ಬಿಗ್ ಬಾಸ್ ಕನ್ನಡ 12: ಗಿಲ್ಲಿಗಿಂತಲೂ ಮೊದಲೇ ಫಿನಾಲೆ ತಲುಪಿದ ಧನುಷ್

ಆರಂಭದಿಂದಲೂ ಓಡುವ ಕುದುರೆ ಆಗಿದ್ದ ಗಿಲ್ಲಿ ನಟ ಅವರು ಇನ್ನೂ ಫಿನಾಲೆಗೆ ತಲುಪಿಲ್ಲ. ಆದರೆ ಅವರಿಗಿಂತಲೂ ಮೊದಲು ಧನುಷ್ ಅವರು ಬಿಗ್ ಬಾಸ್ ಫಿನಾಲೆಗೆ ಎಂಟ್ರಿ ಪಡೆದಿದ್ದಾರೆ. ಟಾಪ್ 6 ಆಟದಲ್ಲಿ ಧನುಷ್ ಅವರು ಎಲ್ಲರಿಗಿಂತ ಚೆನ್ನಾಗಿ ಆಟ ಆಡಿ ಮುನ್ನಡೆ ಸಾಧಿಸಿದ್ದಾರೆ.

ಬಿಗ್ ಬಾಸ್ ಕನ್ನಡ 12: ಗಿಲ್ಲಿಗಿಂತಲೂ ಮೊದಲೇ ಫಿನಾಲೆ ತಲುಪಿದ ಧನುಷ್
Dhanush, Gilli Nata

Updated on: Jan 09, 2026 | 10:31 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋನಲ್ಲಿ ಯಾರು ಗೆಲ್ಲುತ್ತಾರೆ ಎಂಬ ಬಗ್ಗೆ ಜೋರಾಗಿ ಚರ್ಚೆ ನಡೆಯುತ್ತಿದೆ. ಗಿಲ್ಲಿ ನಟ ಅವರ ಮೇಲೆ ವೀಕ್ಷಕರು ಭರವಸೆ ಇಟ್ಟುಕೊಂಡಿದ್ದಾರೆ. ಆದರೆ ಟಾಪ್ 6 ಆಟದಲ್ಲಿ ಗಿಲ್ಲಿ ನಟ (Gilli Nata) ಅವರು ಎಡವಿದ್ದಾರೆ. ಎಲ್ಲರಿಗಿಂತ ಮೊದಲು ಗಿಲ್ಲಿ ನಟ ಅವರೇ ಫಿನಾಲೆ ಪ್ರವೇಶಿಸಬಹುದು ಎಂದು ಊಹಿಸಲಾಗಿತ್ತು. ಆದರೆ ಆಗಿದ್ದೇ ಬೇರೆ. ಗಿಲ್ಲಿ ನಟ ಅವರಿಗಿಂತಲೂ ಮೊದಲು ಧನುಷ್ (Dhanush) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಫಿನಾಲೆಯನ್ನು ತಲುಪಿದ್ದಾರೆ. ಅವರ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.

ಕಳೆದ ವಾರ ಧನುಷ್ ಅವರು ಕ್ಯಾಪ್ಟನ್ ಆದರು. ಅವರು ಈ ಸೀಸನ್​ನ ಕೊನೇ ಕ್ಯಾಪ್ಟನ್ ಆದ್ದರಿಂದ ಅವರಿಗೆ ಕೆಲವು ವಿಶೇಷ ಅಧಿಕಾರಗಳು ಸಿಕ್ಕವು. ಟಾಪ್ 6 ಆಟದಲ್ಲಿ ನೇರವಾಗಿ ಸ್ಪರ್ಧಿಸುವ ಚಾನ್ಸ್ ಅವರಿಗೆ ಸಿಕ್ಕಿತ್ತು. ಅದನ್ನು ಅವರು ಚೆನ್ನಾಗಿ ಉಪಯೋಗಿಸಿಕೊಂಡರು. ಕೊನೆಯ ಟಾಸ್ಕ್​​ನಲ್ಲಿ ಜಯಶಾಲಿ ಆಗುವ ಮೂಲಕ ಅವರು ಫಿನಾಲೆ ತಲುಪಿದರು.

ಈ ಟಾಸ್ಕ್​​ನಲ್ಲಿ ಅಶ್ವಿನಿ ಗೌಡ, ಧನುಷ್, ಮ್ಯೂಟೆಂಟ್ ರಘು, ಕಾವ್ಯಾ ಶೈವ ಅವರು ಭಾಗಿ ಆಗಿದ್ದರು. ಎಲ್ಲರ ನಡುವೆ ಟಫ್ ಸ್ಪರ್ಧೆ ಏರ್ಪಟ್ಟಿತ್ತು. ಅತಿ ಕಡಿಮೆ ಸಮಯದಲ್ಲಿ ಟಾಸ್ಕ್ ಪೂರ್ಣಗೊಳಿಸಿದ ಧನುಷ್ ಅವರು ಫಿನಾಲೆಗೆ ಟಿಕೆಟ್ ಪಡೆದರು. ಇನ್ನುಳಿದವರಿಗೆ ಸಹಜವಾಗಿಯೇ ನಿರಾಸೆ ಆಯಿತು. ಧನುಷ್ ಫಿನಾಲೆ ತಲುಪಿದ್ದಕ್ಕೆ ರಾಶಿಕಾ ಶೆಟ್ಟಿ ಅವರು ಹೆಚ್ಚು ಖುಷಿಪಟ್ಟರು.

ಆರಂಭದಲ್ಲಿ ಧನುಷ್ ಅವರು ಹೆಚ್ಚು ಆ್ಯಕ್ಟೀವ್ ಆಗಿರಲಿಲ್ಲ. ಟಾಸ್ಕ್ ಚೆನ್ನಾಗಿ ಆಡಿದ್ದರೂ ಕೂಡ ಮನರಂಜನೆ ನೀಡುವುದರಲ್ಲಿ ಹಿಂದುಳಿದಿದ್ದರು. ಆದರೆ ಟಾಸ್ಕ್​​ನಲ್ಲಿ ಸಿಕ್ಕ ಅವಕಾಶಗಳನ್ನು ಅವರು ಸೂಕ್ತವಾಗಿ ಉಪಯೋಗಿಸಿಕೊಂಡು ಇನ್ನುಳಿದವರನ್ನು ಹಿಂದಿಕ್ಕಿದರು. ಕಿರುತೆರೆಯಲ್ಲಿ ಮಿಂಚಿರುವ ಅವರಿಗೆ ಅಭಿಮಾನಿ ಬಳಗ ಇದೆ. ಅಭಿಮಾನಿಗಳಿಂದ ವೋಟ್ಸ್ ಸಿಗಲಿದೆ.

ಇದನ್ನೂ ಓದಿ: ಬನಿಯನ್ ಹಾಕಿದರೂ ರಾಜನಂತೆ ಬಾಳುತ್ತಿರುವ ಗಿಲ್ಲಿ ನಟ: ಗೆಲುವಿನ ಸೂಚನೆ ಕೊಟ್ಟ ಸುದೀಪ್

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಗಿಲ್ಲಿ ನಟ ಅವರು ಸಿಕ್ಕಾಪಟ್ಟೆ ಹೈಲೈಟ್ ಆಗಿದ್ದಾರೆ. ಹೊರಗಡೆ ಅವರಿಗೆ ಇರುವ ಅಭಿಮಾನಿ ಬಳಗ ಹಿರಿದಾಗಿದೆ. ಇನ್​ಸ್ಟಾಗ್ರಾಮ್​​ನಲ್ಲಿ ಅವರನ್ನು ಹಿಂಬಾಲಿಸುವವರ ಸಂಖ್ಯೆ 10 ಲಕ್ಷ ದಾಟಿದೆ. ಒಂದು ಮಿಲಿಯನ್ ಫಾಲೋವರ್ಸ್ ಆಗಬೇಕು ಎಂಬುದು ಗಿಲ್ಲಿ ಕನಸಾಗಿತ್ತು. ಅದು ನನಸಾಗಿದೆ. ಅವರು ವಿನ್ ಆಗುತ್ತಾರಾ ಇಲ್ಲವಾ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.