ಸಿಹಿಯ ಆತ್ಮ ಹಿಡಿದುಕೊಂಡ ಅಘೋರಿ; ಪ್ರಯಾಗ್ರಾಜ್ನಲ್ಲಿ ‘ಸೀತಾ ರಾಮ’ ತಂಡ
ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿಯ ಆತ್ಮದ ಕಥಾವಸ್ತು ಪ್ರಯಾಗರಾಜ್‌ಗೆ ತೆರಳುವ ಮೂಲಕ ಹೊಸ ತಿರುವು ಪಡೆದಿದೆ. ಕುಂಭಮೇಳದ ಹಿನ್ನೆಲೆಯಲ್ಲಿ, ಸಿಹಿಯ ಆತ್ಮವನ್ನು ಅಘೋರಿಯೊಬ್ಬ ಹಿಡಿದಿದ್ದು, ಅವಳ ಆಸೆಗಳನ್ನು ಈಡೇರಿಸುತ್ತಾರೆ. ಸಿಹಿಯ ಆತ್ಮಕ್ಕೆ ಶಾಂತಿ ದೊರೆಯುವುದೇ ಎಂಬುದು ಕುತೂಹಲಕಾರಿ. ಧಾರಾವಾಹಿಯ ಸಮಯ ಬದಲಾವಣೆಯಿಂದ ಟಿಆರ್ಪಿಯಲ್ಲಿ ಏರಿಳಿತ ಕಂಡುಬಂದಿದೆ.

ಟಿಆರ್ಪಿ ಪಡೆದುಕೊಳ್ಳಲು ಧಾರಾವಾಹಿ ತಂಡಗಳು ನಾನಾ ಪ್ರಯೋಗಗಳನ್ನು ಮಾಡುವುದು ಗೊತ್ತೇ ಇದೆ. ಹೊಸ ಹೊಸ ಪ್ರಯೋಗಗಳು ನಿತ್ಯ ನಡೆಯುತ್ತವೆ. ಕೆಲವು ಭಿನ್ನ ಎನಿಸಿಕೊಂಡರೆ ಇನ್ನೂ ಕೆಲವು ಹಳೆಯ ರೀತಿಯಲ್ಲಿ ಇರುತ್ತವೆ. ಈಗ ‘ಸೀತಾ ರಾಮ’ ಧಾರಾವಾಹಿ ತಂಡದವರು ಕೂಡ ಹೊಸ ಪ್ರಯೋಗ ಮಾಡಿದ್ದಾರೆ. ಈ ತಂಡ ನೇರವಾಗಿ ಪ್ರಯಾಗರಾಜಕ್ಕೆ ತೆರಳಿದೆ. ಈ ಮೂಲಕ ವೀಕ್ಷಕರಿಗೆ ಅಚ್ಚರಿ ಮೂಡಿಸಿದೆ. ಅಘೋರಿಯೊಬ್ಬರು ಸಿಹಿಯ ಆತ್ಮವನ್ನು ಹಿಡುದುಕೊಂಡಿದ್ದಾರೆ.
ಸದ್ಯ ಕುಂಭಮೆಳ ನಡೆಯುತ್ತಿದೆ. ಇದಕ್ಕೆ ದೇಶ-ವಿದೇಶಗಳಿಂದ ಹಿಂದೂಗಳು ಬಂದು ಪವಿತ್ರ ಸ್ನಾನ ಮಾಡಿ ಪಾಪ ತೊಳೆದುಕೊಂಡಿದ್ದಾರೆ. ವಿಶೇಷ ಎಂದರೆ ‘ಸೀತಾ ರಾಮ’ ತಂಡದವರೂ ಇಲ್ಲಿಗೆ ತೆರಳಿದ್ದಾರೆ. ಈ ಮೂಲಕ ಕಥೆಗೆ ಹೊಸ ಟ್ವಿಸ್ಟ್ ಕೊಡೋ ಕೆಲಸ ಆಗಿದೆ. ಸಿಹಿಯ ಆತ್ಮ ಹೊರಟು ಹೋಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಸಿಹಿ ಸತ್ತು ಹೋಗಿದ್ದಾಳೆ. ಭಾರ್ಗವಿ ಮಾಡಿದ ಕುತಂತ್ರಕ್ಕೆ ಆಕೆ ಬಲಿಯಾಗಿದ್ದಾಳೆ. ಆಕೆ ಸತ್ತ ಬಳಿಕ ಆತ್ಮ ಆಗಿದ್ದಾಳೆ. ಆತ್ಮವಾಗಿ ಎಲ್ಲ ಕಡೆಗಳಲ್ಲಿ ಓಡಾಡುತ್ತಿದ್ದಾಳೆ. ಸಿಹಿ ರೀತಿಯಲ್ಲೇ ಇರುವ ಸುಬ್ಬಿಯನ್ನು ಕರೆತರಲಾಗಿದ್ದು, ಆಕೆಗೆ ಗೈಡ್ ಮಾಡುವ ಕೆಲಸವನ್ನು ಸಿಹಿಯ ಆತ್ಮ ಮಾಡುತ್ತಿದೆ. ಈಗ ಪ್ರಯಾಗರಾಜ್‌ಗೆ ಹೋಗಿ ಸ್ನಾನ ಮಾಡಿ ಸಿಹಿಯ ಆತ್ಮಕ್ಕೆ ಶಾಂತಿ ಕೊಡಿಸೋ ಕೆಲಸ ಆಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಸಿಹಿ ಯಾರ ಕಣ್ಣಿಗೂ ಕಾಣುವುದಿಲ್ಲ. ಆದರೆ, ಸಿಹಿಯ ಆತ್ಮವನ್ನು ಅಘೋರಿ ಬಂದು ಹಿಡಿದುಕೊಳ್ಳುತ್ತಾನೆ. ‘ನಾನು ನಿಮಗೆ ಕಾಣಿಸ್ತಾ ಇದೀನಾ’ ಎಂದು ಸಿಹಿ ಕೇಳುತ್ತಾಳೆ. ‘ನನಗೆ ಎಲ್ಲರೂ ಕಾಣಿಸುತ್ತಾರೆ’ ಎಂದು ಅಘೋರಿ ಉತ್ತರಿಸುತ್ತಾರೆ. ಆ ಬಳಿಕ ಅಪ್ಪ-ಅಮ್ಮನ ತಬ್ಬಿಕೊಳ್ಳುವ ಆಸೆಯನ್ನು ಸಿಹಿಯು ಅಘೋರಿ ಎದುರು ವ್ಯಕ್ತಪಡಿಸುತ್ತಾಳೆ. ಇದಕ್ಕೆ ಅಘೋರಿ ಸಮ್ಮತಿಸುತ್ತಾರೆ. ಸಿಹಿಯ ಆಸೆ ಈಡೇರಿಸುತ್ತಾರೆ.
View this post on Instagram
ಈ ಎಪಿಸೋಡ್ ಶಿವರಾತ್ರಿಗೆ ಪ್ರಸಾರ ಕಾಣಲಿದೆ. ಒಂದೊಮ್ಮೆ ಪ್ರಯಾಗ್ರಾಜ್ನಲ್ಲಿ ಸ್ನಾನ ಮಾಡಿ ಸಿಹಿಯ ಆತ್ಮಕ್ಕೆ ಶಾಂತಿ ಕೊಡಿಸಿದರೆ ಆಕೆ ಮಾಯವಾಗಿ ಬಿಡುತ್ತಾಳಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ: ಸೀತಾಗೆ ಸಿಹಿ ಸಿಗೋ ಮೊದಲೇ ಬದಲಾಯಿತು ‘ಸೀತಾ ರಾಮ’ ಪ್ರಸಾರ ಸಮಯ: ವೀಕ್ಷಕರ ಅಸಮಾಧಾನ
ಈ ಮೊದಲು ‘ಸೀತಾ ರಾಮ’ ಧಾರಾವಾಹಿ ರಾತ್ರಿ 9.30ಕ್ಕೆ ಪ್ರಸಾರ ಕಾಣುತ್ತಿತ್ತು. ಆದರೆ, ಈಗ ಸಮಯದಲ್ಲಿ ಬದಲಾವಣೆ ಆಗಿದೆ. ಪ್ರತಿದಿನ ಸಂಜೆ 5.30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಇದರಿಂದ ಟಿಆರ್ಪಿಯಲ್ಲಿ ಕೊಂಚ ಏರಿಳಿತ ಆಗಿದೆ. ಈಗ ಈ ರೀತಿಯ ಪ್ರಯೋಗಗಳಿಂದ ಟಿಆರ್ಪಿ ಹೆಚ್ಚಿಸಿಕೊಳ್ಳುವ ಹುಮ್ಮಸ್ಸಿನಲ್ಲಿ ತಂಡದವರು ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.