Drone Prathap: ಡ್ರೋನ್ ಪ್ರತಾಪ್ ಆತ್ಮಹತ್ಯೆ ಪ್ರಯತ್ನ ವದಂತಿ; ಹೇಗಿದೆ ಆರೋಗ್ಯ?

|

Updated on: Jan 04, 2024 | 2:30 PM

ಡ್ರೋನ್ ಪ್ರತಾಪ್ ಅವರಿಗೆ ಆರೋಗ್ಯ ಕೈ ಕೊಟ್ಟಿದೆ. ಅಲ್ಲದೆ, ಅವರು ಬಿಗ್ ಬಾಸ್ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಕೆಲವು ಕಡೆಗಳಲ್ಲಿ ವದಂತಿ ಹಬ್ಬಿತ್ತು. ಆ ಬಗ್ಗೆ ಈಗ ಸ್ಪಷ್ಟನೆ ಸಿಕ್ಕಿದೆ. 

Drone Prathap: ಡ್ರೋನ್ ಪ್ರತಾಪ್ ಆತ್ಮಹತ್ಯೆ ಪ್ರಯತ್ನ ವದಂತಿ; ಹೇಗಿದೆ ಆರೋಗ್ಯ?
ಪ್ರತಾಪ್
Follow us on

‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10) ಕೊನೆಯ ಹಂತಕ್ಕೆ ಬಂದಿದೆ. ಇನ್ನು ಕೆಲವೇ ವಾರಗಳಲ್ಲಿ ಫಿನಾಲೆ ನಡೆಯಲಿದೆ. ಸದ್ಯ ಮನೆಯಲ್ಲಿ ಒಂಭತ್ತು ಮಂದಿ ಇದ್ದು ಸ್ಪರ್ಧೆ ಜೋರಾಗಿದೆ. ಈ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳೋದು ತುಂಬಾನೇ ಮುಖ್ಯ ಆಗುತ್ತದೆ. ಇಂಥ ಸಂದರ್ಭದಲ್ಲಿ ಆಸ್ಪತ್ರೆ ಸೇರಿದರೆ ಅವರಿಗೆ ಬೀಳೋ ವೋಟ್ ಮೇಲೆ ಇದು ಪ್ರಭಾವ ಬೀರುತ್ತದೆ. ಈಗ ಡ್ರೋನ್ ಪ್ರತಾಪ್ ಅವರು ಇದೇ ರೀತಿಯ ತೊಂದರೆ ಅನುಭವಿಸಿದ್ದಾರೆ. ಅವರಿಗೆ ಆರೋಗ್ಯ ಕೈ ಕೊಟ್ಟಿದೆ. ಅಲ್ಲದೆ, ಅವರು ಬಿಗ್ ಬಾಸ್ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಕೆಲವು ಕಡೆಗಳಲ್ಲಿ ವದಂತಿ ಹಬ್ಬಿತ್ತು. ಆ ಬಗ್ಗೆ ಈಗ ಸ್ಪಷ್ಟನೆ ಸಿಕ್ಕಿದೆ.

ಆಗಿದ್ದೇನು?

ಡ್ರೋನ್ ಪ್ರತಾಪ್ ಅವರು ಲೈವ್​​ನಲ್ಲಿ ಕಾಣಿಸಿರಲಿಲ್ಲ. ಸಂಗೀತಾ ಅವರು ಕ್ಯಾಮೆರಾ ಎದುರು ಬಂದು ‘ಮಿಸ್ ಯೂ ಪ್ರತು’ ಎಂದು ಹೇಳಿದ್ದರು. ಪ್ರತಾಪ್ ಎಲ್ಲಿ ಹೋದರು ಎನ್ನುವ ಪ್ರಶ್ನೆ ಮೂಡಿತ್ತು. ಮೂಲಗಳ ಪ್ರಕಾರ ಬಿಗ್ ಬಾಸ್ ಮನೆಯಲ್ಲಿ ಅವರಿಗೆ ಫುಡ್ ಪಾಯ್ಸನ್ ಆಗಿದೆ. ಈ ಕಾರಣದಿಂದಲೇ ಅವರು ಆಸ್ಪತ್ರೆ ಸೇರಿದ್ದಾರೆ. ಅವರು ಈಗ ಚೇತರಿಕೆ ಕಂಡಿದ್ದಾರೆ.

ಮರಳೋದು ಯಾವಾಗ?

ಇಂದು (ಜನವರಿ 4) ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆ ಒಳಗೆ ತೆರಳಲಿದ್ದಾರೆ. ಈ ಬಗ್ಗೆ ಅವರ ಫ್ಯಾಮಿಲಿ ಕಡೆಯಿಂದ ಮಾಹಿತಿ ಸಿಕ್ಕಿದೆ. ಅಲ್ಲದೆ, ಅವರ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಅಪ್​​ಡೇಟ್ ನೀಡಲಾಗಿದೆ. ಈ ವಿಚಾರ  ಕೇಳಿ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ. ಅವರು ಶೀಘ್ರವೇ ಬಿಗ್ ಬಾಸ್​ಗೆ ಮರಳಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ.

ಇದನ್ನೂ ಓದಿ: ‘ನೀರಿನ ಶಬ್ದ ಇಲ್ಲ, ಬಟ್ಟೆ ಒಗೆದ ಶಬ್ದವೂ ಇಲ್ಲ’; ಬಾತ್​ ರೂಮ್​ಗೆ ಹೋದ ಪ್ರತಾಪ್​ ಮೇಲೆ ಸಂಗೀತಾ ಅನುಮಾನ

ಡೇಂಜರ್ ಜೋನ್

ಈ ವಾರ ಡ್ರೋನ್ ಪ್ರತಾಪ್ ಅವರು ಡೇಂಜರ್​ಜೋನ್​ನಲ್ಲಿ ಇದ್ದಾರೆ. ಮೈಕಲ್, ಕಾರ್ತಿಕ್, ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಜೊತೆ ಪ್ರತಾಪ್ ಕೂಡ ನಾಮಿನೇಟ್ ಆಗಿದ್ದಾರೆ. ಈ ವಾರ ಅವರು ಸೇವ್ ಆಗಲೇಬೇಕಾದ ಅನಿವಾರ್ಯತೆ ಇದೆ.

ಗುರೂಜಿ ಮಾತು

ಇತ್ತೀಚೆಗೆ ಬಿಗ್ ಬಾಸ್ ಮನೆಗೆ ವಿದ್ಯಾಶಂಕರ ಸರಸ್ವತಿ ಸಾಮೀಜಿ ಆಗಮಿಸಿದ್ದರು. ಈ ವೇಳೆ ಅವರು ‘ತಂದೆ ತಾಯಿಯಿಂದ ದೂರವೇ ಇದ್ದರೆ ನಿನನಗೆ ಒಳಿತಾಗುತ್ತದೆ’ ಎಂದು ಪ್ರತಾಪ್​ಗೆ ಹೇಳಿದ್ದರು. ಇದನ್ನು ಕೇಳಿ ಪ್ರತಾಪ್ ಅವರು ಬೇಸರಗೊಂಡಿದ್ದರು. ಈ ಬೆನ್ನಲ್ಲೇ ಅವರಿಗೆ ಅನಾರೋಗ್ಯ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:20 pm, Thu, 4 January 24