‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಚಂದ್ರಪ್ರಭ ಜಿ. (Chandraprabha G) ಅವರು ಈಗ ವಿವಾದ ಒಂದಕ್ಕೆ ಸಿಲುಕಿದ್ದಾರೆ. ಹಿಟ್ ಆ್ಯಂಡ್ ರನ್ ಕೇಸ್ನಲ್ಲಿ ಅವರಿಗೆ ಸೇರಿದ ಕಾರು ಬಳಕೆ ಆಗಿದೆ. ವೃತ್ತಿಯಲ್ಲಿ ಕಲಾವಿದ ಆಗಿರುವ ಅವರು ಮಾನವೀಯತೆ ತೋರಿಸಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ಅಪಘಾತ ಒಂದು ನಡೆದಿದೆ. ಬೈಕ್ ಒಂದಕ್ಕೆ ಕಾರು ಗುದ್ದಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.
ಚಿಕ್ಕಮಗಳೂರು ನಗರದ KSRTC ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ. ಚಿಕ್ಕಮಗಳೂರು ಸಮೀಪದ ನಾಗೇನಹಳ್ಳಿ ನಿವಾಸಿ ಮಾಲ್ತೇಶ್ ಎಂಬುವವರು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೆಲಸ ಮುಗಿಸಿ ಬೈಕ್ನಲ್ಲಿ ಬರುತ್ತಿದ್ದರು. ಈ ವೇಳೆ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ಮಾಲ್ತೇಶ್ಗೆ ಏನಾಯಿತು ಎಂದು ನೋಡುವ ಪ್ರಯತ್ನವನ್ನೂ ಕಾರು ಚಾಲಕ ಮಾಡಿಲ್ಲ. ಈ ಕಾರು ಚಂದ್ರಪ್ರಭ ಅವರಿಗೆ ಸೇರಿದ್ದಾಗಿದೆ.
ಸದ್ಯ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಮಾಲ್ತೇಶ್ಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಗಂಭೀರ ಆಗಿದೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ನಡೆಯುವ ಸಂದರ್ಭದಲ್ಲಿ ಚಂದ್ರಪ್ರಭ ಅವರೇ ಕಾರು ಓಡಿಸುತ್ತಿದ್ದರೋ ಅಥವಾ ಬೇರೆಯವರು ಈ ಕಾರನ್ನು ತೆಗೆದುಕೊಂಡು ಹೋಗಿದ್ದರೋ ಎನ್ನುವ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.
ಇದನ್ನೂ ಓದಿ: ವೀಕ್ಷಕರಿಗೆ ಕಣ್ಣೀರು ತರಿಸಿತು ಆ ಒಂದು ನಾಟಕ; ‘ಗಿಚ್ಚಿ ಗಿಲಿಗಿಲಿ 2’ ವೇದಿಕೆ ಮೇಲೆ ಅಂಥದ್ದೇನಾಯ್ತು?
‘ಗಿಚ್ಚಿ ಗಿಲಿ ಗಿಲಿ ಸೀಸನ್ 2’ರಲ್ಲಿ ಚಂದ್ರಪ್ರಭ ಭಾಗಿ ಆಗಿದ್ದರು. ಅವರು ಈ ಸೀಸನ್ ವಿನ್ನರ ಕೂಡ ಹೌದು. ಸದ್ಯ ಅವರು ವಿವಾದದ ಮೂಲಕ ಸುದ್ದಿ ಆಗುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ