ಗಿಲ್ಲಿ ಮೇಲೆ ರಕ್ಷಿತಾಗೆ ನಿಜಕ್ಕೂ ಆಗಿದೆ ಪ್ರೀತಿ? ಈ ಘಟನೆಗಳೇ ಸಾಕ್ಷಿ
ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಮತ್ತು ಗಿಲ್ಲಿ ನಡುವಿನ ಬಾಂಧವ್ಯ ಎಲ್ಲರ ಗಮನ ಸೆಳೆದಿದೆ. 'ಗಿಲ್ಲಿ ರೀತಿಯ ಹುಡುಗ ಬೇಕು' ಎಂದು ರಕ್ಷಿತಾ ಆಗಾಗ ಹೇಳುತ್ತಿದ್ದಾರೆ. ಗಿಲ್ಲಿಗೆ ಪ್ರೀತಿ ವಿಷಯದಲ್ಲಿ ಸಲಹೆ ನೀಡುವುದು, ಅವರ ಜೊತೆ ಏಕಾಂತವಾಗಿ ಸಮಯ ಕಳೆಯಲು ಪ್ರಯತ್ನಿಸುವುದನ್ನು ನೋಡಿದರೆ, ಗಿಲ್ಲಿ ಮೇಲೆ ರಕ್ಷಿತಾಗೆ ನಿಜಕ್ಕೂ ಪ್ರೀತಿ ಮೂಡಿದೆಯೇ ಎಂಬ ಪ್ರಶ್ನೆ ಮೂಡಿದೆ.

ಗಿಲ್ಲಿ ರೀತಿಯ ಹುಡುಗ ಬೇಕು ಎಂದು ರಕ್ಷಿತಾ ಶೆಟ್ಟಿ ಆಗಾಗ ಹೇಳುತ್ತಾ ಇರುತ್ತಾರೆ. ಬಿಗ್ ಬಾಸ್ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ ಅವರಿಗೆ ಗಿಲ್ಲಿ ಮೇಲಿನ ಒಲವು ಹೆಚ್ಚಿದಂತೆ ಕಾಣಿಸುತ್ತಿದೆ. ಅವರು ಸದಾ ಗಿಲ್ಲಿ ಜೊತೆ ಇರುತ್ತಾರೆ. ಗಿಲ್ಲಿಗೆ ಪ್ರೀತಿ ವಿಷಯದಲ್ಲಿ ಕೆಲವು ಸಲಹೆಗಳನ್ನು ಕೂಡ ನೀಡಿದ್ದಾರೆ. ಇವುಗಳನ್ನು ನೋಡಿದರೆ ಗಿಲ್ಲಿ ಮೇಲೆ ರಕ್ಷಿತಾಗೆ ನಿಜಕ್ಕೂ ಲವ್ ಆಗಿದೆಯೇ ಎಂಬ ಪ್ರಶ್ನೆ ಮೂಡುವಂತೆ ಆಗಿದೆ. ಆ ಬಗ್ಗೆ ಇಲ್ಲಿದೆ ವಿವರ.
ಗಿಲ್ಲಿ ನಟ ಹಾಗೂ ಕಾವ್ಯಾ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಈ ಕಾರಣದಿಂದಲೇ ಕಾವ್ಯಾ ಮೇಲೆ ರಕ್ಷಿತಾ ಕೋಪ ಹೊರಹಾಕುತ್ತಾರೆ ಎಂಬ ವಾದ ಇದೆ. ಇದನ್ನು ರಕ್ಷಿತಾ ಶೆಟ್ಟಿ ಒಪ್ಪಿಕೊಳ್ಳೋದಿಲ್ಲ. ಜನವರಿ 8ರ ಎಪಿಸೋಡ್ನಲ್ಲಿ ಕಾವ್ಯಾ ಹಾಗೂ ಗಿಲ್ಲಿ ಮಧ್ಯೆ ಜಗಳ ಆಗಿದೆ. ಈ ವೇಳೆ ಕೆಲವು ಸಲಹೆಗಳನ್ನು ರಕ್ಷಿತಾ ಅವರು ನೀಡಿದ್ದಾರೆ.
‘ನೀವು ಯಾರ ಬಳಿಯೂ ಪ್ರೀತಿಸುವಂತೆ ಒತ್ತಾಯಿಸಬಾರದು. ಯಾರು ನಿಮ್ಮನ್ನು ಪ್ರೀತಿಸುತ್ತಾರೋ ಅವರಿಗೆ ಸಮಯ ಹಾಗೂ ಪ್ರೀತಿ ಕೊಡಬೇಕು’ ಎಂದು ಮಾತನಾಡಿದರು. ಅಲ್ಲಿಯೇ ಇದ್ದ ರಘು ಅವರಿಗೆ ಈ ಮಾತು ಅರ್ಥವಾಗಿ ಹೋಯಿತು. ಕಾವ್ಯಾ ಬಳಿ ಮಾತನಾಡುವಂತೆ, ಗಮನ ಕೊಡುವಂತೆ ಒತ್ತಾಯಿಸುವ ಬದಲು ಪ್ರೀತಿ ತೋರಿಸುವ ತಮ್ಮ ಬಗ್ಗೆ ಗಮನ ಹರಿಸು ಎಂಬುದು ರಕ್ಷಿತಾ ಮಾತಿನ ಅರ್ಥವಾಗಿತ್ತು.
ಇದನ್ನೂ ಓದಿ: ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ
ಇನ್ನು, ಗಿಲ್ಲಿ ಹಾಗೂ ರಕ್ಷಿತಾ ಗಾರ್ಡನ್ ಏರಿಯಾದಲ್ಲಿ ಮಾತನಾಡುತ್ತಿದ್ದರು. ಅಲ್ಲಿಯೇ ಬೀನ್ ಬ್ಯಾಗ್ ಇತ್ತು. ಈ ಬ್ಯಾಗ್ನ ಅವಳು ತೆಗೆದುಕೊಂಡು ಹೋಗಿ ದೂರದಲ್ಲಿ ಇಟ್ಟಿದ್ದಾರೆ. ಇಬ್ಬರೇ ಮಾತನಾಡಬೇಕು ಎಂಬುದು ರಕ್ಷಿತಾ ಉದ್ದೇಶ. ಸದಾ ಗಿಲ್ಲಿ ಜೊತೆಯೇ ಇರೋ ಅವರು ಆಗಾಗ ಗಿಲ್ಲಿಯ ಕೆನ್ನೆ ಹಿಂಡುವ ಕೆಲಸ ಮಾಡುತ್ತಾರೆ. ‘ಗಿಲ್ಲಿ ರೀತಿಯ ಹುಡುಗ ಬೇಕು’ ಎಂದು ಹಲವು ಬಾರಿ ಹೇಳುತ್ತಾರೆ. ಕಳೆದ ವೀಕೆಂಡ್ನಲ್ಲೂ ಇದೇ ವಿಷಯ ಚರ್ಚೆ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:06 pm, Fri, 9 January 26




