ಬಿಗ್ ಬಾಸ್​ ಶೋನಿಂದ ಎಲಿಮಿನೇಟ್​ ಆದ ನಟ ಧರ್ಮ ಕೀರ್ತಿರಾಜ್

ನಟ ಧರ್ಮ ಕೀರ್ತಿರಾಜ್​ ಅವರು ಬೇರೆ ಎಲ್ಲರಿಗಿಂತಲೂ ಭಿನ್ನವಾಗಿ ಗುರುತಿಸಿಕೊಂಡಿದ್ದರು. ಆದರೆ ಹೆಚ್ಚಾಗಿ ಅವರು ಕಾಣಿಸಿಕೊಳ್ಳುತ್ತಿರಲಿಲ್ಲ. ಬೇರೆ ಸ್ಪರ್ಧಿಗಳ ರೀತಿ ಧರ್ಮ ಜಗಳ ಮಾಡುತ್ತಿರಲಿಲ್ಲ. ಸಾಧ್ಯವಾದಷ್ಟು ಅವರು ಕೂಲ್​ ಆಗಿ ಇರುತ್ತಿದ್ದರು. ಈ ವಾರ ಅವರ ಆಟ ಅಂತ್ಯವಾಗಿದೆ. ‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಶೋನಿಂದ ಅವರು ಎಲಿಮಿನೇಟ್ ಆಗಿದ್ದಾರೆ.

ಬಿಗ್ ಬಾಸ್​ ಶೋನಿಂದ ಎಲಿಮಿನೇಟ್​ ಆದ ನಟ ಧರ್ಮ ಕೀರ್ತಿರಾಜ್
ಧರ್ಮ ಕೀರ್ತಿರಾಜ್​

Updated on: Nov 24, 2024 | 10:47 PM

‘ಬಿಗ್ ಬಾಸ್ ಕನ್ನಡ ಸೀಸನ್​ 11’ ರಿಯಾಲಿಟಿ ಶೋನಲ್ಲಿ ಧರ್ಮ ಕೀರ್ತಿರಾಜ್ ಅವರು ಎಲಿಮಿನೇಟ್​ ಆಗಿದ್ದಾರೆ. ಆಟದಲ್ಲಾಗಲೀ, ಮನರಂಜನೆಯಲ್ಲಾಗಲೀ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿಕೊಳ್ಳದ ಅವರು ಆಟವನ್ನು ಅರ್ಧಕ್ಕೆ ನಿಲ್ಲಿಸುವಂತಾಗಿದೆ. ನಟನಾಗಿದ್ದರೂ ಕೂಡ ಧರ್ಮ ಅವರು ಬಿಗ್ ಬಾಸ್​ ಮನೆಯಲ್ಲಿ ಹೆಚ್ಚು ಮನರಂಜನೆ ನೀಡಲಿಲ್ಲ. ಎಲ್ಲ ಸ್ಪರ್ಧಿಗಳ ಜೊತೆಗೂ ಅವರು ಹೆಚ್ಚು ಬೆರೆಯಲಿಲ್ಲ. ಕಳೆದ ವಾರ ಅವರ ಸ್ನೇಹಿತೆ ಅನುಷಾ ರೈ ಎಲಿಮಿನೇಟ್​ ಆಗಿದ್ದರು. ಈ ವಾರ ಧರ್ಮ ಔಟ್ ಆಗಿದ್ದಾರೆ.

ಧರ್ಮ ಕೀರ್ತಿರಾಜ್​ ಅವರು ತಾವಾಗಿಯೇ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗುವವರಲ್ಲ. ಈ ಮೊದಲು ಜಗದೀಶ್​ ವಿರುದ್ಧ ಇಡೀ ಮನೆಯೇ ತಿರುಗಿ ಬಿದ್ದಿದ್ದಾಗ ಧರ್ಮ ಅವರು ಅನುಷಾ ಜೊತೆ ಕಿಚನ್​ನಲ್ಲಿ ಕೂಲ್​ ಆಗಿದ್ದರು. ಅವರು ದೊಡ್ಮನೆಯಲ್ಲಿ ಕೂಗಾಡಿದ್ದು ತುಂಬಾ ಕಡಿಮೆ. ಅವರ ಈ ಒಳ್ಳೆಯತನವೇ ಅವರಿಗೆ ಮುಳುವಾಗಿದೆ ಎಂದರೂ ತಪ್ಪೇನಿಲ್ಲ. ಯಾಕೆಂದರೆ, ಬಿಗ್ ಬಾಸ್ ಮನೆಯಲ್ಲಿ ಕೂಗಾಡುತ್ತಾ ಸದ್ದು ಮಾಡುವವರೇ ಹೈಲೈಟ್​ ಆಗುವುದು ಜಾಸ್ತಿ.

2 ವಾರ ಮೊದಲೇ ಬಿಗ್ ಬಾಸ್ ಮನೆಯಿಂದ ತಾವು ಹೊರಗೆ ಹೋಗಬೇಕು ಎಂದು ಧರ್ಮ ಕೀರ್ತಿರಾಜ್​ ಅವರು ನಿರ್ಧರಿಸಿದ್ದರು. ಯಾಕೆಂದರೆ, ಈ ಹಿಂದೆ ‘ಬಿಗ್ ಬಾಸ್ ಮನೆಯಲ್ಲಿ ನಾಲಾಯಕ್ ಯಾರು’ ಎಂಬ ಪ್ರಶ್ನೆಗೆ ಅನೇಕರು ಧರ್ಮ ಅವರ ಹೆಸರನ್ನು ಹೇಳಿದ್ದರು. ಆ ಮಾತು ಕೇಳಿಸಿಕೊಂಡಿದ್ದ ಅವರಿಗೆ ಬಹಳ ನೋವಾಗಿತ್ತು. ಹಾಗಾಗಿ ಅವರು ಬಿಗ್​ ಬಾಸ್​ನಿಂದ ಹೊರಗೆ ಹೋಗುವುದೇ ಸೂಕ್ತ ಎಂದು ತೀರ್ಮಾನಿಸಿದ್ದರು.

ಇದನ್ನೂ ಓದಿ: ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್

ಈ ವಾರ ಧರ್ಮ ಕೀರ್ತಿರಾಜ್​ ಅವರೇ ಹೊರಗೆ ಹೋಗುತ್ತಾರೆ ಎಂದು ವೀಕ್ಷಕರು ಕೂಡ ಊಹಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅನೇಕರು ಕಮೆಂಟ್ ಮಾಡಿದ್ದರು. ಬಿಗ್ ಬಾಸ್ ಕಾರ್ಯಕ್ರಮದ ಯಾವುದೇ ಪ್ರೋಮೋದಲ್ಲಿ ಕೂಡ ಧರ್ಮ ಅವರು ಕಾಣಿಸಿಕೊಳ್ಳುತ್ತಿರಲಿಲ್ಲ. ಅಂದರೆ, ಅವರು ಹೈಲೈಟ್​ ಆಗುವಂತಹ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಹಾಗಾಗಿ ಅವರು ಎಲಿಮಿನೇಟ್​ ಆಗಿದ್ದರಲ್ಲಿ ಅಚ್ಚರಿ ಕೂಡ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us