ಸೀರಿಯಲ್ ಟಿಆರ್ಪಿಯಲ್ಲಿ ಈ ಧಾರಾವಾಹಿಯೇ ನಂಬರ್ 1; ದಾಖಲೆಗಳೆಲ್ಲ ಉಡೀಸ್
ಇತ್ತೀಚಿನ ಕನ್ನಡ ಧಾರಾವಾಹಿಗಳ ಟಿಆರ್ಪಿ ರೇಟಿಂಗ್ಸ್ ಬಿಡುಗಡೆಯಾಗಿದ್ದು, ಜೀ ಕನ್ನಡದ ಈ ಹೊಸ ಧಾರಾವಾಹಿ ಅಗ್ರಸ್ಥಾನ ಪಡೆದಿದೆ. ಕೇವಲ 22 ಎಪಿಸೋಡ್‌ಗಳಲ್ಲಿ ಈ ಯಶಸ್ಸು ಸಾಧಿಸಿದೆ. ‘ಶ್ರಾವಣಿ ಸುಬ್ರಮಣ್ಯ’,‘ಲಕ್ಷ್ಮೀ ನಿವಾಸ’ ಮತ್ತು ‘ಅಮೃತಧಾರೆ’ ಧಾರಾವಾಹಿಗಳು ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.

ಸೀರಿಯಲ್ ಟಿಆರ್ಪಿ ಲೆಕ್ಕಾಚಾರ ವಾರದಿಂದ ವಾರಕ್ಕೆ ಬದಲಾವಣೆ ಕಾಣುತ್ತಲೇ ಇರುತ್ತವೆ. ಈ ಪೈಕಿ ಕೆಲವು ಯಶಸ್ಸು ಕಂಡರೆ ಇನ್ನೂ ಕೆಲವು ಫ್ಲಾಪ್ ಎನಿಸಿಕೊಂಡ ಉದಾಹರಣೆ ಇದೆ. ಈಗ ಸೀರಿಯಲ್ ಟಿಆರ್ಪಿಯ ಲೆಕ್ಕಾಚಾರ ಹೊರ ಬಿದ್ದಿದೆ. ಈ ಬಾರಿ ಹೊಸ ಧಾರಾವಾಹಿಗೆ ಮೊದಲ ಸ್ಥಾನ ಸಿಕ್ಕಿದೆ. ಈ ಮೂಲಕ ಎಲ್ಲಾ ಧಾಖಲೆಗಳು ಧೂಳಿಪಟ ಆಗಿದೆ.
ಧಾರಾವಾಹಿ ಪ್ರಸಾರ ಆರಂಭಿಸಿದ ಬಳಿಕೆ ಕೆಲವೇ ವಾರಗಳಲ್ಲಿ ಧಾರಾವಾಹಿಯಲ್ಲಿ ಧಮ್ ಇದೆಯೋ ಅಥವಾ ಇಲ್ಲವೋ ಎಂಬುದು ಗೊತ್ತಾಗಿಬಿಡುತ್ತದೆ. ಈ ಆಧಾರದ ಮೇಲೆ ಟಿಆರ್ಪಿ ನಿರ್ಧಾರ ಆಗುತ್ತದೆ. ಈಗ ಧಾರಾವಾಹಿ ರೇಸ್ನಲ್ಲಿ ಇತ್ತೀಚೆಗೆ ಪ್ರಸಾರ ಆರಂಭಿಸಿದ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ಈ ಧಾರಾವಾಹಿ ಕೇವಲ 22 ಎಪಿಸೋಡ್ಗಳನ್ನು ಪೂರ್ಣಗೊಳಿಸಿದ್ದು, ಪ್ರೇಕ್ಷಕರಿಗೆ ಇಷ್ಟ ಆಗುತ್ತಿದೆ.
ಈ ಧಾರಾವಾಹಿ ಯಶಸ್ಸು ಕಾಣಲು ಒಂದು ಕಾರಣವೂ ಇದೆ. ಈ ಧಾರಾವಾಹಿಯಲ್ಲಿ ವೀಣಾ ಸುಂದರ್ ವಿಲನ್ ಪಾತ್ರ ಮಾಡಿದ್ದಾರೆ. ಮಾಟ-ಮಂತ್ರದ ಕಥೆ ಇದೆ. ಕಥೆಯ ನಿರೂಪಣೆ, ಗ್ರಾಫಿಕ್ಸ್ ಕೂಡ ಉತ್ತಮ ಗುಣಮಟ್ಟ ಹೊಂದಿದೆ. ಈ ಕಾರಣಕ್ಕೆ ಧಾರಾವಾಹಿ ನಂಬರ್ 1 ಸ್ಥಾನ ಪಡೆದುಕೊಂಡಿದೆ ಎಂಬ ಮಾತು ಕೇಳಿ ಬಂದಿದೆ.
ಎರಡನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ. ‘ಲಕ್ಷ್ಮೀ ನಿವಾಸ’ ಟಿಆರ್ಪಿ ರೇಸ್ನಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ನಾಲ್ಕನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ‘ಸೀತಾ ರಾಮ’ ಧಾರಾವಾಹಿಯ ಸಮಯದಲ್ಲಿ ಬದಲಾವಣೆ ಆಗಿದೆ. ಹೀಗಾಗಿ, ಟಿಆರ್ಪಿ ಗಣನೀಯವಾಗಿ ಕುಸಿತ ಕಂಡಿದೆ ಎನ್ನಬಹುದು.
ಇದನ್ನೂ ಓದಿ: ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ನಿಲ್ಲಿಸಲು ಬೇಡಿಕೆ ಇಟ್ಟ ವೀಕ್ಷಕರು; ಕಾರಣ?
‘ಮ್ಯಾಕ್ಸ್’ ಚಿತ್ರ ಇತ್ತೀಚೆಗೆ ಪ್ರಸಾರ ಕಂಡಿತ್ತು. ಅದರ ಟಿಆರ್ಪಿ ಕೂಡ ಹೊರ ಬಿದ್ದಿದೆ. ಈ ಧಾರಾವಾಹಿ ಬರೋಬ್ಬರಿ 7.1 ರೇಟಿಂಗ್ ಪಡೆದಿದೆ. ಈ ಮೂಲಕ ಕಿರುತೆರೆ ಲೋಕದಲ್ಲೂ ಈ ಧಾರಾವಾಹಿ ಬ್ಲಾಕ್ಬಸ್ಟರ್ ಎನಿಸಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.