರಾ ಕುಂದಾಪುರ ಅವರು ಉದ್ಯಮಿ ಒಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸೋ ಆಮಿಷ ಒಡ್ಡಿ 5 ಕೋಟಿ ರೂಪಾಯಿ ಹಣ ಪಡೆದಿರುವ ಆರೋಪ ಹೊಂದಿದ್ದಾರೆ. ಈ ಪ್ರಕರಣದಲ್ಲಿ ಅವರು ಜೈಲು ಸೇರಿ ಬಂದಿದ್ದಾರೆ. ಈಗ ಅವರು ಬಿಗ್ ಬಾಸ್​ ಮನೆಯಲ್ಲೂ ಚೈತ್ರಾ ಜೈಲು ಸೇರಿದ್ದಾರೆ.

‘ಬಿಗ್ ಬಾಸ್​’ನಿಂದ ನೇರವಾಗಿ ಜೈಲು ಸೇರಿದ ಚೈತ್ರಾ ಕುಂದಾಪುರ
ಚೈತ್ರಾ
Follow us
ರಾಜೇಶ್ ದುಗ್ಗುಮನೆ
|

Updated on:Oct 19, 2024 | 7:37 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಆರಂಭದಿಂದಲೇ ಸಾಕಷ್ಟು ವಿವಾದಗಳು ಸೃಷ್ಟಿ ಆದವು. ಇದಕ್ಕೆ ಕಾರಣಗಳು ಹಲವು. ವಕೀಲ ಜಗದೀಶ್ ಅವರು ದೊಡ್ಮನೆಗೆ ತೆರಳಿ ಸಾಕಷ್ಟು ಸದ್ದು ಮಾಡಿದ್ದಾರೆ. ಅವರು ಎಲ್ಲರ ವಿರುದ್ಧಕೂಗಾಡಿದ್ದರಿಂದ, ಅವಾಚ್ಯ ಶಬ್ದಗಳ ಬಳಕೆಯಿಂದ ಹೊರ ಹೋಗಿದ್ದಾರೆ. ಈ ಕಾರಣಕ್ಕೆ ಅವರು ಹೊರ ನಡೆದಿದ್ದಾರೆ. ಜಗದೀಶ್​ನ ತಳ್ಳಿದ ಕಾರಣಕ್ಕೆ ರಂಜಿತ್ ದೊಡ್ಮನೆಯಿಂದ ಹೊರಕ್ಕೆ ಹೋಗಿದ್ದಾರೆ. ಈ ಎಲ್ಲಾ ಬೆಳವಣಿಗೆ ಬಳಿಕ ಚೈತ್ರಾ ಕುಂದಾಪುರ ಅವರು ಜೈಲು ಸೇರಿದ್ದಾರೆ. ಹಾಗಂತ ಹೊರಗಿನ ಜೈಲಲ್ಲ. ಬಿಗ್ ಬಾಸ್ ಮನೆಯಲ್ಲಿ ಇರೋ ಜೈಲು.

ಪ್ರತಿ ಬಿಗ್ ಬಾಸ್​ ಸೀಸನ್​ನಲ್ಲೂ ಜೈಲು ಇಡಲಾಗುತ್ತದೆ. ಕಳಪೆ ಕಾರಣ ನೀಡಿ ಪ್ರತಿ ವಾರ ಒಬ್ಬರನ್ನು ಜೈಲಿಗೆ ಕಳುಹಿಸಲಾಗುತ್ತದೆ. ಈ ಬಾರಿ ಪ್ರಕ್ರಿಯೆಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಅಪ್ರಾಮಣಿಕ ಹಾಗೂ ಕುತಂತ್ರಿ ಯಾರು ಎಂದು ಸೂಚಿಸಬೇಕು ಮತ್ತು ಅದಕ್ಕೆ ಸೂಕ್ತ ಕಾರಣ ನೀಡಬೇಕು. ಅಂತಿಮವಾಗಿ ಯಾರ ಬಳಿ ಹೆಚ್ಚು ಹಣೆಪಟ್ಟಿ ಇರುತ್ತದೆಯೋ ಅವರು ಜೈಲು ಸೇರಬೇಕು.

ಇದರ ಅನುಸಾರ ಚೈತ್ರಾ ಕುಂದಾಪುರ ಅವರು ಅತಿ ಹೆಚ್ಚು ಹಣೆಪಟ್ಟಿ ಪಡೆದುಕೊಂಡಿದ್ದಾರೆ. ಈ ಕಾರಣಕ್ಕೆ ಅವರು ಜೈಲು ಸೇರಿದ್ದಾರೆ. ಅವರು ಜೈಲಿಗೆ ಕಾಲಿಡುವಾಗ ಖುಷಿಯಿಂದಲೇ ತೆರಳಿದ್ದಾರೆ. ‘ನನಗೆ ಖಾಸಗಿತನ ಸಿಗುತ್ತದೆ. ಇಲ್ಲೆಲ್ಲ ನಿಮ್ಮ ಮುಖ ನೋಡಿ ಸಾಕಾಗಿದೆ’ ಎಂದರು ಅವರು. ಅವರಿಗೆ ಜೈಲಿಗೆ ಹೋಗುತ್ತಿರುವುದಕ್ಕೆ ಯಾವುದೇ ಬೇಸರ ಇಲ್ಲ.

ಇದನ್ನೂ ಓದಿ: ಮಾತಿನ ಭರಾಟೆಯಲ್ಲಿ ಕೇಳಿಸಿಕೊಳ್ಳಲು ಸೋಲುತ್ತಿರುವ ಚೈತ್ರಾ ಕುಂದಾಪುರ

ಚೈತ್ರಾ ಕುಂದಾಪುರ ಅವರು ಉದ್ಯಮಿ ಒಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸೋ ಆಮಿಷ ಒಡ್ಡಿ 5 ಕೋಟಿ ರೂಪಾಯಿ ಹಣ ಪಡೆದಿರುವ ಆರೋಪ ಹೊಂದಿದ್ದಾರೆ. ಈ ಆರೋಪವನ್ನು ಅವರು ತಳ್ಳಿ ಹಾಕಿದ್ದಾರೆ. ಈ ಪ್ರಕರಣದಲ್ಲಿ ಅವರು ಜೈಲು ಸೇರಿ ಬಂದಿದ್ದಾರೆ. ಈಗ ಬಿಗ್ ಬಾಸ್ ಮನೆಯೂ ಜೈಲಿನ ಫೀಲ್ ನೀಡಿತೇ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:13 am, Sat, 19 October 24

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ