
ಗೌತಮಿ ಜಾಧವ್ (Goutami Jadhav) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಬಳಿಕ ಯಾವುದೇ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿಲ್ಲ. ಅತ್ತಿತ್ತ ಸುತ್ತಾಡುತ್ತಾ, ಫೋಟೋಶೂಟ್ ಮಾಡಿಸುತ್ತಾ ಸಮಯ ಕಳೆಯುತ್ತಿದ್ದಾರೆ. ಅವರು ನಟನೆಗೆ ಮರಳಬೇಕು ಎಂಬುದು ಅಭಿಮಾನಿಗಳ ಕೋರಿಕೆಯಾದರೂ ಅದು ಈಡೇರಿರಲಿಲ್ಲ. ಹೀಗಿರುವಾಗಲೇ ಗೌತಮಿ ಜಾಧವ್ ಅವರ ಕಡೆಯಿಂದ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಅವರು ಕಲರ್ಸ್ ಕನ್ನಡದ ಧಾರಾವಾಹಿಯಲ್ಲಿ ನಟಿಸಲಿದ್ದಾರೆ. ಹಾಗಾದರೆ ಹೊಸ ಧಾರಾವಾಹಿ ಆರಂಭ ಆಗುತ್ತಿದೆಯೇ? ಇಲ್ಲ. ಈಗ ಪ್ರಸಾರ ಕಾಣುತ್ತಿರುವ ಧಾರಾವಾಹಿಯಲ್ಲೇ ಅವರು ಅತಿಥಿ ಪಾತ್ರ ಮಾಡುತ್ತಿದ್ದಾರೆ. ಇದನ್ನು ನೋಡಲು ಅಭಿಮಾನಿಗಳು ಕಾದಿದ್ದಾರೆ.
ಕಲರ್ಸ್ ಕನ್ನಡದಲ್ಲಿ ‘ಭಾರ್ಗವಿ LL.B’ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ಜನಮನ ಗೆದ್ದಿದೆ. ಭಾರ್ಗವಿ ಪಾತ್ರದಲ್ಲಿ ರಾಧಾ ಭಗವತಿ ಅವರು ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಭಾರ್ಗವಿಗೆ ಪ್ರಾಣಾಪಯವಿದೆ. ಅವಳನ್ನು ಕಾಪಾಡಲು ಗೌತಮಿ ಜಾಧವ್ ಅವರ ಆಗಮನ ಆಗಿದೆ. ಅವರು ವಿಶೇಷ ಅತಿಥಿ ಪಾತ್ರದಲ್ಲಿ ಗಮನ ಸೆಳೆಯಲಿದ್ದಾರೆ.
‘ಭಾರ್ಗವಿ LL.B’ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಪ್ರತಿನಿತ್ಯ ರಾತ್ರಿ 8.30ಕ್ಕೆ ಪ್ರಸಾರ ಕಾಣಲಿದೆ. ‘ನಾನು ಎಲ್ಲೇ ಕಾಲಿಟ್ಟರೂ ಅಲ್ಲೊಂದು ಸೌಂಡ್ ಇರುತ್ತೆ’ ಎಂದು ಗೌತಮಿ ಜಾಧವ್ ಎಂಟ್ರಿ ಆಗಿದೆ. ಕಿಡಿಗೇಡಿಗಳ ಸುತ್ತ ಸಿಕ್ಕಿ ಬಿದ್ದಿರುವ ಭಾರ್ಗವಿಯನ್ನು ರಕ್ಷಿಸಲು ಬರೋ ಸಿಂಧೂರಿ ಹೆಸರಿನ ಪೊಲೀಸ್ ಪಾತ್ರದಲ್ಲಿ ಅವರು ಮಿಂಚುತ್ತಿದ್ದಾರೆ.
‘ಸತ್ಯ’ ಧಾರಾವಾಹಿಯಲ್ಲಿ ಗೌತಮಿ ಜಾಧವ್ ಅವರು ಮಾಸ್ ಡೈಲಾಗ್ ಮೂಲಕ ಫೇಮಸ್ ಆಗಿದ್ದರು. ಟಾಮ್ ಬಾಯ್ ಲುಕ್ನಲ್ಲಿ ಗಮನ ಸೆಳೆದಿದ್ದರು. ಇಲ್ಲಿ ಅವರ ಟಾಮ್ ಬಾಯ್ ಲುಕ್ ಹೋಗಿದೆ. ಇಲ್ಲಿ ಅವರು ಲಕ್ಷಣವಾಗಿ ಸೀರೆ ಉಟ್ಟು ಬಂದಿದ್ದಾರೆ. ಆದರೆ, ಗತ್ತು ಮಾತ್ರ ಹಾಗೆಯೇ ಇದೆ. ಇದನ್ನು ನೋಡಿ ಎಲ್ಲರೂ ಖುಷಿಪಟ್ಟಿದ್ದಾರೆ.
ಇದನ್ನೂ ಓದಿ: ಸೀರೆಯಲ್ಲಿ ಬೇರೆಯದೇ ರೀತಿ ಕಾಣ್ತಾರೆ ಗೌತಮಿ ಜಾಧವ್
‘ಸತ್ಯ’ ಧಾರಾವಾಹಿ ಬಳಿಕ ಗೌತಮಿ ಜಾಧವ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ಗೆ ಕಾಲಿಟ್ಟರು. ಇಷ್ಟು ದಿನಗಳ ಕಾಲ ನೋಡಿದ ಗೌತಮಿಗೂ ಇಲ್ಲಿ ನೋಡಿದ ಗೌತಮಿಗೂ ಸಾಕಷ್ಟು ವ್ಯತ್ಯಾಸ ಇತ್ತು. ಈ ಗೌತಮಿಯನ್ನು ಜನರು ಸಾಕಷ್ಟು ಇಷ್ಟಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.