ಗಿಲ್ಲಿಗೆ ಹೊಡೆದ ಬಳಿಕವೂ ರಿಷಾಗೆ ಸಿಕ್ತು ವಿಶೇಷ ಅಧಿಕಾರ; ವೀಕ್ಷಕರಲ್ಲಿ ಮೂಡಿದೆ ಅಸಮಾಧಾನ

ಬಿಗ್ ಬಾಸ್ ಕನ್ನಡ 12 ರಲ್ಲಿ ರಿಷಾ ಅವರು ಗಿಲ್ಲಿ ನಟನ ಮೇಲೆ ಹಲ್ಲೆ ನಡೆಸಿದ ಘಟನೆ ವೀಕ್ಷಕರಲ್ಲಿ ಆಕ್ರೋಶ ಮೂಡಿಸಿದೆ. ಸಾಮಾನ್ಯವಾಗಿ ಇಂತಹ ಘಟನೆಗಳಲ್ಲಿ ಸ್ಪರ್ಧಿಯನ್ನು ಹೊರಹಾಕಲಾಗುತ್ತದೆ. ಆದರೆ, ರಿಷಾಗೆ ವಿಶೇಷ ಅಧಿಕಾರ ನೀಡಿದ್ದು ಚರ್ಚೆಗೆ ಕಾರಣವಾಗಿದೆ. ಇದು ಬಿಗ್ ಬಾಸ್‌ನ ನೀತಿಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಗಿಲ್ಲಿಗೆ ಹೊಡೆದ ಬಳಿಕವೂ ರಿಷಾಗೆ ಸಿಕ್ತು ವಿಶೇಷ ಅಧಿಕಾರ; ವೀಕ್ಷಕರಲ್ಲಿ ಮೂಡಿದೆ ಅಸಮಾಧಾನ
ರಿಷಾ-ಗಿಲ್ಲಿ

Updated on: Nov 05, 2025 | 7:37 AM

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಇತ್ತೀಚೆಗೆ ಒಂದು ಊಹಿಸದ ಘಟನೆ ನಡೆಯಿತು. ರಿಷಾ ಅವರು ಗಿಲ್ಲಿ ನಟನ ಮೇಲೆ ಕೈ ಮಾಡಿದರು. ಅವರು ಗಂಭೀರವಾಗಿಯೇ ಹೊಡೆದರು. ಆ ಬಳಿಕ ಗಿಲ್ಲಿ ನಟನ ತಳ್ಳಿದರು. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ರಿಷಾ ಅವರನ್ನು ಹೊರಕ್ಕೆ ಹಾಕಬೇಕು ಎಂಬ ಕೂಗು ಬಂದಿದೆ. ಹೀಗಿರುವಾಗಲೇ ಅವರಿಗೆ ವಿಶೇಷ ಅಧಿಕಾರ ಒಂದು ಸಿಕ್ಕಿದ್ದು, ಎಲ್ಲರ ಅಸಮಾಧಾನಕ್ಕೆ ಕಾರಣ ಆಗಿದೆ.

ಬಿಗ್ ಬಾಸ್​ನಲ್ಲಿ ಯಾರಾದರೂ ಪ್ರತಿ ಸ್ಪರ್ಧಿ ಮೇಲೆ ಕೈ ಮಾಡಿದರೆ ಆ ಕ್ಷಣವೇ ಅವರನ್ನು ದೊಡ್ಮನೆಯಿಂದ ಹೊರಕ್ಕೆ ಹಾಕಲಾಗುತ್ತದೆ. ಕಳೆದ ಸೀಸನ್​ಗಳಲ್ಲಿ ಈ ರೀತಿ ಮಾಡಲಾಗಿತ್ತು. ಆದರೆ, ರಿಷಾ ಅವರನ್ನು ಮಾತ್ರ ಹಾಗೆಯೇ ಇಟ್ಟುಕೊಳ್ಳಲಾಗಿದೆ. ಇದು ಚರ್ಚೆಗೆ ಕಾರಣ ಆಗಿದೆ. ಹೀಗಿರುವಾಗಲೇ ರಿಷಾಗೆ ವಿಶೇಷ ಅಧಿಕಾರವೂ ಸಿಕ್ಕಿದೆ.

ಸದ್ಯ ಈ ವಾರ ಯಾವುದೇ ಟಾಸ್ಕ್​ನ ಬಿಗ್ ಬಾಸ್ ನೀಡುತ್ತಿಲ್ಲ. ಬದಲಿಗೆ ಮನೆಯವರಿಂದ ಪತ್ರ ತರಿಸಲಾಗುತ್ತಿದೆ. ಇಬ್ಬರ ಪತ್ರ ಬಂದರೆ ಒಬ್ಬರ ಪತ್ರವನ್ನು ಮಾತ್ರ ಓದಲು ಅಕವಾಶ ಇರುತ್ತದೆ. ಮೊದಲ ಸುತ್ತಿನಲ್ಲಿ ಇದನ್ನು ನಿರ್ಧರಿಸಿದ್ದು ಮನೆಯ ಕ್ಯಾಪ್ಟನ್ ಧನುಷ್. ಆ ಬಳಿಕ ಏಳು ಸದಸ್ಯರ ಪೈಕಿ ಇಬ್ಬರ ಪತ್ರವನ್ನು ಹರಿದು ಹಾಕಬೇಕು ಎಂದು ಬಿಗ್ ಬಾಸ್ ರಿಷಾಗೆ ಅಧಿಕಾರ ನೀಡಿದರು.

ಈ ವೇಳೆ ರಿಷಾ ಅವರು, ಸ್ಪಂದನಾ ಹಾಗೂ ಸೂರಜ್ ಪತ್ರಗಳನ್ನು ಹರಿದು ಹಾಕಿದರು. ಸದ್ಯ ಸೋಮವಾರದ ಎಪಿಸೋಡ್​ನಲ್ಲಿ ಆದ ಘಟನೆಗೆ ಸುದೀಪ್ ಅವರು ನ್ಯಾಯ ಒದಗಿಸುತ್ತಾರೆ ಎಂದಿದೆ. ಅಲ್ಲಿಯವರೆಗೂ ರಿಷಾ ಅವರನ್ನು ಇಟ್ಟುಕೊಳ್ಳುವುದೂ ಅಲ್ಲದೆ, ಅವರಿಗೆ ವಿಶೇಷ ಅಧಿಕಾರ ಕೊಡುವ ಅವಶ್ಯಕತೆ ಏನಿತ್ತು ಎಂಬುದು ಅನೇಕರ ಪ್ರಶ್ನೆ. ಇದಕ್ಕೆ ಬಿಗ್ ಬಾಸ್ ಕಡೆಯಿಂದ ಅಂತೂ ಸ್ಪಷ್ಟನೆ ಸಿಗೋದು ಅನುಮಾನವೇ.

ಇದನ್ನೂ ಓದಿ: ಸುದೀಪ್ ಎದುರೇ ರಿಷಾ ಎಲಿಮಿನೇಷನ್; ಸಾಲುಗಳ ಮೂಲಕ ಸೂಚನೆ ಕೊಟ್ಟ ಬಿಗ್ ಬಾಸ್

ತಮಾಷೆಯಲ್ಲಿ ಶುರುವಾದ ಗಿಲ್ಲಿ ಹಾಗೂ ರಿಷಾ ಜಗಳ ಗಂಭೀರ ಸ್ವರೂಪ ಪಡೆಯಿತು. ರಿಷಾ ಅವರು ಗಿಲ್ಲಿ ಮೇಲೆ ಹಲ್ಲೆ ಮಾಡಿದರು. ಆದರೆ, ಗಿಲ್ಲಿ ಮಾತ್ರ ಇದಕ್ಕೆ ಉತ್ತರಿಸಲು ಹೋಗಲೇ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.