‘ಪುಟ್ಟಕ್ಕನ ಮಕ್ಕಳು’: ಅಪಘಾತದಲ್ಲಿ ಸ್ನೇಹಾ ಮರಣ; ಕೊನೆ ಆಯಿತು ಸಂಜನಾ ಬುರ್ಲಿ ಪಾತ್ರ

ಸಂಜನಾ ಬುರ್ಲಿ ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಿಂದ ನಿರ್ಗಮಿಸುತ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹರಡಿದೆ. ಈಗ ಧಾರಾವಾಹಿಯಲ್ಲಿ ಅವರ ಪಾತ್ರದ ಅಪಘಾತದ ಮರಣ ಶಾಕ್ ತಂದಿದೆ. ಈ ನಿರ್ಗಮನವು ಧಾರಾವಾಹಿಯ ಟಿಆರ್​ಪಿ ಮೇಲೆ ಪರಿಣಾಮ ಬೀರಬಹುದು ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

‘ಪುಟ್ಟಕ್ಕನ ಮಕ್ಕಳು’: ಅಪಘಾತದಲ್ಲಿ ಸ್ನೇಹಾ ಮರಣ; ಕೊನೆ ಆಯಿತು ಸಂಜನಾ ಬುರ್ಲಿ ಪಾತ್ರ
ಸಂಜನಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 25, 2024 | 11:53 AM

ಸಂಜನಾ ಬುರ್ಲಿ ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಿಂದ ಹೊರ ಬರುತ್ತಿದ್ದಾರೆ ಎಂದು ಇತ್ತೀಚೆಗೆ ಸುದ್ದಿ ಆಗಿತ್ತು. ಇದಕ್ಕೆ ಕಾರಣ ಆಗಿದ್ದು ಅವರು ಮಾಡಿದ್ದ ಪೋಸ್ಟ್. ‘ಕೆಲವೊಂದಕ್ಕೆ ವಿದಾಯ ಹೇಳುವುದು ತುಂಬಾ ಕಷ್ಟ. ಆದರೆ ಕೆಲವೊಂದು ಬೆಳವಣಿಗೆಗೆ ಇದು ಬಹಳ ಅವಶ್ಯಕ ಆಗಿದೆ’ ಎಂದು ಬರೆದುಕೊಂಡಿದ್ದರು. ಈಗ ‘ಪುಟ್ಟಕ್ಕ  ಮಕ್ಕಳು’ ಧಾರಾವಾಹಿಯಲ್ಲಿ ಬಂದ ತಿರುವು ನೋಡಿ ಪಾತ್ರ ಕೊನೆ ಆಗೋದು ಖಚಿತ ಎಂದು ವೀಕ್ಷಕರು ಮಾತನಾಡಿಕೊಳ್ಳಲಾಗುತ್ತಿದೆ.

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಸಂಜನಾ ಅವರು ಡಿಸಿ ಸ್ನೇಹಾ ಹೆಸರಿನ ಪಾತ್ರ ಮಾಡುತ್ತಿದ್ದರು. ಅವರು ಬಂಗಾರಮ್ಮನ ಜೊತೆ ಅಮ್ಮ ಪುಟ್ಟಕ್ಕನ ಬರ್ತ್​​ಡೇ ಆಚರಿಸಿಕೊಳ್ಳಲು ಹೊರಟಿದ್ದರು. ಆಗ ಟ್ರಕ್ ಒಂದು ಬಂದು ಇವರು ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರೂ ರಕ್ತ-ಸಿಕ್ತವಾಗಿ ಬಿದ್ದಿದ್ದಾರೆ.

ಆಗ ಸ್ಥಳಕ್ಕೆ ಬರುವ ಸ್ನೇಹಾ ಪತಿ ಕಂಠಿ, ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡುತ್ತಾನೆ. ಆಸ್ಪತ್ರೆಯಲ್ಲಿ ವೈದ್ಯರ ಕಡೆಯಿಂದ ಬ್ಯಾಡ್ ನ್ಯೂಸ್ ಸಿಗುತ್ತದೆ. ‘ನಿಮ್ಮ ಕಡೆಯವರು ಯಾರೂ ಬದುಕಿಲ್ಲ’ ಎನ್ನುವ ಸಂದೇಶವನ್ನು ವೈದ್ಯರು ನೀಡುತ್ತಾರೆ. ಇದನ್ನು ಕೇಳಿ ಕಂಠಿ ಶಾಕ್​ಗೆ ಒಳಗಾಗುತ್ತಾನೆ.

ಈಗಾಗಲೇ ಸಂಜನಾ ಪಾತ್ರ ಕೊನೆ ಆಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹೀಗಿರುವಾಗಲೇ ಅಪಘಾತದಲ್ಲಿ ಸ್ನೇಹಾ ಪಾತ್ರ ಕೊನೆ ಆಗುವ ಸೂಚನೆ ಸಿಕ್ಕಿದೆ. ಈ ಎಲ್ಲಾ ಕಾರಣದಿಂದ ಧಾರಾವಾಹಿಯಲ್ಲಿ ಸಂಜನಾ ಪಾತ್ರ ಕೊನೆ ಆಗೋದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಧಾರಾವಾಹಿಗೆ ನಿರ್ದೇಶಕರು ಕೊಟ್ಟ ಈ ತಿರುವನ್ನು ಯಾರೂ ಒಪ್ಪುತ್ತಿಲ್ಲ.

ಇದನ್ನೂ ಓದಿ: ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಗೆ ಸಂಜನಾ ಬುರ್ಲಿ ಗುಡ್​ಬೈ?​

ಸಮಯ ಬದಲಾವಣೆ ಮಧ್ಯೆಯೂ ಜನರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯನ್ನು ನೋಡುತ್ತಿದ್ದರು. ಈ ಧಾರಾವಾಹಿ ಈ ವಾರದ ಟಿಆರ್​ಪಿಯಲ್ಲಿ ನಂಬರ್ 1 ಸ್ಥಾನ ಪಡೆಯಿತು. ಹೀಗಿರುವಾಲೇ ಪ್ರಮುಖ ಪಾತ್ರವೇ ಕೊನೆ ಆದರೆ ಧಾರಾವಾಹಿ ನೋಡೋದು ಹೇಗೆ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.