ಮೇ 12ರಿಂದ ಹೊಸ ಧಾರಾವಾಹಿ ‘ಸ್ನೇಹದ ಕಡಲಲ್ಲಿ’; ಸ್ಟಾರ್ ಸುವರ್ಣದಲ್ಲಿ ಪ್ರಸಾರ

‘ಸ್ನೇಹದ ಕಡಲಲ್ಲಿ’ ಧಾರಾವಾಹಿಯಲ್ಲಿ ಚಂದು ಗೌಡ ಅವರು ಶಿವರಾಜ್ ಅರಸ್ ಎಂಬ ಪಾತ್ರ ಮಾಡುತ್ತಿದ್ದಾರೆ. ಅವರ ತಂದೆಯ ಪಾತ್ರದಲ್ಲಿ ಜನಪ್ರಿಯ ನಟ ಸುಮನ್ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೀತಂ ಶೆಟ್ಟಿ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಈ ಸೀರಿಯಲ್ ಮೂಡಿಬರುತ್ತಿದೆ. ಕಾವ್ಯ ಮಹದೇವ್ ಕೂಡ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ಮೇ 12ರಿಂದ ಹೊಸ ಧಾರಾವಾಹಿ ‘ಸ್ನೇಹದ ಕಡಲಲ್ಲಿ’; ಸ್ಟಾರ್ ಸುವರ್ಣದಲ್ಲಿ ಪ್ರಸಾರ
Snehada Kadalalli Serial Team

Updated on: May 09, 2025 | 9:13 PM

‘ಸ್ಟಾರ್ ಸುವರ್ಣ’ (Star Suvarna) ವಾಹಿನಿ‌ಯಲ್ಲಿ ಇದೇ ಸೋಮವಾರದಿಂದ (ಮೇ 12) ಹೊಸ ಧಾರಾವಾಹಿ ‘ಸ್ನೇಹದ ಕಡಲಲ್ಲಿ’ ಪ್ರಸಾರ ಆಗಲಿದೆ. ಪ್ರತಿದಿನ ರಾತ್ರಿ 8.30ಕ್ಕೆ ಇದು ಬಿತ್ತರ ಆಗಲಿದೆ. ಈ ಬಗ್ಗೆ ಮಾಹಿತಿ ನೀಡಲು ಇತ್ತೀಚೆಗೆ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಈ ಧಾರಾವಾಹಿಗೆ ಪ್ರೀತಂ ಶೆಟ್ಟಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಚಂದು ಗೌಡ, ಸುಮನ್ ತಲ್ವಾರ್, ಕಾವ್ಯ ಮಹದೇವ್ ಅವರು ಈ ಸೀರಿಯಲ್​ನಲ್ಲಿ ನಟಿಸುತ್ತಿದ್ದಾರೆ. ಇದು ಸುಮನ್ ಅವರ ಮೊದಲ ಕನ್ನಡದ ಸೀರಿಯಲ್ ಎಂಬುದು ವಿಶೇಷ. ಈ ಎಲ್ಲ ವಿಷಯಗಳ ಬಗ್ಗೆ ‘ಸ್ನೇಹದ ಕಡಲಲ್ಲಿ’ (Snehada Kadalalli) ತಂಡದವರು ಮಾಧ್ಯಮಗಳ ಎದುರು ಮಾಹಿತಿ ಹಂಚಿಕೊಂಡರು.

‘ಅವಕಾಶ ನೀಡಿದ ಸ್ಟಾರ್ ಸುವರ್ಣ ಚಾನೆಲ್​ಗೆ ಧನ್ಯವಾದಗಳು. ಸೀರಿಯಲ್​ಗಳಲ್ಲಿ ಒಂದು ಮದುವೆಯನ್ನು 1 ವಾರ ತೋರಿಸುತ್ತೀರಿ ಎಂಬ ಮಾತು‌ ಕೇಳಿ ಬರುತ್ತದೆ. ಆದರೆ ನಮ್ಮ ಧಾರಾವಾಹಿಯಲ್ಲಿ ಬರೀ 4 ನಿಮಿಷದಲ್ಲಿ ಮದುವೆ ಸನ್ನಿವೇಶ ಮುಕ್ತಾಯ ಆಗುತ್ತೆ. ಸಾಮಾನ್ಯವಾಗಿ ಧಾರಾವಾಹಿಗಳ ಹಿನ್ನೆಲೆ ಸಂಗೀತದಲ್ಲಿ ಸಿನಿಮಾ ಹಾಡುಗಳನ್ನು ಬಳಸಿಕೊಳ್ಳುವುದು ವಾಡಿಕೆ. ಆದರೆ ನಾವು ಹೊಸ ಸಾಂಗ್ ಸಿದ್ಧ ಮಾಡಿದ್ದೇವೆ‌. ಹೀಗೆ ಅನೇಕ ವಿಶೇಷಗಳಿರುವ ಈ ಧಾರಾವಾಹಿ ನಮ್ಮದು’ ಎಂದರು ನಿರ್ದೇಶಕ ಪ್ರೀತಂ ಶೆಟ್ಟಿ.

Snehada Kadalalli Serial Team

‘ಪಿಂಗಾರ ಪ್ರೊಡಕ್ಷನ್ಸ್’ ಮೂಲಕ ಈ ಧಾರಾವಾಹಿ ನಿರ್ಮಾಣ ಆಗುತ್ತಿದೆ. ನಟ ಸುಮನ್ ಮಾತನಾಡಿ, ‘ನಾನು ಚಿತ್ರರಂಗಕ್ಕೆ ಬಂದು 47 ವರ್ಷ ಕಳೆಯಿತು. ಕನ್ನಡ, ತೆಲುಗು, ತಮಿಳು ಸೇರಿದಂತೆ 11 ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಪ್ರೀತಂ ಶೆಟ್ಟಿ ಅವರ ನಿರ್ದೇಶನದ ಸಿನಿಮಾದಲ್ಲೂ ನಟಿಸಿದ್ದೇನೆ. ‘ಸ್ನೇಹದ ಕಡಲಲ್ಲಿ’ ನನ್ನ ಮೊದಲ ಕನ್ನಡ ಸೀರಿಯಲ್. ಕಥೆ ನನಗೆ ಇಷ್ಟವಾಯಿತು. ಸ್ಟಾರ್ ಸುವರ್ಣ ವಾಹಿನಿ ಆಯ್ಕೆ ಮಾಡುವ ಕಂಟೆಂಟ್ ಚೆನ್ನಾಗಿರುತ್ತೆ. ಆದ್ದರಿಂದ ಅಭಿನಯಿಸಲು ಒಪ್ಪಿಕೊಂಡೆ’ ಎಂದರು.

ಇದನ್ನೂ ಓದಿ
ಸೀರಿಯಲ್ ಟಿಆರ್​ಪಿಯಲ್ಲಿ ಈ ಧಾರಾವಾಹಿಯೇ ನಂಬರ್ 1; ದಾಖಲೆಗಳೆಲ್ಲ ಉಡೀಸ್
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ನಿಲ್ಲಿಸಲು ಬೇಡಿಕೆ ಇಟ್ಟ ವೀಕ್ಷಕರು; ಕಾರಣ?
ಸಿಹಿಯ ಆತ್ಮ ಹಿಡಿದುಕೊಂಡ ಅಘೋರಿ; ಪ್ರಯಾಗ್​ರಾಜ್​​ನಲ್ಲಿ ‘ಸೀತಾ ರಾಮ’ ತಂಡ
ತ್ರಿವಿಕ್ರಂ ಪಾಲಿಗೆ ಒಲಿದ ಅದೃಷ್ಟ; ಹೊಸ ಸೀರಿಯಲ್​ಗೆ ಹೀರೋ ಆದ ನಟ

ಇದನ್ನೂ ಓದಿ: 38 ವರ್ಷ ಕಳೆದರೂ ‘ರಾಮಾಯಣ’ ಧಾರಾವಾಹಿ ದಾಖಲೆ ಯಾರೂ ಮುರಿದಿಲ್ಲ; ಇಲ್ಲಿದೆ ಲೆಕ್ಕ

ಸುದ್ದಿಗೋಷ್ಠಿಯಲ್ಲಿ ನಟ ಚಂದು ಗೌಡ ಮಾತನಾಡಿ, ‘ನಾನು ಕಿರುತೆರೆಗೆ ಬಂದು ಸುಮಾರು 11 ವರ್ಷ ಆಯಿತು. ಕೆಲವು ಸಿನಿಮಾಗಳಲ್ಲೂ ಅಭಿನಯಿಸಿದ್ದೇನೆ. ನನಗೆ ಸಿನಿಮಾದಲ್ಲಿ ಮತ್ತು ಸೀರಿಯಲ್​ನಲ್ಲಿ ನಟಿಸುವುದು ಎರಡೂ ಒಂದೇ. ‘ಸ್ನೇಹದ ಕಡಲಲ್ಲಿ’ ಧಾರಾವಾಹಿಯ 30 ನಿಮಿಷದ ಸಂಚಿಕೆ ನೋಡಿದರೂ ಒಂದು ಸಿನಿಮಾ ನೋಡಿದ ಅನುಭವ ಪ್ರೇಕ್ಷಕರಿಗೆ ಆಗುತ್ತದೆ’ ಎಂದು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.