ಡ್ರೋನ್ ಪ್ರತಾಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರ ರನ್ನರ್ ಅಪ್ ಆಗಿದ್ದರು. ಆರಂಭದಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿಂದಲೇ ಅವರು ಟೀಕೆಗೆ ಗುರಿಯಾಗಿದ್ದರು. ಈ ಟೀಕೆಗಳನ್ನು ಮೆಟ್ಟಿ ಅವರು ಮುಂದೆ ಸಾಗಿದ್ದರು. ಆ ಶೋನ ರನ್ನರ್ ಅಪ್ ಕೂಡ ಆದರು. ಅವರನ್ನು ಆಡಿಕೊಂಡು ನಕ್ಕವರಿಗೆ ಅವರು ವರ್ಷದ ಬಳಿಕ ಉತ್ತರ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಅವರು ವಿಡಿಯೋ ಹಂಚಿಕೊಂಡಿದ್ದಾರೆ.
ಡ್ರೋನ್ ಕಂಪನಿ ಇದೆ, ನಾನೇ ಡ್ರೋನ್ ತಯಾರಿಸುತ್ತೇನೆ ಎಂದು ಪ್ರತಾಪ್ ಹೇಳಿಕೊಂಡಿದ್ದರು. ಆದರೆ, ಇದೆಲ್ಲವೂ ಫೇಕ್ ಅನ್ನೋದು ಆ ಬಳಿಕ ಗೊತ್ತಾಯಿತು. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಬಿಗ್ ಬಾಸ್ ಶೋನ ಆರಂಭದಲ್ಲಿ ಈ ವಿಚಾರ ಇಟ್ಟುಕೊಂಡು ತುಕಾಲಿ ಸಂತೋಷ್, ವರ್ತೂರು ಸಂತೋಷ್ ಮೊದಲಾದವರು ಪ್ರತಾಪ್ನ ಟೀಕೆ ಮಾಡಿದ್ದರು. ಇದಕ್ಕೆ ಪ್ರತಾಪ್ ವರ್ಷದ ಬಳಿಕ ಉತ್ತರ ನೀಡಿದ್ದಾರೆ.
ಕಳೆದ ವರ್ಷ ಈ ಸಂದರ್ಭದಲ್ಲಿ ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ ಇದ್ದರು. ಅಲ್ಲಿ ಡ್ರೋನ್ ವಿಚಾರವಾಗಿ ಮಾಡಿದ ಟೀಕೆಯ ಕ್ಲಿಪ್ನ ಅವರು ಹಂಚಿಕೊಂಡಿದ್ದರು. ನಂತರ ವಿಡಿಯೋದಲ್ಲಿ ಡ್ರೋನ್ಗೆ ಪೂಜೆ ಮಾಡುತ್ತಿರುವುದು ಹಾಗೂ ಡ್ರೋನ್ ಮೂಲಕ ಗಿಡಗಳಿಗೆ ಔಷಧ ಸಿಂಪಡನೆ ಮಾಡುತ್ತಿರುವ ದೃಶ್ಯ ಇದೆ. ಈ ವಿಡಿಯೋಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
‘ನಿಧಾನವಾಗಿ ಬೆಳೆದರೂ ನಿಯತ್ತಾಗಿ ಬೆಳೆಯಬೇಕು ಅದು ನೀವು ಅಣ್ಣ’ ಎಂದು ಕೆಲವರು ಹೇಳಿದ್ದಾರೆ. ‘ಆಡಿಕೊಂಡವರ ಮುಂದೆ ಬೆಳೆದು ತೋರಿಸುವದೇ ನಿಜವಾದ ಸಾಧನೆ’ ಎಂದು ಇನ್ನೂ ಕೆಲವರು ಕಮೆಂಟ್ ಮಾಡಿದ್ದಾರೆ. ‘ಅವಮಾನಿಸಿದವರು ಆರಾಧಿಸುವಂಥಾಗುವುದೇ ನಿಜವಾದ ಸಾಧನೆ’ ಎಂದು ಇನ್ನೂ ಕೆಲವರು ಹೇಳಿದ್ದಾರೆ.
ಇದನ್ನೂ ಓದಿ: ಅಭಿಮಾನಿಯ ಆಟೋ ಓಡಿಸಿ ಗಮನ ಸೆಳೆದ ‘ಬಿಗ್ ಬಾಸ್’ ಡ್ರೋನ್ ಪ್ರತಾಪ್
ಡ್ರೋನ್ ಪ್ರತಾಪ್ ಬಿಗ್ ಬಾಸ್ ಸೇರುವಾಗ ಅವರ ಹಿಂಬಾಲಕರ ಸಂಖ್ಯೆ 3 ಲಕ್ಷ ಇತ್ತು. ಅದು ಈಗ ಸುಮಾರು ಆರೂವರೆ ಲಕ್ಷಕ್ಕೆ ಏರಿಕೆ ಆಗಿದೆ. ಅವರ ಜನಪ್ರಿಯತೆ ದುಪ್ಪಟ್ಟಾಗಿದೆ. ಅವರ ಬಗ್ಗೆ ಇದ್ದ ನೆಗೆಟಿವ್ ಭಾವನೆ ಪಾಸಿಟಿವ್ ಆಗಿ ಬದಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.