ಮಂಡ್ಯ: ‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada) ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿರುವ ವರ್ತೂರು ಸಂತೋಷ್ (Varthur Santhosh) ಅವರು ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಈ ಮೊದಲು ಹುಲಿ ಉಗುರು ಧರಿಸಿದ್ದ ಪ್ರಕರಣದಲ್ಲಿ ಅವರು ಜೈಲು ಸೇರಿಬಂದಿದ್ದರು. ಈಗ ಅವರ ಮೇಲೆ ಇನ್ನೊಂದು ಆರೋಪ ಎದುರಾಗಿದೆ. ಹಳ್ಳಿಕಾರ್ (Hallikar) ಹೆಸರನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಕೆಲವರ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು (ಡಿಸೆಂಬರ್ 10) ಮಂಡ್ಯದಲ್ಲಿ ಹಳ್ಳಿಕಾರ್ ತಳಿ ಹಾಗೂ ಹಳ್ಳಿಕಾರ್ ಒಡೆಯ ಪಟ್ಟದ ಬಗ್ಗೆ ಚರ್ಚಾಗೋಷ್ಠಿ ನಡೆಯಲಿದೆ.
ವರ್ತೂರು ಸಂತೋಷ್ ಅವರು ತಮ್ಮ ವರ್ಚಸ್ಸು ವೃದ್ಧಿಸಿಕೊಳ್ಳಲು ಹಳ್ಳಿಕಾರ್ ಹೆಸರನ್ನು ಬಳಸಿಕೊಂಡ್ರಾ ಎಂಬ ಪ್ರಶ್ನೆ ಮೂಡಿದೆ. ಅದಕ್ಕೆ ಸಂಬಂಧಿಸಿದಂತೆ ಚರ್ಚಾಗೋಷ್ಠಿ ಆಯೋಜನೆಗೊಂಡಿದೆ. ‘ಹಳ್ಳಿಕಾರ್ ಒಡೆಯ’ ಎಂಬ ಬಿರುದಿನ ವಿರುದ್ದ ರೈತರು ಸಿಡಿದೆದ್ದಿದ್ದಾರೆ. ವರ್ತೂರ್ ಸಂತೋಷ್ ವಿರುದ್ಧ ಕೆಲವರು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: ಹದಗೆಟ್ಟಿತು ವರ್ತೂರು ಸಂತೋಷ್-ತನಿಷಾ ಫ್ರೆಂಡ್ಶಿಪ್; ಆಗ ಹೇಗಿದ್ರು, ಈಗ ಹೇಗಾಗಿದ್ದಾರೆ ನೋಡಿ..
ಹಳ್ಳಿಕಾರ್ ತಳಿ ಅಭಿವೃದ್ದಿಗೆ ರಾಜರ ಆಡಳಿತ ಕಾಲದಿಂದಲೂ ಬೆಂಬಲ ಸಿಕ್ಕಿದೆ. ಮಂಡ್ಯ, ಮೈಸೂರು, ಬೆಂಗಳೂರು ಭಾಗದ ರೈತರು ನೂರಾರು ವರ್ಷಗಳಿಂದ ಹಳ್ಳಿಕಾರ್ ತಳಿಯ ಎತ್ತು ಸಾಕಾಣಿಕೆ ಮಾಡುತ್ತಿದ್ದಾರೆ. ಆದರೆ, ಕೆಲವು ವರ್ಷದ ಹಿಂದೆ ವರ್ತೂರು ಸಂತೋಷ್ ‘ಹಳ್ಳಿಕಾರ್ ಒಡೆಯ’ ಎಂದು ಬಿಂಬಿಸಿಕೊಂಡು ಗೊಂದಲ ಸೃಷ್ಟಿಸುತ್ತಿದ್ದಾರೆ. ಆ ಮೂಲಕ ಹಳ್ಳಿಕಾರ್ ಹೆಸರಿಗೆ ಅವಮಾನ ಮಾಡುತ್ತಿದ್ದಾರೆ ಎಂಬ ಆರೋಪ ಎದುರಾಗಿದೆ.
ಇದನ್ನೂ ಓದಿ: ‘ನಾವು ಮಾನವೀಯತೆ ಅಂತ ಹೋದರೆ ನಮ್ಮ ಮುಂದೆಯೇ ಹಳ್ಳ ತೋಡುತ್ತಾರೆ’: ವರ್ತೂರು ಸಂತೋಷ್
ಈ ಹಿನ್ನೆಲೆಯಲ್ಲಿ ಹಳ್ಳಿಕಾರ್ ಬಗ್ಗೆ ಸಮಗ್ರ ಚರ್ಚೆಗೆ ರೈತರು ಮುಂದಾಗಿದ್ದಾರೆ. ಮಂಡ್ಯದ ಸಿಲ್ವರ್ ಜುಬಿಲಿ ಪಾರ್ಕ್ನಲ್ಲಿ ಡಿ.10ರಂದು ಹಳ್ಳಿಕಾರ್ ಬಗ್ಗೆ ಚರ್ಚಾಗೋಷ್ಠಿ ನಡೆಯಲಿದೆ. ಇದರಲ್ಲಿ ಮಂಡ್ಯ, ತುಮಕೂರು, ರಾಮನಗರ, ಬೆಂಗಳೂರು ಸೇರಿ ಹಲವು ಜಿಲ್ಲೆಗಳ ರೈತರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಚರ್ಚಾಗೋಷ್ಠಿ ನಡೆಯಲಿದೆ. ವರ್ತೂರ್ ಸಂತೋಷ್ ಬೆಂಬಲಿಗರಿಗೂ ಆಹ್ವಾನ ನೀಡಲಾಗಿದೆ. ಹಾಗಾಗಿ ಇದರಲ್ಲಿ ಪರ-ವಿರೋಧದ ಚರ್ಚೆ ನಡೆಯಲಿದ್ದು, ತೀವ್ರ ಕುತೂಹಲ ಮೂಡಿಸಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:47 am, Sun, 10 December 23