ಈ ವಾರದ ಪಂಚಾಯ್ತಿಯಲ್ಲಿ ಸುದೀಪ್ ಚರ್ಚೆ ಮಾಡಬೇಕಿರೋ ವಿಷಯಗಳು ಯಾವವು? ಇದೆ ದೊಡ್ಡ ಪಟ್ಟಿ
ಈ ವಾರದ ಬಿಗ್ ಬಾಸ್ ಕನ್ನಡ ವೀಕೆಂಡ್ ಸಂಚಿಕೆಯಲ್ಲಿ ಸುದೀಪ್ ಅವರು ಚರ್ಚಿಸಬಹುದಾದ ಪ್ರಮುಖ ವಿಷಯಗಳ ಪಟ್ಟಿ ಇಲ್ಲಿದೆ. ಅಶ್ವಿನಿ ಗೌಡ ಮತ್ತು ರಜತ್ ಕಿತ್ತಾಟ, ಚೈತ್ರಾ ಫೇವರಿಟಿಸಂ ಆರೋಪಗಳು, ಹಾಗೂ ಟಾಸ್ಕ್ನಲ್ಲಿನ ಸ್ಪರ್ಧಿಗಳ ಉತ್ತಮ ಪ್ರದರ್ಶನಗಳು ಚರ್ಚೆಗೆ ಬರಲಿವೆ. ಕಾವ್ಯಾ ಶೈವ ಅವರನ್ನು ಗಿಲ್ಲಿ ಅಳಿಸಿದ ವಿಷಯ ಕೂಡ ಚರ್ಚೆ ಆಗಬಹುದು.

ವೀಕೆಂಡ್ ಬಂತು ಎಂದರೆ ಬಿಗ್ ಬಾಸ್ ಪ್ರಿಯರಲ್ಲಿ ಉತ್ಸಾಹ ಹೆಚ್ಚುತ್ತದೆ. ಏಕೆಂದರೆ ಸುದೀಪ್ ಅವರು ವೀಕೆಂಡ್ ಅಲ್ಲಿ ಬರುತ್ತಾರೆ. ಶೋನ ನಡೆಸಿಕೊಡುತ್ತಾರೆ. ವಾರದಲ್ಲಿ ನಡೆದ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಈ ವಾರವೂ ಅದು ಮುಂದುವರಿಯಲಿದೆ. ವೀಕೆಂಡ್ನಲ್ಲಿ ಈ ವಾರ ಚರ್ಚೆ ಮಾಡಬೇಕಾದ ವಿಷಯಗಳು ಸಾಕಷ್ಟಿವೆ. ಅವು ಯಾವವು? ಇಲ್ಲಿದೆ ವಿವರ.
ಅಶ್ವಿನಿ-ರಜತ್ ಫೈಟ್
ಬಿಗ್ ಬಾಸ್ನಲ್ಲಿ ಈ ವಾರ ನಾಮಿನೇಟ್ ಮಾಡುವಾಗ ಅಶ್ವಿನಿ ಗೌಡ ಹಾಗೂ ರಜತ್ ಕಿತ್ತಾಡಿಕೊಂಡಿದ್ದರು. ಮಾತುಗಳು ಮಿತಿಮೀರಿದ್ದವು. ಅಶ್ವಿನಿ ಗೌಡ ಅವರು ಕಚಡ ಶಬ್ದ ಬಳಕೆ ಮಾಡಿದ್ದರು. ರಜತ್ ಕೂಡ ತಾವು ಕಡಿಮೆ ಇಲ್ಲ ಎಂಬಂತೆ ಬೇಕಾಬಿಟ್ಟಿ ಮಾತನಾಡಿದ್ದರು. ಧ್ರುವಂತ್ಗೂ ಬೈದಿದ್ದರು. ಈ ವಿಷಯ ಪ್ರಮುಖವಾಗಿ ಚರ್ಚೆಗೆ ಬರಬಹುದು. ಅಶ್ವಿನಿ ಗೌಡ ಇಷ್ಟು ದಿನ ಸೈಲೆಂಟ್ ಆಗಿದ್ದು, ಈ ವಾರ ನಾಲಿಗೆ ಹರಿಬಿಟ್ಟಿದ್ದರು.
ಟಾಸ್ಕ್ ವಿಷಯ
ಈ ಬಾರಿ ಎಲ್ಲರೂ ಟಾಸ್ಕ್ನ ಉತ್ತಮವಾಗಿ ಆಡಿದ್ದರು. ಈ ಬಗ್ಗೆ ಕಿಚ್ಚ ಅವರು ಮೆಚ್ಚುಗೆ ಸೂಚಿಸುವ ಸಾಧ್ಯತೆ ಇದೆ. ಉತ್ತಮವಾಗಿ ಆಡಿದ ವಾರ ಸುದೀಪ್ ಕಡೆಯಿಂದ ಮೆಚ್ಚುಗೆ ಸಿಕ್ಕ ಅನೇಕ ಉದಾಹರಣೆಗಳು ಇವೆ. ಈ ವಾರವೂ ಅದು ಮುಂದುವರಿಯುವ ಸಾಧ್ಯತೆ ಇದೆ.
ಚೈತ್ರಾ ಉಸ್ತುವಾರಿ
ಚೈತ್ರಾ ಉಸ್ತುವಾರಿಯಲ್ಲಿ ರಜತ್ಗೆ ಫೇವರಿಸಂ ಮಾಡಿದರು ಎಂಬ ಮಾತು ಕೇಳಿ ಬಂದಿತ್ತು. ಈ ವಿಷಯವನ್ನು ಅಶ್ವಿನಿ ಗೌಡ ಅವರು ಪ್ರಮುಖವಾಗಿ ಚರ್ಚೆಗೆ ತೆಗೆದುಕೊಂಡು ಬಂದಿದ್ದರು. ಹೀಗಾಗಿ, ಈ ವಿಷಯ ಪ್ರಸ್ತಾಪ ಆಗಬಹುದು. ಇನ್ನು, ಬಜರ್ ಒತ್ತುವ ಕೊನೆಯ ರೌಡಂಡ್ನಲ್ಲಿ ಚೈತ್ರಾ ಎಡವಿದ್ದರು. ಮೊದಲು ಬಜರ್ ಒತ್ತಿದ್ದು ರಜತ್ ಆಗಿತ್ತು. ಆದರೆ, ಈ ಆಯ್ಕೆ ಅವಕಾಶವನ್ನು ಚೈತ್ರಾ ಅಶ್ವಿನಿಗೆ ನೀಡಿದ್ದರು. ಇಲ್ಲಿ ಎಡವಟ್ಟು ಸಂಭವಿಸಿತ್ತು.
ಕಾವ್ಯಾ ಅಳಿಸೋ ವಿಷಯ
ಕಾವ್ಯಾ ಶೈವ ಅವರನ್ನು ಗಿಲ್ಲಿ ಅಳಿಸಿ, ಟಾಸ್ಕ್ನ ಉತ್ತಮವಾಗಿ ಆಡಿದ್ದರು. ಈ ಬಗ್ಗೆ ಚರ್ಚೆ ಆಗಬಹುದು. ಗಿಲ್ಲಿ ಅವರು ಭಾವನಾತ್ಮಕವಾಗಿ ಎಷ್ಟು ಚಾಲೆಂಜ್ ಅನುಭವಿಸಿದರು ಎನ್ನುವ ಬಗ್ಗೆ ಈ ವಾರ ಚರ್ಚೆ ಆಗಬಹುದು.
ಕ್ಯಾಪ್ಟನ್ಸಿ ರೂಂ
ಕ್ಯಾಪ್ಟನ್ ರೂಂ ಬಾಗಿಲನ್ನು ಸುದೀಪ್ ಅವರು ಮುಚ್ಚಿಸಿದ್ದರು. ಈ ವಾರ ಅದನ್ನು ಡೆವಿಲ್ ತೆಗಿಸಿದ್ದ. ಈ ವಿಷಯ ಚರ್ಚೆ ಆಗಬಹುದು ಎಂಬ ಮಾತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಲ್ಲಿದೆ. ಆದರೆ, ಇದು ಬಿಗ್ ಬಾಸ್ ಆಟದ ಸ್ಟ್ರೆಟಜಿ ಆಗಿರುವುದರಿಂದ ಈ ವಿಷಯ ಚರ್ಚೆ ಆಗೋದು ಅನುಮಾನವೇ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




