ಎಲ್ಲರಿಗಿಂತ ಮೊದಲು ಸೇಫ್ ಆದ ಧ್ರುವಂತ್: ಸ್ವತಃ ಹೊರಗೆ ಹೋಗೋಕೆ ಇಲ್ಲ ಅವಕಾಶ

ಧ್ರುವಂತ್ ಅವರು ಬಿಗ್ ಬಾಸ್ ಆಟವನ್ನು ಅರ್ಧಕ್ಕೆ ನಿಲ್ಲಿಸಿ ಹೊರಗೆ ಬರಲು ನಿರ್ಧಾರ ಮಾಡಿದ್ದರು. ಆದರೆ ಅಚ್ಚರಿ ಎಂದರೆ, ಶನಿವಾರದ ಸಂಚಿಕೆಯಲ್ಲಿ ಎಲ್ಲರಿಗಿಂತ ಮೊದಲು ಧ್ರುವಂತ್ ಅವರೇ ಸೇಫ್ ಆದರು. ‘ಸೋಲುವು ತನಕ ಸೋಲಬೇಡಿ’ ಎಂದು ಧ್ರುವಂತ್ ಅವರಿಗೆ ಕಿಚ್ಚ ಸುದೀಪ್ ಬುದ್ಧಿಮಾತು ಹೇಳಿದರು.

ಎಲ್ಲರಿಗಿಂತ ಮೊದಲು ಸೇಫ್ ಆದ ಧ್ರುವಂತ್: ಸ್ವತಃ ಹೊರಗೆ ಹೋಗೋಕೆ ಇಲ್ಲ ಅವಕಾಶ
Dhruvanth

Updated on: Dec 07, 2025 | 8:24 AM

ಬಿಗ್ ಬಾಸ್ (Bigg Boss Kannada) ರಿಯಾಲಿಟಿ ಶೋಗೆ ಹೋಗಬೇಕು ಎಂಬುದು ಲಕ್ಷಾಂತರ ಮಂದಿಯ ಆಸೆ. ಆದರೆ ಎಲ್ಲರಿಗೂ ಈ ಅವಕಾಶ ಸಿಗುವುದಿಲ್ಲ. ಕೆಲವರಿಗೆ ಅವಕಾಶ ಸಿಕ್ಕರೂ ಅದನ್ನು ಕೈ ಚೆಲ್ಲುತ್ತಾರೆ. ನಟ ಧ್ರುವಂತ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಸ್ಪರ್ಧಿಸುವ ಚಾನ್ಸ್ ಪಡೆದರು. ಆದರೆ ಇತ್ತೀಚಿನ ವಾರಗಳಲ್ಲಿ ಅವರು ಆಟದ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ. ಸ್ವತಃ ಎಲಿಮಿನೇಟ್ ಆಗಿ ಹೊರಗೆ ಹೋಗಬೇಕು ಎಂದು ಅವರು ನಿರ್ಧರಿಸಿದ್ದಾರೆ. ಅಚ್ಚರಿ ಏನೆಂದರೆ, ಈ ಬಾರ ಎಲ್ಲರಿಂತ ಮೊದಲು ಧ್ರುವಂತ್ (Dhruvanth) ಅವರು ಸೇಫ್ ಆಗಿದ್ದಾರೆ!

ಧ್ರುವಂತ್, ಸೂರಜ್ ಸಿಂಗ್, ರಾಶಿಕಾ ಶೆಟ್ಟಿ, ಮಾಳು ನಿಪನಾಳ, ಕಾವ್ಯಾ ಶೈವ, ಅಭಿಷೇಕ್, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಸ್ಪಂದನಾ ಅವರು ಈ ವಾರ ನಾಮಿನೇಟ್ ಆಗಿದ್ದಾರೆ. ಶನಿವಾರದ (ಡಿಸೆಂಬರ್ 6) ಸಂಚಿಕೆಯಲ್ಲಿ ಯಾರು ಸೇಫ್ ಆಗುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದರು. ಧ್ರುವಂತ್ ಅವರೇ ಎಲಿಮಿನೇಟ್ ಆಗಬಹುದು ಎಂಬುದೇ ಎಲ್ಲರ ಊಹೆ ಆಗಿತ್ತು.

ಸಂಚಿಕೆಯ ನಡುವೆ ಸುದೀಪ್ ಅವರು ಬ್ರೇಕ್ ತೆಗೆದುಕೊಂಡಾಗ ಧ್ರುವಂತ್ ಅವರು ಕ್ಯಾಮೆರಾ ಮುಂದೆ ಹೋಗಿ ನಿಂತರು. ‘ದಯವಿಟ್ಟು ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ. ನನಗೆ ಈ ಶೋನಲ್ಲಿ ಇರಲು ಇಷ್ಟ ಇಲ್ಲ. ಇಷ್ಟು ಆಗಿರುವುದೇ ಸಾಕು ನನಗೆ. ಸಂತೋಷವಾಗಿ ನನ್ನನ್ನು ಕಳಿಸಿಕೊಡಿ’ ಎಂದು ಧ್ರುವಂತ್ ಅವರು ಮನವಿ ಮಾಡಿಕೊಂಡರು.

ಆದರೆ ‘ಧ್ರುವಂತ್ ಯೂ ಆರ್​ ಸೇಫ್’ ಎಂದು ಕಿಚ್ಚ ಸುದೀಪ್ ಅವರು ಘೋಷಿಸಿದರು. ಜನರು ವೋಟ್ ಮಾಡಿ ಅವರನ್ನು ಉಳಿಸಿಕೊಂಡರು. ‘ನನಗೆ ಬೆಂಬಲ ನೀಡಿ ಉಳಿಸಿಕೊಂಡಿರುವ ಜನರಿಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ಆಟ ಮುಂದುವರಿಸಲು ನನಗೆ ಇಷ್ಟ ಇಲ್ಲ’ ಎಂದು ಧ್ರುವಂತ್ ಅವರು ಹೇಳಿದರು. ಆದರೆ ಸೆಲ್ಫ್ ಎಲಿಮಿನೇಟ್ ಆಗುವ ಅವಕಾಶ ಇಲ್ಲ ಎಂದು ಸುದೀಪ್ ಅವರು ಖಡಾಖಂಡಿತವಾಗಿ ಹೇಳಿದರು.

ಇದನ್ನೂ ಓದಿ: ‘ಎಷ್ಟ್ರಲ್ಲಿ ಇರ್ಬೇಕೊ ಅಷ್ಟ್ರಲ್ಲಿ ಇರು’: ಸುದೀಪ್ ಎದುರೇ ಧ್ರುವಂತ್-ರಜತ್ ಜಗಳ

ಬಿಗ್ ಬಾಸ್ ಮನೆಯಲ್ಲಿ ಧ್ರುವಂತ್ ಅವರು ಆಡುತ್ತಿರುವ ರೀತಿಯ ಬಗ್ಗೆ ಅವರ ಕುಟುಂಬದವರಿಗೆ ಹೆಮ್ಮೆ ಇದೆ. ಧ್ರುವಂತ್ ತಂದೆ ಮಾತನಾಡಿದ ಆಡಿಯೋ ಪ್ಲೇ ಮಾಡಲಾಯಿತು. ‘ಈವರೆಗೂ ನೀನು ಯಾವುದೇ ಕೆಲಸವನ್ನು ಅರ್ಧಕ್ಕೆ ಬಿಟ್ಟು ಬಂದಿಲ್ಲ. ಈಗಲೂ ಅದನ್ನೇ ಅಪೇಕ್ಷಿಸುತ್ತಿರುತ್ತೇವೆ’ ಎಂದು ಅವರ ತಂದೆ ಹೇಳಿದರು. ಅದನ್ನು ಕೇಳಿದ ಬಳಿಕ ಧ್ರುವಂತ್ ಅವರಿಗೆ ಧೈರ್ಯ ಬಂತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.