
‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶುರು ಆದಾಗಿನಿಂದ ಗಿಲ್ಲಿ ನಟ ಅವರು ಮಿಂಚುತ್ತಲೇ ಇದ್ದಾರೆ. ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದಾಗುತ್ತಲೇ ಇದೆ. ಈ ಮೊದಲು ಕೆಲವು ರಿಯಾಲಿಟಿ ಶೋಗಳಿಂದ ಗಿಲ್ಲಿ ಅವರಿಗೆ ಖ್ಯಾತಿ ಸಿಕ್ಕಿತ್ತು. ಅದಕ್ಕಿಂತಲೂ ಡಬಲ್ ಜನಪ್ರಿಯತೆ ಅವರಿಗೆ ಸಿಕ್ಕಿದೆ. ಗಿಲ್ಲಿ (Gilli Nata) ಆಟವನ್ನು ಬಿಗ್ ಬಾಸ್ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ವಿಶೇಷವಾಗಿ ಈ ವಾರ ಅವರು ನಡೆದುಕೊಂಡ ರೀತಿಯನ್ನು ಕಂಡು ಫ್ಯಾನ್ಸ್ ಖುಷಿ ಆಗಿದ್ದಾರೆ. ಗಿಲ್ಲಿಗೆ ಈ ವಾರದ ಕಿಚ್ಚನ ಚಪ್ಪಾಳೆ (Kichchana Chappale) ಸಿಗಬೇಕು ಎಂದು ಫ್ಯಾನ್ಸ್ ಒತ್ತಾಯ ಮಾಡುತ್ತಿದ್ದಾರೆ.
ನೋಡನೋಡುತ್ತಿದ್ದಂತೆಯೇ ವೀಕೆಂಡ್ ಬಂದಿದೆ. ಶನಿವಾರ (ಡಿಸೆಂಬರ್ 13) ಕಿಚ್ಚ ಸುದೀಪ್ ಅವರು ವಾರದ ಪಂಚಾಯ್ತಿ ನಡೆಸಲಿದ್ದಾರೆ. ಈ ವಾರದ ಪಂಚಾಯ್ತಿಯಲ್ಲಿ ಯಾವೆಲ್ಲ ವಿಚಾರಗಳು ಚರ್ಚೆ ಆಗಬೇಕು ಎಂದು ಸೋಶಿಯಲ್ ಮೀಡಿಯಾ ಮೂಲಕ ‘ಕಲರ್ಸ್ ಕನ್ನಡ’ ವಾಹಿನಿ ಪ್ರಶ್ನೆ ಕೇಳಿದೆ. ಅದಕ್ಕೆ ಕಮೆಂಟ್ ಮಾಡಿರುವ ಹಲವಾರು ಅಭಿಮಾನಿಗಳು ಗಿಲ್ಲಿಯ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
‘ಗಿಲ್ಲಿ ಅವರಿಗೆ ಈ ವಾರದ ಕಿಚ್ಚನ ಚಪ್ಪಾಳೆ ಸಿಗಬೇಕು. ಕಾವ್ಯಾನ ಅಳಿಸಬೇಕು ಎಂಬ ಸೀಕ್ರೆಟ್ ಟಾಸ್ಕ್ ಒಪ್ಪಿಕೊಳ್ಳುವಾಗ ಗಿಲ್ಲಿ ಚಡಪಡಿಸಿದ ವಿಡಿಯೋವನ್ನು ತೋರಿಸಿ. ಗಿಲ್ಲಿ ನಟಿಸಿರುವ ದಿ ಡೆವಿಲ್ ಸಿನಿಮಾ ಬಿಡುಗಡೆ ಆಗಿದೆ. ಅದರಲ್ಲಿ ಗಿಲ್ಲಿ ಹವಾ ಹೇಗಿದೆ ಎಂಬುದನ್ನು ಹೇಳಬೇಕು. ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿಯದ್ದೇ ಒನ್ ಮ್ಯಾನ್ ಶೋ. ಅವರನ್ನು ಮೀರಿಸುವವರು ಯಾರೂ ಇಲ್ಲ’ ಎಂಬಿತ್ಯಾದಿ ಕಮೆಂಟ್ಗಳು ಬಂದಿವೆ.
ಇನ್ನು, ಈ ವಾರದಲ್ಲಿ ರಜತ್ ನಡೆದುಕೊಂಡ ರೀತಿ ಬಗ್ಗೆ ವೀಕ್ಷಕರಿಗೆ ಅಸಮಾಧಾನ ಇದೆ. ಬಿಗ್ ಬಾಸ್ ಮನೆಯಲ್ಲಿ ಅವರು ರೌಡಿ ವರ್ತನೆ ತೋರಿದ್ದಾರೆ. ಅಶ್ಲೀಲ ಪದಬಳಕೆ ಮಾಡಿದ್ದಾರೆ. ಅಶ್ವಿನಿ ಗೌಡ ಅವರಿಗೆ ರಜತ್ ಮುದುಕಿ ಎಂದು ಹೇಳಿದ್ದಾರೆ. ಧ್ರುವಂತ್ ಜೊತೆ ಜಗಳ ಮಾಡುವಾಗ ಅಸಭ್ಯ ಭಾಷೆ ಮಾತನಾಡಿದ್ದಾರೆ. ಈ ಎಲ್ಲ ಕಾರಣಕ್ಕಾಗಿ ರಜತ್ ಅವರಿಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಗಿಲ್ಲಿ ಬಗ್ಗೆ ಮನೆಮಂದಿಗೆ ಇರುವ ಅಭಿಪ್ರಾಯ ಬದಲಿಸಲು ಯತ್ನಿಸಿದ ರಜತ್
‘ಸ್ಪಂದನಾ ಇಷ್ಟು ವಾರಗಳಿಂದ ಏನು ಮಾಡಿದ್ದಾರೆ ಅಂತ ಕೇಳಿ. ಕಾವ್ಯಾ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಕಳಿಸಿ. ಚೈತ್ರಾ ಕುಂದಾಪುರ ಓವರ್ ಆ್ಯಕ್ಟಿಂಗ್ ಮಾಡುತ್ತಿದ್ದಾರೆ. ಅದರ ಬಗ್ಗೆ ಮಾತನಾಡಿ. ಚೈತ್ರಾ ಉಸ್ತುವಾರಿ ತಪ್ಪಾಗಿದೆ. ಅವರು ಪಕ್ಷಪಾತ ಮಾಡಿದ್ದಾರೆ. ಅಶ್ವಿನಿ ಗೌಡ ಅವರು ರಜತ್ಗೆ ಕಚಡ ಎಂದು ಕರೆದಿದ್ದರ ಬಗ್ಗೆ ಚರ್ಚೆ ಮಾಡಿ’ ಎಂಬಿತ್ಯಾದಿ ಕಮೆಂಟ್ಗಳು ಕೂಡ ವೀಕ್ಷಕರಿಂದ ಬಂದಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:17 pm, Fri, 12 December 25