AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶ್ವಿನಿ ಗೌಡ ಮೇಲೆ ಬೆಟ್ಟದಷ್ಟು ಅಸಮಾಧಾನ: ಎಲ್ಲವನ್ನೂ ಬಹಿರಂಗವಾಗಿ ಹೇಳಿದ ಧ್ರುವಂತ್

ಸಣ್ಣ ಸಣ್ಣ ವಿಚಾರಕ್ಕೆ ಧ್ರುವಂತ್ ಮತ್ತು ಅಶ್ವಿನಿ ಗೌಡ ಅವರು ಜಗಳ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋನ ಫಿನಾಲೆ ಬರಲಿದೆ. ಧ್ರುವಂತ್ ಜೊತೆ ಜಗಳ ಆದ ಕೂಡಲೇ ರಕ್ಷಿತಾ ಶೆಟ್ಟಿ ಜೊತೆ ಅಶ್ವಿನಿ ಗೌಡ ಅವರು ಕ್ಲೋಸ್ ಆಗಿದ್ದಾರೆ.

ಅಶ್ವಿನಿ ಗೌಡ ಮೇಲೆ ಬೆಟ್ಟದಷ್ಟು ಅಸಮಾಧಾನ: ಎಲ್ಲವನ್ನೂ ಬಹಿರಂಗವಾಗಿ ಹೇಳಿದ ಧ್ರುವಂತ್
Dhruvanth, Ashwini Gowda
ಮದನ್​ ಕುಮಾರ್​
|

Updated on: Jan 08, 2026 | 10:33 PM

Share

ಅಶ್ವಿನಿ ಗೌಡ ಅವರು ಬಿಗ್ ಬಾಸ್ (BBK 12) ಆಟದಲ್ಲಿ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಅವರಿಗೆ ಇನ್ನುಳಿದವರು ಪೈಪೋಟಿ ನೀಡುತ್ತಿದ್ದಾರೆ. ಆರಂಭದಿಂದಲೂ ಅಶ್ವಿನಿ ಗೌಡ (Ashwini Gowda) ಅವರು ಅಗ್ರೆಷನ್ ತೋರಿಸುತ್ತಾ ಬಂದಿದ್ದಾರೆ. ಆ ಗುಣ ಕೆಲವರಿಗೆ ಇಷ್ಟ ಆಗಿಲ್ಲ. ಕೆಲವು ವಾರಗಳ ಕಾಲ ಅವರು ಸೈಲೆಂಟ್ ಆಗಿದ್ದರು. ಇತ್ತೀಚಿನ ದಿನಗಳಲ್ಲಿ ಧ್ರುವಂತ್ ಜೊತೆ ಅಶ್ವಿನಿ ಗೌಡ ಅವರು ಕ್ಲೋಸ್ ಆಗಿದ್ದರು. ಟಾಸ್ಕ್ ವೇಳೆ ಪರಸ್ಪರ ಬೆಂಬಲವಾಗಿ ಇದ್ದರು. ಆದರೆ 102ನೇ ದಿನದಲ್ಲಿ ಅಶ್ವಿನಿ ಗೌಡ ಮತ್ತು ಧ್ರುವಂತ್ (Dhruvanth) ನಡುವೆ ಕಿರಿಕ್ ಆಗಿದೆ. ಸಣ್ಣ ವಿಚಾರಕ್ಕೆ ಶುರುವಾದ ಜಗಳ ದೊಡ್ಡದಾಗಿದೆ.

ಧ್ರುವಂತ್ ಅವರಿಗೆ ಅಶ್ವಿನಿ ಗೌಡ ಮೇಲೆ ಬೆಟ್ಟದಷ್ಟು ಅಸಮಾಧಾನ ಇದೆ. ಆದರೂ ಕೂಡ ಅವರು ಅಶ್ವಿನಿಗೆ ಸಪೋರ್ಟ್ ಮಾಡುತ್ತಿದ್ದರು. ಆದರೆ ಅಶ್ವಿನಿಯ ಕೆಲವು ವರ್ತನೆಗಳಿಂದ ಧ್ರುವಂತ್ ಬೇಸತ್ತಿದ್ದಾರೆ. ಧ್ರುವಂತ್ ಪೂಜೆ ಮಾಡಿ ಇಟ್ಟ ಹೂವುಗಳನ್ನು ಅಶ್ವಿನಿ ಗೌಡ ತೆಗೆದುಕೊಂಡರು. ಅದರಿಂದ ಧ್ರುವಂತ್​​ಗೆ ಸಿಕ್ಕಾಪಟ್ಟೆ ಕೋಪ ಬಂತು. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು.

ಅಶ್ವಿನಿ ಗೌಡ ಅವರು ಧ್ರುವಂತ್ ಜೊತೆ ಜಗಳ ಆಡಿದ್ದನ್ನು ಕಂಡು ಗಿಲ್ಲಿ ನಟ ಗೇಲಿ ಮಾಡಿದರು. ಜಗಳದ ಬಳಿಕ ಗಿಲ್ಲಿ ಜೊತೆ ಕುಳಿತು ಧ್ರುವಂತ್ ಮಾತನಾಡಿದರು. ಆಗ ಅವರು ಅಶ್ವಿನಿ ಮೇಲೆ ತಮಗೆ ಇರುವ ಅಸಮಾಧಾನವನ್ನು ಹೊರಹಾಕಿದರು. ‘ಬೆಳಗ್ಗೆ ಬಿಸಿ ನೀರು ಬರುವಾಗ ಬೇರೆಯವರ ಸ್ನಾನ ಆಗುವುದಕ್ಕೂ ಮುನ್ನ ಅಶ್ವಿನಿ ಗೌಡ ಬಟ್ಟೆ ಒಗೆಯುತ್ತಾರೆ. ಟಾಸ್ಕ್ ವೇಳೆ ತುಪ್ಪ ಹಾಳು ಮಾಡಿದ್ದಾರೆ’ ಎಂದು ಧ್ರುವಂತ್ ಅವರು ದೂರುಗಳ ಪಟ್ಟಿ ಸಲ್ಲಿಸಿದರು.

ಒಂಟಿಯಾಗಿ ಇರಲು ಅಶ್ವಿನಿ ಗೌಡ ಅವರಿಗೆ ಸಾಧ್ಯವಿಲ್ಲ. ಒಬ್ಬರಲ್ಲ ಒಬ್ಬರ ಬೆಂಬಲ ಅವರಿಗೆ ಬೇಕಾಗುತ್ತದೆ. ಒಬ್ಬರ ಜೊತೆ ಜಗಳ ಆದರೆ ಇನ್ನೊಬ್ಬರ ಜೊತೆ ಕ್ಲೋಸ್ ಆಗುತ್ತಾರೆ. ಈಗಲೂ ಅದು ಮುಂದುವರಿದಿದೆ. ಧ್ರುವಂತ್ ಜೊತೆ ಜಗಳ ಆಗುತ್ತಿದ್ದಂತೆಯೇ ರಕ್ಷಿತಾ ಶೆಟ್ಟಿ ಜೊತೆ ಅಶ್ವಿನಿ ಗೌಡ ಅವರು ಸ್ನೇಹ ಬೆಳೆಸಲು ಮುಂದಾಗಿದ್ದಾರೆ. ಇದನ್ನು ಕಂಡು ಗಿಲ್ಲಿ, ರಘು ನಕ್ಕಿದ್ದಾರೆ.

ಇದನ್ನೂ ಓದಿ: ಅಶ್ವಿನಿ ಆಟಕ್ಕೆ ದಂಗಾದ ಇಡೀ ಮನೆ; ಭೇಷ್ ಎಂದ ಎದುರಾಳಿ ರಘು, ರಕ್ಷಿತಾ

ಎಷ್ಟೇ ಜಗಳ ಆದರೂ ಧ್ರುವಂತ್ ಮತ್ತು ಅಶ್ವಿನಿ ಗೌಡ ಅವರು ಮತ್ತೆ ಮತ್ತೆ ಒಂದಾಗುತ್ತಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಧ್ರುವಂತ್ ಅವರು ಹೇಳಿದ್ದಾರೆ. ‘ಅಶ್ವಿನಿ ಅವರು ಈ ಮನೆಯಲ್ಲಿ ಹಿರಿಯರು. ತಾಯಿ ಸ್ಥಾನದಲ್ಲಿ ಇದ್ದಾರೆ. ಆ ಕಾರಣಕ್ಕಾಗಿ ಸುಮ್ಮನೆ ಇದ್ದೇನೆ’ ಎಂದಿದ್ದಾರೆ ಧ್ರುವಂತ್. ಇನ್ನು ಕೆಲವೇ ದಿನಗಳಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಫಿನಾಲೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.