ಒಂದೇ ವಾರಕ್ಕೆ ಬೇರೆ ಭಾಷೆಗೆ ರಿಮೇಕ್ ಆಯ್ತು ಸೂಪರ್ ಹಿಟ್ ಧಾರಾವಾಹಿ
ಜೀ ಕನ್ನಡದ ಜನಪ್ರಿಯ ಧಾರಾವಾಹಿ ‘ನಾ ನಿನ್ನ ಬಿಡಲಾರೆ’ ಮರಾಠಿ ಭಾಷೆಗೆ ರಿಮೇಕ್ ಆಗುತ್ತಿದೆ. ಕನ್ನಡದಲ್ಲಿ ಯಶಸ್ವಿಯಾಗಿ ಪ್ರಸಾರವಾಗುತ್ತಿರುವ ಈ ಹಾರರ್ ಧಾರಾವಾಹಿಯನ್ನು ಝೀ ಮರಾಠಿಯಲ್ಲಿ ‘ತುಲಾ ಜಪ್ನಾರ್ ಆಚೆ’ ಎಂಬ ಹೆಸರಿನಲ್ಲಿ ಪ್ರಸಾರ ಮಾಡಲಾಗುವುದು. ಈ ರಿಮೇಕ್‌ನಲ್ಲಿ ಅತ್ಯುತ್ತಮ VFX ಮತ್ತು ಕಥಾಹಂದರವಿದೆ ಎಂದು ನಿರೀಕ್ಷಿಸಲಾಗಿದೆ.

ಜೀ ಕನ್ನಡದಲ್ಲಿ ಹಲವು ಧಾರಾವಾಹಿಗಳು ಪ್ರಸಾರ ಕಾಣುತ್ತಿವೆ. ಈ ಪೈಕಿ ಕೆಲವು ಧಾರಾವಾಹಿಗಳು ಪರಭಾಷೆಗೆ ಡಬ್ ಆದರೆ, ಇನ್ನೂ ಕೆಲವು ರಿಮೇಕ್ ಆಗುತ್ತಿವೆ. ಈಗ ಜೀ ಕನ್ನಡದಲ್ಲಿ ಪ್ರಸಾರ ಆರಂಭಿಸಿದ ಹೊಸ ಧಾರಾವಾಹಿ ಈಗ ಮರಾಠಿ ಭಾಷೆಗೆ ರಿಮೇಕ್ ಆಗುತ್ತಿದೆ. ಈ ವಿಚಾರ ಅಭಿಮಾನಿಗಳಿಗೆ ಅಚ್ಚರಿ ತಂದಿದೆ. ಯಾವುದು ಆ ಧಾರಾವಾಹಿ? ಅದುವೇ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ.
‘ನಾ ನಿನ್ನ ಬಿಡಲಾರೆ’ ಕನ್ನಡದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದು. ಈ ಸಿನಿಮಾದಲ್ಲಿ ಅನಂತ್ ನಾಗ್ ಹಾಗೂ ಲಕ್ಷ್ಮೀ ಅವರು ನಟಿಸಿದ್ದರು. ಈ ಚಿತ್ರದ ಶೀರ್ಷಿಕೆಯನ್ನು ಇಟ್ಟುಕೊಂಡು ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಮಾಡಲಾಗಿದೆ ಎಂಬುದು ವಿಶೇಷ. ಈ ಧಾರಾವಾಹಿ ಮೆಚ್ಚುಗೆ ಪಡೆದಿದೆ. ಈಗ ಈ ಧಾರಾವಾಹಿ ಮರಾಠಿಗೆ ರಿಮೇಕ್ ಆಗಿದೆ ಅನ್ನೋದು ವಿಶೇಷ.
ಜೀ ಮರಾಠಿ ವಾಹಿನಿಯಲ್ಲಿ ‘ತುಲಾ ಜಪ್ನಾರ್ ಆಚೆ’ ಹೆಸರಿನಲ್ಲಿ ಧಾರಾವಾಹಿ ಸಿದ್ಧಗೊಂಡಿದೆ. ಈ ಧಾ ರಾವಾಹಿಯ ಪ್ರೋಮೋ ಪ್ರಸಾರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಈ ಧಾರಾವಾಹಿ ಫೆಬ್ರವರಿ 17ರಿಂದ ಪ್ರಸಾರ ಕಾಣಲಿದೆ. ಈ ಧಾರಾವಾಹಿಯಲ್ಲಿ ಶಾರ್ವರಿ ಲೋಹೋಕರೆ, ನೀರಜ್ ಗೋಸ್ವಾಮಿ, ಪ್ರತೀಷ್ಕಾ ಶಿವಂಕರ್, ಮಿಲಿಂದ್ ಫಾಟಕ್, ಪೂರ್ಣಿಮಾ ತಲ್ವಾಲ್ಕರ್, ನೀಲೇಶ್ ರಾನಡೆ ಅವರಂತಹ ಕಲಾವಿದರು ನಟಿಸಿದ್ದಾರೆ. ಕನ್ನಡ ಹಾಗೂ ಮರಾಠಿಯಲ್ಲಿ ಧಾರಾವಾಹಿ ಒಟ್ಟೊಟ್ಟಿಗೆ ಸಿದ್ಧಗೊಳ್ಳುತ್ತಿದೆ ಎಂದು ಕೆಲವು ವರದಿ ಹೇಳಿದೆ.
ಜೀ ಕನ್ನಡದಲ್ಲಿ ಈ ಧಾರಾವಾಹಿ ರಾತ್ರಿ 9.30ಕ್ಕೆ ಪ್ರಸಾರ ಕಾಣುತ್ತಿದೆ. ಹಾರರ್ ಧಾರಾವಾಹಿ ಆಗಿರುವುದರಿಂದ ಈ ಸ್ಲಾಟ್ ನೀಡಲಾಗಿದೆ. ಮರಾಠಿಯಲ್ಲಿ ಈ ಧಾರಾವಾಹಿ ರಾತ್ರಿ 10.30ಕ್ಕೆ ಪ್ರಸಾರ ಕಾಣಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಮೇಕಿಂಗ್ ಮೂಲಕ ಗಮನ ಸೆಳೆದ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ; ಎಲ್ಲವೂ ಸಿನಿಮಾ ಗುಣಮಟ್ಟ
ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಧಾರಾವಾಹಿ ಪಕ್ಕಾ ಹಾರರ್ ಶೈಲಿಯಲ್ಲಿ ಮೂಡಿ ಬಂದಿದೆ. ಈ ಧಾರಾವಾಹಿ ಒಂದೇ ವಾರದಲ್ಲಿ ಎಲ್ಲರ ಗಮನ ಸೆಳೆದಿದೆ. ಈ ಧಾರಾವಾಹಿಯ ವಿಶೇಷ ಆಕರ್ಷಣೆ ಎಂದರೆ VFX. ಈ ಸರಣಿಯಲ್ಲಿನ VFX ನೋಡಲು ಮತ್ತು ಅನುಭವಿಸಲು ಯೋಗ್ಯವಾಗಿದೆ. ಇದು ಮರೆಯಲಾಗದ ಕಥಾಹಂದರದೊಂದಿಗೆ ಕಣ್ಣು ಕುಕ್ಕುವ ಗ್ರ್ಯಾಂಡ್ ಆಗಿ ಪ್ರಸಾರ ಕಾಣುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.