ತಗ್ಗಿತು ಬಿಗ್ ಬಾಸ್​ ಟಿಆರ್​ಪಿ; ಧಾರಾವಾಹಿಗಳಲ್ಲಿ ‘ಪುಟ್ಟಕ್ಕ’ನೇ ನಂಬರ್ 1

ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಆ್ಯಂಕರಿಂಗ್​ನ ಅದ್ಭುತವಾಗಿ ಮಾಡುತ್ತಿದ್ದಾರೆ. ವೀಕೆಂಡ್ ಬಂತು ಎಂದರೆ ಜನರು ಈ ಶೋ ನೋಡಲು ಕಾಯುತ್ತಾ ಇರುತ್ತಾರೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈಗ ಟಿಆರ್​ಪಿ ಕುಗ್ಗಿದೆ ಎಂದು ಹೇಳಬಹುದು.

ತಗ್ಗಿತು ಬಿಗ್ ಬಾಸ್​ ಟಿಆರ್​ಪಿ; ಧಾರಾವಾಹಿಗಳಲ್ಲಿ ‘ಪುಟ್ಟಕ್ಕ’ನೇ ನಂಬರ್ 1
ಬಿಗ್ ಬಾಸ್-ಪುಟ್ಟಕ್ಕನ ಮಕ್ಕಳು
Follow us
|

Updated on: Oct 24, 2024 | 2:43 PM

‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭದಲ್ಲಿ ಭರ್ಜರಿ ಟಿಆರ್​ಪಿ ಪಡೆದುಕೊಂಡಿತು. ಓಪನಿಂಗ್ ದಿನ 9+ ಟಿಆರ್​ಪಿ ಪಡೆದು ಮೊದಲ ಸ್ಥಾನ ಪಡೆದುಕೊಂಡಿತು. ಈಗ ನಿಧಾನವಾಗಿ ಬಿಗ್ ಬಾಸ್ ಟಿಆರ್​ಪಿ ಕುಗ್ಗಿದೆ. ಹಾಗಂತ ಜಗದೀಶ್ ಇಲ್ಲದ ಕಾರಣಕ್ಕೆ ಬಿಗ್ ಬಾಸ್ ಟಿಆರ್​ಪಿ ಕುಗ್ಗಿದೆ ಎಂದು ಹೇಳೋಕೆ ಆಗಲ್ಲ. ಏಕೆಂದರೆ ಇದು ಜಗದೀಶ್ ಇದ್ದ ಎಪಿಸೋಡ್​ಗಳ ಟಿಆರ್​ಪಿ.

ಶನಿವಾರ ಬಿಗ್ ಬಾಸ್​ಗೆ 7.3 ಟಿಆರ್​ಪಿ ಸಿಕ್ಕಿದೆ. ಭಾನುವಾರ 6.9 ಟಿಆರ್​ಪಿ ಸಿಕ್ಕಿದೆ. ವಾರದ ದಿನಗಳಲ್ಲಿ 7.0 ಟಿಆರ್​ಪಿ ಸಿಕ್ಕಿದೆ. ವಾರಾಂತ್ಯದ ಟಿಆರ್​ಪಿಯಲ್ಲಿ ಸಾಕಷ್ಟು ಕುಸಿತ ಕಂಡಿದೆ. ಭಾನುವಾರ ಯಾರಿಗೂ ಕ್ಲಾಸ್ ತೆಗೆದುಕೊಳ್ಳುವುದಿಲ್ಲ. ಅಲ್ಲಿ ಫನ್ ಆ್ಯಕ್ಟಿವಿಟಿ ಮಾಡಿಸಲಾಗುತ್ತದೆ. ಆದರೆ, ಇದು ಅಷ್ಟು ಮನರಂಜನಾತ್ಮಕವಾಗಿರುವುದಿಲ್ಲ ಅನ್ನೋದು ಕೆಲವರ ಅಭಿಪ್ರಾಯ. ಈ ಕಾರಣಕ್ಕೂ ಭಾನುವಾರದ ಟಿಆರ್​ಪಿ ಕುಗ್ಗಿರಬಹುದು.

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಹಲವು ಟ್ವಿಸ್ಟ್​ಗಳನ್ನು ಪಡೆದು ಸಾಗುತ್ತಿದೆ. ಈ ಧಾರಾವಾಹಿ ಈ ಮೊದಲು ಒಂದನೇ ಸ್ಥಾನದಲ್ಲಿ ಇರುತ್ತಿತ್ತು. ಆದರೆ, ಸಮಯ ಬದಲಾವಣೆಯ ನಂತರ ಟಿಆರ್​ಪಿ ಕುಸಿದಿತ್ತು. ಈಗ ಮತ್ತೆ ಈ ಧಾರಾವಾಹಿ ಮೊದಲ ಸ್ಥಾನಕ್ಕೆ ಬಂದಿದೆ. ಎರಡಂಕಿ ತಲುಪಲು ಈ ಧಾರಾವಾಹಿಗೆ ಬೇಕಿರೋದು ಕೇವಲ 0.1 ಟಿವಿಆರ್ ಮಾತ್ರ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ.

ಇದನ್ನೂ ಓದಿ: ಸುದೀಪ್​ಗೆ ಉಘೇ ಎಂದ ವೀಕ್ಷಕರು; ಶನಿವಾರ-ಭಾನುವಾರ ಬಿಗ್ ಬಾಸ್​ಗೆ ಭರ್ಜರಿ ಟಿಆರ್​ಪಿ

ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಮೂರನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ಈ ಧಾರಾವಾಹಿ ಕೂಡ ಹಲವು ಟ್ವಿಸ್ಟ್​ಗಳನ್ನು ಪಡೆದು ಸಾಗುತ್ತಿದೆ. ‘ಅಣ್ಣಯ್ಯ’ ಧಾರಾವಾಹಿಗೆ ನಾಲ್ಕನೇ ಸ್ಥಾನ ಸಿಕ್ಕಿದೆ. ಇತ್ತೀಚೆಗೆ ಆರಂಭವಾದ ಧಾರಾವಾಹಿ ಇದಾಗಿದ್ದು, ಕಡಿಮೆ ಟಿಆರ್​ಪಿ ಪಡೆದಿತ್ತು. ಈಗ ಧಾರಾವಾಹಿ ಮತ್ತೆ ಪುಟಿದ್ದೆದ್ದಿದೆ. ಐದನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ. ಈ ಬಾರಿ ಟಾಪ್​ ಐದರಲ್ಲಿ ಇರೋ ಎಲ್ಲಾ ಧಾರಾವಾಹಿಗಳು ಜೀ ಕನ್ನಡದವೇ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ವೋಟು ಕೇಳುತ್ತೇನೆ: ಅನ್ನಪೂರ್ಣ
ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ವೋಟು ಕೇಳುತ್ತೇನೆ: ಅನ್ನಪೂರ್ಣ
ಕಾಡಿಬೇಡಿ ರೋಹಿತ್ ಶರ್ಮಾರನ್ನು ಒಪ್ಪಿಸಿ ಔಟ್ ಮಾಡಿದ ಸರ್ಫರಾಝ್ ಖಾನ್
ಕಾಡಿಬೇಡಿ ರೋಹಿತ್ ಶರ್ಮಾರನ್ನು ಒಪ್ಪಿಸಿ ಔಟ್ ಮಾಡಿದ ಸರ್ಫರಾಝ್ ಖಾನ್
ಜನ ಕುಮಾರಸ್ವಾಮಿ ಹೊರಗಿನವ ಅಂದುಕೊಂಡಿದ್ದರೆ 2 ಬಾರಿ ಗೆಲ್ಲಿಸುತ್ತಿದ್ವರೇ?
ಜನ ಕುಮಾರಸ್ವಾಮಿ ಹೊರಗಿನವ ಅಂದುಕೊಂಡಿದ್ದರೆ 2 ಬಾರಿ ಗೆಲ್ಲಿಸುತ್ತಿದ್ವರೇ?
ಬಾಬುಸಾಬ್​ ​ಪಾಳ್ಯ ದುರಂತ: ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿದ್ದರಾಮಯ್ಯ
ಬಾಬುಸಾಬ್​ ​ಪಾಳ್ಯ ದುರಂತ: ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿದ್ದರಾಮಯ್ಯ
ಬಿಗ್​ಬಾಸ್ ಮನೆಗೆ ಬಂದ ಸುದ್ದಿ ವಾಚಕಿ, ಮನೆ ಮಂದಿಗೆ ಕ್ಲಾಸ್
ಬಿಗ್​ಬಾಸ್ ಮನೆಗೆ ಬಂದ ಸುದ್ದಿ ವಾಚಕಿ, ಮನೆ ಮಂದಿಗೆ ಕ್ಲಾಸ್
ಬೆಂಗಳೂರು ನಗರ ಉಸ್ತುವಾರಿ ಸಚಿವ ಶಿವಕುಮಾರ್ ಚನ್ನಪಟ್ಟಣದಲ್ಲಿ ಬ್ಯೂಸಿ!
ಬೆಂಗಳೂರು ನಗರ ಉಸ್ತುವಾರಿ ಸಚಿವ ಶಿವಕುಮಾರ್ ಚನ್ನಪಟ್ಟಣದಲ್ಲಿ ಬ್ಯೂಸಿ!
ಹಾಸನಾಂಬಾ ಸನ್ನಿಧಾನದಲ್ಲಿ ಭರದ ಸಿದ್ಧತೆ
ಹಾಸನಾಂಬಾ ಸನ್ನಿಧಾನದಲ್ಲಿ ಭರದ ಸಿದ್ಧತೆ
ಬಿಬಿಎಂಪಿ ಭ್ರಷ್ಟ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದರೆ ಸಮಸ್ಯೆ ಕೊನೆಗೊಳ್ಳದು
ಬಿಬಿಎಂಪಿ ಭ್ರಷ್ಟ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದರೆ ಸಮಸ್ಯೆ ಕೊನೆಗೊಳ್ಳದು
ದೇವರ ಮುಂದೆ ಕಣ್ಣೀರು ಹಾಕಿದ್ರೆ ಏನಾಗುತ್ತೆ ಗೊತ್ತಾ?
ದೇವರ ಮುಂದೆ ಕಣ್ಣೀರು ಹಾಕಿದ್ರೆ ಏನಾಗುತ್ತೆ ಗೊತ್ತಾ?
ಬದುಕು ಬದಲಿಸಿದ ‘ಕೆಜಿಎಫ್’: ಪ್ರಶಾಂತ್ ನೀಲ್​ಗೆ ಗರುಡ ರಾಮ್ ಧನ್ಯವಾದ
ಬದುಕು ಬದಲಿಸಿದ ‘ಕೆಜಿಎಫ್’: ಪ್ರಶಾಂತ್ ನೀಲ್​ಗೆ ಗರುಡ ರಾಮ್ ಧನ್ಯವಾದ