Dinesh Phadnis: ‘ಸಿಐಡಿ’ ಧಾರಾವಾಹಿ ನಟ ದಿನೇಶ್​ ಫಡ್ನಿಸ್​ ಇನ್ನಿಲ್ಲ; ಲಿವರ್​ ಸಮಸ್ಯೆಯಿಂದ ನಿಧನ

|

Updated on: Dec 05, 2023 | 12:14 PM

Fredericks: ಹಿಂದಿ ಕಿರುತೆರೆಯ ಖ್ಯಾತ ನಟ ದಿನೇಶ್​ ಫಡ್ನಿಸ್​ ಅವರು ನಿಧನರಾಗಿದ್ದಾರೆ. ಈ ಕಹಿ ಸುದ್ದಿ ಕೇಳಿ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ‘ಸಿಐಡಿ’ ಸೀರಿಯಲ್​ ಮೂಲಕ ದಿನೇಶ್​ ಅವರು ಫೇಮಸ್​ ಆಗಿದ್ದರು. ತೀವ್ರ ಅನಾರೋಗ್ಯದಿಂದ ಅವರು ಕೊನೆಯುಸಿರು ಎಳೆದಿದ್ದಾರೆ. ಪತ್ನಿ ನಯನಾ ಮತ್ತು ಪುತ್ರಿ ತನು ಅವರನ್ನು ದಿನೇಶ್​ ಅಗಲಿದ್ದಾರೆ.

Dinesh Phadnis: ‘ಸಿಐಡಿ’ ಧಾರಾವಾಹಿ ನಟ ದಿನೇಶ್​ ಫಡ್ನಿಸ್​ ಇನ್ನಿಲ್ಲ; ಲಿವರ್​ ಸಮಸ್ಯೆಯಿಂದ ನಿಧನ
ದಿನೇಶ್​ ಫಡ್ನಿಸ್​
Follow us on

ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದ್ದ ‘ಸಿಐಡಿ’ಯಲ್ಲಿ ಫ್ರೆಡ್ರಿಕ್ಸ್​ (Fredericks) ಎಂಬ ಪಾತ್ರ ಮಾಡುತ್ತಿದ್ದ ನಟ ದಿನೇಶ್​ ಫಡ್ನಿಸ್​ ನಿಧನರಾಗಿದ್ದಾರೆ. ಲಿವರ್​ ಸಮಸ್ಯೆಯಿಂದ (Liver Damage) ಅವರು ಬಳಲುತ್ತಿದ್ದರು. ಕೆಲವೇ ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೇ ಅವರು ಮೃತರಾಗಿದ್ದಾರೆ. ಡಿಸೆಂಬರ್​ 2ರಿಂದ ಅವರನ್ನು ವೆಂಟಿಲೇಟರ್​ನಲ್ಲಿ ಇರಿಸಲಾಗಿತ್ತು. ಸೋಮವಾರ (ಡಿಸೆಂಬರ್​ 4) ರಾತ್ರಿ ಅವರು ನಿಧನರಾದರು ಎಂದು ತಿಳಿದುಬಂದಿದೆ. ಇಂದು (ಡಿ.5) ದಿನೇಶ್​ ಫಡ್ನಿಸ್​ (Dinesh Phadnis) ಅವರ ಅಂತ್ಯಕ್ರಿಯೆ ನಡೆಯಲಿದೆ.

ದಿನೇಶ್​ ಫಡ್ನಿಸ್​ ಅವರಿಗೆ ಹೃದಯಾಘಾತ ಆಗಿತ್ತು ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಆಗಿತ್ತು. ಆದರೆ ಅವರಿಗೆ ಹೃದಯಾಘಾತ ಆಗಿಲ್ಲ ಎಂದು ಅವರ ಸ್ನೇಹಿತ ದಯಾನಂದ್​ ಶೆಟ್ಟಿ ಸ್ಪಷ್ಟನೆ ನೀಡಿದ್ದರು. ‘ಇದು ಬೇರೆ ಚಿಕಿತ್ಸೆ. ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲಾರೆ’ ಎಂದು ಅವರು ಹೇಳಿದ್ದರು. ‘ಸಿಐಡಿ’ ಸೀರಿಯಲ್​ನಲ್ಲಿ ದಿನೇಶ್​ ಮತ್ತು ಫಡ್ನಿಸ್​ ಜೊತೆಯಾಗಿ ನಟಿಸಿದ್ದರು.

ಡಿಟೆಕ್ಟೀವ್​ ಕಥಾಹಂದರದ ‘ಸಿಐಡಿ’ ಧಾರಾವಾಹಿಯು 1998ರಿಂದ 2018ರ ತನಕ ಪ್ರಸಾರವಾಯಿತು. ಭಾರತೀಯ ಕಿರುತೆರೆತಲ್ಲಿ ಅತಿ ಹೆಚ್ಚು ಕಾಲ ಪ್ರಸಾರವಾದ ಸೀರಿಯಲ್​ಗಳಲ್ಲಿ ಇದು ಕೂಡ ಒಂದು. ಈ ಸೀರಿಯಲ್​ನಲ್ಲಿ ದಿನೇಶ್​ ಫಡ್ನಿಸ್​ ಅವರು ಮಾಡಿದ್ದ ಫ್ರೆಡ್ರಿಕ್ಸ್​ ಎಂಬ ಪಾತ್ರವನ್ನು ಜನರು ತುಂಬ ಇಷ್ಟಪಟ್ಟಿದ್ದರು. ನಗು ಉಕ್ಕಿಸುವ ಕಾರಣದಿಂದ ಆ ಪಾತ್ರ ಫೇಮಸ್​ ಆಗಿತ್ತು. ದಿನೇಶ್​ ಫಡ್ನಿಸ್​ ನಿಧನಕ್ಕೆ ಅಭಿಮಾನಿಗಳು, ಆಪ್ತರು ಕಂಬನಿ ಮಿಡಿದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಲಾಗುತ್ತಿದೆ.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ; ಖ್ಯಾತ ಕಿರುತೆರೆ ನಟ ನಿಧನ, ಮೂವರ ಸ್ಥಿತಿ ಗಂಭೀರ

ನಟನೆ ಮಾತ್ರವಲ್ಲದೇ ಇದೇ ಸೀರಿಯಲ್​ನ ಕೆಲವು ಸಂಚಿಕೆಗಳಿಗೆ ಬರಹಗಾರನಾಗಿಯೂ ದಿನೇಶ್ ಫಡ್ನಿಸ್​ ಅವರು ಕೆಲಸ ಮಾಡಿದ್ದರು. ‘ತಾರಕ್​ ಮೆಹ್ತಾ ಕಾ ಉಲ್ಟಾ ಚಷ್ಮಾ’ ಸೀರಿಯಲ್​ನಲ್ಲಿ ಅವರು ಅತಿಥಿ ಪಾತ್ರವನ್ನೂ ಮಾಡಿದ್ದರು. ‘ಸೂಪರ್​ 30’, ‘ಸರ್ಫರೋಷ್​’ ಮುಂತಾದ ಸಿನಿಮಾಗಳಲ್ಲಿಯೂ ದಿನೇಶ್​ ನಟಿಸಿದ್ದರು. 57ನೇ ವಯಸ್ಸಿನಲ್ಲಿ ಅವರು ಇಹಲೋಕ ತ್ಯಜಿಸಿದ್ದಾರೆ. ದೌಲತ್​ ನಗರ್​ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.