ಮುದ್ದೆ ತಿನ್ನಲ್ಲು ಉಗುರು ಬಳಸ್ತಾರೆ ನಿವೇದಿತಾ ಗೌಡ; ಈ ಸ್ಟೈಲ್ಗೆ ಶಾಕ್ ಆದ ಶ್ರುತಿ
ನಟಿ ನಿವೇದಿತಾ ಗೌಡ ಅವರು ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಲ್ಲಿ ತಮ್ಮ ಮುದ್ದೆ ತಿನ್ನುವ ವಿಧಾನದ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ಉಗುರು ಬಳಸಿ ಮುದ್ದೆ ತಿನ್ನುತ್ತಾರೆ ಎಂದು ಹೇಳಿದ್ದು ಅಚ್ಚರಿ ಮೂಡಿಸಿದೆ. ಇದಕ್ಕೂ ಮುನ್ನ ಸ್ಪೂನ್ ಮತ್ತು ಫೋರ್ಕ್ ಬಳಸಿ ಮುದ್ದೆ ತಿನ್ನುವ ವಿಡಿಯೋ ವೈರಲ್ ಆಗಿತ್ತು. ನಿವೇದಿತಾ ಅವರ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ನಟಿ ನಿವೇದಿತಾ ಗೌಡ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಳ್ಳುವ ವಿಡಿಯೋಗಳು ಹಲ್ಚಲ್ ಎಬ್ಬಿಸುತ್ತವೆ. ಇದಕ್ಕೆ ಸಾಕಷ್ಟು ಲೈಕ್ಸ್ಗಳು ಕೂಡ ಬರುತ್ತವೆ. ಈಗ ನಿವೇದಿತಾ ಗೌಡ ಅವರು ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋಗೆ ಬಂದು ಗಮನ ಸೆಳೆದಿದ್ದಾರೆ. ಈ ರಿಯಾಲಿಟಿ ಶೋನಲ್ಲಿ ಅವರು ಹೇಳಿದ ಒಂದು ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ.
ನಿವೇದಿತಾ ಗೌಡ ಅವರಿಗೆ ಮುದ್ದೆ ತಿನ್ನೋಕೆ ಸರಿಯಾಗಿ ಬರೋದಿಲ್ಲ. ಈ ಮೊದಲು ಅವರು ಸ್ಪೂನ್ ಹಾಗೂ ಪೋರ್ಕ್ ಬಳಸಿ ಮುದ್ದೆ ತಿಂದಿದ್ದ ವಿಡಿಯೋ ಸಾಕಷ್ಟು ಸದ್ದು ಮಾಡಿತ್ತು. ಈ ವಿಡಿಯೋ ವೈರಲ್ ಆಗಿ ಅವರು ಟೀಕೆ ಎದುರಿಸಿದ್ದರು. ಈಗ ಗೊತ್ತಾಗಿರೋ ಮತ್ತೊಂದು ವಿಚಾರ ಎಂದರೆ ಅವರು ಮುದ್ದೆ ತಿನ್ನೋಕೆ ಉಗುರನ್ನು ಬಳಸೋದಾಗಿ ಹೇಳಿದ್ದಾರೆ.
‘ಬಾಯ್ಸ್ vs ಗರ್ಲ್ಸ್’ ವೇದಿಕೆ ಮೇಲೆ ಶ್ರುತಿ ಅವರು ನಿವೇದಿತಾಗೆ ಪ್ರಶ್ನೆ ಮಾಡಿದರು. ‘ಯಾರಾದರೂ ನಿಮಗೆ ಮುದ್ದೆ ಕೊಟ್ಟರೆ ಅದನ್ನು ಹೇಗೆ ತಿನ್ನುತ್ತೀರಿ? ಉಗುರಿನಿಂದ ತೊಂದರೆ ಆಗಲ್ವ’ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ನಿವೇದಿತಾ, ‘ನಾನು ಮುದ್ದೆ ತಿನ್ನೋಕೆ ಸ್ಪೂನ್ ಹಾಗೂ ಪೋರ್ಕ್ ಬಳಸುತ್ತಿದ್ದೆ. ಈಗ ಉಗುರನ್ನೇ ಚಮಚ ಹಾಗೂ ಪೋರ್ಕ್ ರೀತಿ ಬಳಸುತ್ತೇನೆ. ಒಂದರಲ್ಲಿ ಕಟ್ ಮಾಡ್ತೀನಿ, ಮತ್ತೊಂದರಲ್ಲಿ ತಿನ್ನುತ್ತೇನೆ’ ಎಂದರು ನಿವೇದಿತಾ. ಅವರ ಉತ್ತರ ಕೇಳಿ ಶ್ರುತಿ ಶಾಕ್ ಆಗಿ ಹೋದರು.
ಇದನ್ನೂ ಓದಿ: ಫೋಟೋಶೂಟ್ ಎಂದರೆ ನಿವೇದಿತಾ ಗೌಡಗೆ ಎಲ್ಲಿಲ್ಲದ ಉತ್ಸಾಹ
ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋ ಫೆಬ್ರವರಿ 1ರಿಂದ ಪ್ರಸಾರ ಆರಂಭಿಸಿದೆ. ಪ್ರತಿ ವೀಕೆಂಡ್ ಈ ಶೋ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತದೆ. ಈ ಮೊದಲು ಬಿಗ್ ಬಾಸ್ನಲ್ಲಿ ಇದ್ದವರೇ ಈ ಶೋನ ಭಾಗವಾಗುತ್ತಿದ್ದಾರೆ. ಇನ್ನು ನಿವೇದಿತಾ ವಿಚಾರಕ್ಕೆ ಬರೋದಾದರೆ, ಅವರು ಪತಿ ಚಂದನ್ ಶೆಟ್ಟಿ ಅವರಿಂದ ವಿಚ್ಛೇದನ ಪಡೆದು ದೂರ ಆಗಿದ್ದಾರೆ. ಈ ವಿಚಾರ ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಹೊಂದಾಣಿಕೆ ಸಾಧ್ಯವಾಗದ ಕಾರಣ ಇವರು ಬೇರೆ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.