AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama Serial: ಮನೆ ಮಾರಾಟ ಮಾಡುವ ಬಗ್ಗೆ ಸೀತಾಳ ನಿರ್ಧಾರ ಬದಲಾಗುತ್ತಾ?

ರಾಮ್ ತಾತನ ಬಳಿ ಅಡ್ವಾನ್ಸ್ ಸಂಬಳ ಕೊಡಿಸುವ ವಿಷಯವನ್ನು ಮಾತನಾಡುತ್ತಾನೆ. ಇದಕ್ಕೆ ತಾತನ ಒಪ್ಪಿಗೆಯೂ ದೊರೆಯುತ್ತದೆ. ಆದರೆ  ಸೀತಾ ಮಾತ್ರ, ಅನೇಕ ಕಡೆ ಮನೆ ಬಾಡಿಗೆಗೆ ವಿಚಾರಿಸುತ್ತಾಳೆ. ಇದಕ್ಕೆಲ್ಲಾ ರಾಮನದು ಒಂದೇ ಮಾತು, ‘ಸ್ವಲ್ಪ ದಿನ ಕಾಯಿರಿ, ಎಲ್ಲ ಒಳ್ಳೆಯದಾಗುತ್ತದೆ’ ಎಂಬುದು. ಆದರೆ ಅಂತಿಮವಾಗಿ ಸೀತಾಳ ನಿರ್ಧಾರವೇನು? ಕಾದು ನೋಡೋಣ.

Seetha Raama Serial: ಮನೆ ಮಾರಾಟ ಮಾಡುವ ಬಗ್ಗೆ ಸೀತಾಳ ನಿರ್ಧಾರ ಬದಲಾಗುತ್ತಾ?
ವೈಷ್ಣವಿ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Sep 05, 2023 | 11:26 AM

Share

‘ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 36: ಸೀತಾ, ಸಿಹಿ ಜೊತೆ ತಿರುಗಾಡಿ, ಹೊಟ್ಟೆ ತುಂಬಾ ತಿಂದು ಬಂದ ರಾಮನಿಗೆ ಮನೆಯವರೆಲ್ಲಾ ಸೇರಿ ಊಟ ಮಾಡುವಂತೆ ಬಲವಂತ ಮಾಡುತ್ತಾರೆ. ಆದರೆ ರಾಮನಿಗೆ ಗಂಟಲಿನಲ್ಲಿ ಒಂದು ತುತ್ತು ಕೂಡ ತಿನ್ನಲು ಸಾಧ್ಯವಿಲ್ಲ ಎನ್ನಿಸಿ, ಅವನ ಚಿಕ್ಕಿ ಭಾರ್ಗವಿ ಹೇಳಿದ ಮಾತನ್ನೂ ಧಿಕ್ಕರಿಸಿ ಹೊರಡುತ್ತಾನೆ. ಸೀತಾಳ ಮೆಸೇಜ್ ನೋಡಿ ಅವಳಿಗೆ ಕಾಲ್ ಮಾಡುತ್ತಾನೆ. ಸೀತಾ ಮನೆ ಬಾಡಿಗೆಯ ಬಗ್ಗೆ ವಿಚಾರಿಸುತ್ತಾಳೆ. ಆದರೆ ಅದರ ಬಗ್ಗೆ ಏನೂ ಅರಿಯದ ರಾಮ್ ಅಶೋಕ್ ಬಳಿ, ವಿಚಾರಿಸಿ ಹೇಳುತ್ತಾನೆ. ಮನೆ ಮಾರಾಟ ಮಾಡುವುದು ರಾಮ್​ಗೆ ಇಷ್ಟವಿಲ್ಲವಾದ್ದರಿಂದ, ಸೀತಾಳಿಗೆ ನೀವು ಮನೆ ಮಾರಾಟ ಮಾಡುವುದು ಬೇಡ ಎಂದು ಹೇಳುತ್ತಾನೆ.

ಇನ್ನು ಅಶೋಕ್ ಮತ್ತು ರಾಮನ ತಾತ ಸೂರ್ಯ ಪ್ರಕಾಶ ಇಬ್ಬರೂ ಸೇರಿ ಶ್ರೀರಾಮನಿಗೆ ಸೀತೆಯನ್ನು ಹುಡುಕುವ ನಿರ್ಧಾರ ಮಾಡುತ್ತಾರೆ. ಅದಕ್ಕೆ ಅಶೋಕ್ ಸ್ವಲ್ಪ ದಿನ ಕಾಯೋಣ ಎನ್ನುತ್ತಾನೆ. ಇನ್ನು ರುದ್ರ ಪ್ರತಾಪನ ಕುತಂತ್ರದಿಂದ ಸೀತಾಳ ಮನೆ ಬಾಗಿಲಿಗೆ ರಿಮೈಂಡರ್ ನೋಟಿಸ್ ಬರುತ್ತದೆ. ಎಲ್ಲ ತಾನೇ ಸರಿ  ಮಾಡುವ ಹಾಗೇ ಅವಳಿಗೆ ಭರವಸೆಯನ್ನೂ ನೀಡುತ್ತಾನೆ.

View this post on Instagram

A post shared by Zee Kannada (@zeekannada)

ಇದನ್ನೂ ಓದಿ: ಕೃಷ್ಣಾಷ್ಟಮಿ ಪ್ರಯುಕ್ತ ಮಹಾ ಸಂಚಿಕೆಗಳೊಂದಿಗೆ ಬಂದ ಜೀ ಕನ್ನಡ ವಾಹಿನಿ

ಇನ್ನು ರಾಮ್ ತಾತನ ಬಳಿ ಅಡ್ವಾನ್ಸ್ ಸಂಬಳ ಕೊಡಿಸುವ ವಿಷಯವನ್ನು ಮಾತನಾಡುತ್ತಾನೆ. ಇದಕ್ಕೆ ತಾತನ ಒಪ್ಪಿಗೆಯೂ ದೊರೆಯುತ್ತದೆ. ಆದರೆ  ಸೀತಾ ಮಾತ್ರ, ಅನೇಕ ಕಡೆ ಮನೆ ಬಾಡಿಗೆಗೆ ವಿಚಾರಿಸುತ್ತಾಳೆ. ಇದಕ್ಕೆಲ್ಲಾ ರಾಮನದು ಒಂದೇ ಮಾತು, ಸ್ವಲ್ಪ ದೀನ ಕಾಯಿರಿ, ಎಲ್ಲ ಒಳ್ಳೆಯದಾಗುತ್ತದೆ ಎಂಬುದು. ಆದರೆ ಅಂತಿಮವಾಗಿ ಸೀತಾಳ ನಿರ್ಧಾರವೇನು? ಕಾದು ನೋಡೋಣ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:25 am, Tue, 5 September 23

Follow Us
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ