Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷ್ಣಾಷ್ಟಮಿ ಪ್ರಯುಕ್ತ ಮಹಾ ಸಂಚಿಕೆಗಳೊಂದಿಗೆ ಬಂದ ಜೀ ಕನ್ನಡ ವಾಹಿನಿ

ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಜೀ ಕನ್ನಡ ವಾಹಿನಿ ಧಾರಾವಾಹಿಗಳ ಮಹಾ ಸಂಚಿಕೆ ಆರಂಭಿಸಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿದೆ. ಈ ವಿಚಾರ ವೀಕ್ಷಕರ ಖುಷಿಗೆ ಕಾರಣ ಆಗಿದೆ. ಯಾವ ಯಾವ ಧಾರಾವಾಹಿಗಳ ಮಹಾ ಸಂಚಿಕೆ ಪ್ರಸಾರ ಕಾಣಲಿದೆ ಎಂಬ ಬಗ್ಗೆ ಇಲ್ಲಿದೆ ವಿವರ.

ಕೃಷ್ಣಾಷ್ಟಮಿ ಪ್ರಯುಕ್ತ ಮಹಾ ಸಂಚಿಕೆಗಳೊಂದಿಗೆ ಬಂದ ಜೀ ಕನ್ನಡ ವಾಹಿನಿ
ಕೃಷ್ಣಾಷ್ಟಮಿ ಪ್ರಯುಕ್ತ ಮಹಾ ಸಂಚಿಕೆಗಳೊಂದಿಗೆ ಬಂದ ಜೀ ಕನ್ನಡ ವಾಹಿನಿ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Sep 05, 2023 | 11:08 AM

ಕಿರುತೆರೆ ಲೋಕದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಈ ಮೊದಲು ಮಾಡಲಾದ ಪ್ರಯೋಗಗಳು ಯಶಸ್ವಿ ಆದರೆ ಅದನ್ನು ಪಾಲಿಸಿಕೊಂಡು ಹೋಗಲಾಗುತ್ತದೆ. ಆ ಪೈಕಿ ‘ಮಹಾ ಸಂಚಿಕೆ’ ಪ್ರಯೋಗವೂ ಒಂದು. ಹಬ್ಬದ ಸಂದರ್ಭದಲ್ಲಿ ಮಹಾ ಸಂಚಿಕೆ, ಅಂದರೆ ಒಂದು ಗಂಟೆಗಳ ಕಾಲ ಧಾರಾವಾಹಿ ಪ್ರಸಾರ ಮಾಡಲಾಗುತ್ತದೆ. ಈಗ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಜೀ ಕನ್ನಡ (Zee Kannada) ವಾಹಿನಿ ಧಾರಾವಾಹಿಗಳ ಮಹಾ ಸಂಚಿಕೆ ಆರಂಭಿಸಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿದೆ. ಈ ವಿಚಾರ ವೀಕ್ಷಕರ ಖುಷಿಗೆ ಕಾರಣ ಆಗಿದೆ.

ಸೆಪ್ಟೆಂಬರ್ 7 ಕೃಷ್ಣ ಜನ್ಮಾಷ್ಟಮಿ ಇದೆ. ಇದು ಹಿಂದೂಗಳ ಪಾಲಿಗೆ ವಿಶೇಷ ಹಬ್ಬ. ಈ ಕಾರಣದಿಂದ ಜೀ ಕನ್ನಡ ವಾಹಿನಿ ವೀಕ್ಷಕರಿಗೆ ವಿಶೇಷ ಉಡುಗೊರೆ ನೀಡುತ್ತಿದೆ. ಸೋಮವಾರದಿಂದ (ಸೆಪ್ಟೆಂಬರ್ 4) ಶುಕ್ರವಾರದವರೆಗೆ (ಸೆಪ್ಟೆಂಬರ್ 8) ಕೆಲವು ಧಾರಾವಾಹಿಗಳ ಮಹಾ ಸಂಚಿಕೆ ಪ್ರಸಾರ ಕಾಣಲಿದೆ. ಈ ಕುರಿತು ಜೀ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದೆ.

ಸೋಮವಾರ

ಸೆಪ್ಟೆಂಬರ್ 4ರಂದು ‘ಅಮೃತಧಾರೆ’ ಧಾರಾವಾಹಿಯ ಮಹಾ ಸಂಚಿಕೆ ಪ್ರಸಾರ ಕಂಡಿದೆ. ಈಗಾಗಲೇ ಮಹಿಮಾ ಹಾಗೂ ಜೀವಾ ಮದುವೆ ನೆರವೇರಿದೆ. ಈಗ ಭೂಮಿಕಾ ಹಾಗೂ ಗೌತಮ ಮದುವೆ ನಡೆಯುತ್ತಿದೆ. ಈ ವಿಶೇಷ ಸಂದರ್ಭದಲ್ಲೇ ಮಹಾ ಸಂಚಿಕೆ ಪ್ರಸಾರ ಕಂಡಿರೋದು ಅಭಿಮಾನಿಗಳಿಗೆ ಖುಷಿ ನೀಡಿದೆ. ಸಂಜೆ 6:30-7:30ರವರೆಗೆ ಮಹಾ ಸಂಚಿಕೆ ಪ್ರಸಾರಗೊಂಡಿದೆ.

ಮಂಗಳವಾರ

ಇಂದು (ಸೆಪ್ಟೆಂಬರ್ 5) ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಮಹಾ ಸಂಚಿಕೆ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ಟಿಆರ್​ಪಿ ರೇಸ್​ನಲ್ಲಿ ಮೊದಲ ಸ್ಥಾನದಲ್ಲಿದೆ. ಒಂದೇ ದಿನ ಎರಡು ಎಪಿಸೋಡ್​ಗಳನ್ನು ವೀಕ್ಷಕರು ಕಣ್ತುಂಬಿಕೊಳ್ಳಬಹುದು. ಪ್ರಸಾರ ಸಮಯ: 7:30ರಿಂದ 8:30.

View this post on Instagram

A post shared by Zee Kannada (@zeekannada)

ಬುಧವಾರ

‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಪ್ರಮುಖ ಘಟ್ಟ ತಲುಪಿದೆ. ಈ ಧಾರಾವಾಹಿ ದಿನ ಕಳೆದಂತೆ ಕುತೂಹಲ ಹೆಚ್ಚಿಸಿಕೊಳ್ಳುತ್ತಿದೆ. ಈ ಧಾರಾವಾಹಿಯ ಮಹಾ ಸಂಚಿಕೆ ಬುಧವಾರ (ಸೆಪ್ಟೆಂಬರ್ 6) ಪ್ರಸಾರ ಕಾಣುತ್ತಿದೆ ಅನ್ನೋದು ವಿಶೇಷ. ಪ್ರಸಾರ ಸಮಯ 8:30ರಿಂದ 9:30.

ಇದನ್ನೂ ಓದಿ: ಎರಡನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ; ಹೆಚ್ಚಿತು ‘ಗೀತಾ’ ಸೀರಿಯಲ್ ಟಿಆರ್​ಪಿ

ಸೀತಾ ರಾಮ

‘ಸೀತಾ ರಾಮ’ ಧಾರಾವಾಹಿ ಟಿಆರ್​ಪಿ ರೇಸ್​ನಲ್ಲಿ ಮೊದಲ ಸ್ಥಾನದಲ್ಲಿ (ನಗರ ಭಾಗ) ಇದೆ. ಈ ಧಾರಾವಾಹಿಯಲ್ಲಿ ಗಗನ್​ ಚಿನ್ನಪ್ಪ, ವೈಷ್ಣವಿ ಗೌಡ, ರೀತು ಸಿಂಗ್, ಪೂಜಾ ಲೋಕೇಶ್, ಮುಖ್ಯಮಂತ್ರಿ ಚಂದ್ರು, ಅಶೋಕ್ ಮೊದಲಾದವರು ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಈ ಧಾರಾವಾಹಿ ಬಗ್ಗೆ ದಿನ ಕಳೆದಂತೆ ಕುತೂಹಲ ಹೆಚ್ಚುತ್ತಿದೆ. ಕೃಷ್ಣಾಷ್ಟಮಿ ದಿನ ಈ ಧಾರಾವಾಹಿಯ ಮಹಾ ಸಂಚಿಕೆ ಪ್ರಸಾರ ಕಾಣಲಿದೆ. ಪ್ರಸಾರ ಸಮಯ 9:30ರಿಂದ 10:30.

ಭೂಮಿಗೆ ಬಂದ ಭಗವಂತ

‘ಭೂಮಿಗೆ ಬಂದ ಭಗವಂತ’ ಧಾರಾವಾಹಿ ಸಾಕಷ್ಟು ಮೆಚ್ಚುಗೆ ಪಡೆದಿದೆ. ಮಧ್ಯಮ ವರ್ಗದ ಜನರ ಜಂಜಾಟದ ಕಥೆಯನ್ನು ಈ ಧಾರಾವಾಹಿಯಲ್ಲಿ ಹೇಳಲಾಗುತ್ತಿದೆ. ನವೀನ್​ ಕೃಷ್ಣ, ಕೃತಿಕಾ ರವೀಂದ್ರ, ಉಮೇಶ್ ಮೊದಲಾದವರು ಧಾರಾವಾಹಿಯಲ್ಲಿ ನಟಿಸಿದ್ದಾರೆ. ಈ ಧಾರಾವಾಹಿಯ ಮಹಾ ಸಂಚಿಕೆ ಶುಕ್ರವಾರ ಪ್ರಸಾರ ಕಾಣಲಿದೆ. ಪ್ರಸಾರ ಸಮಯ 10:30ರಿಂದ 11:30.

ಎರಡು ಧಾರಾವಾಹಿಗಿಲ್ಲ ಮಹಾ ಸಂಚಿಕೆ

ಟಿಆರ್​ಪಿ ರೇಸ್​ನಲ್ಲಿ ‘ಗಟ್ಟಿಮೇಳ’ ಧಾರಾವಾಹಿ ಹಾಗೂ ‘ಸತ್ಯ’ ಧಾರಾವಾಹಿ ಇದೆ. ಆದರೆ, ಇವುಗಳಿಗೆ ಮಹಾ ಸಂಚಿಕೆ ಇಲ್ಲ. ಇದು ಈ ಧಾರಾವಾಹಿ ವೀಕ್ಷಕರ ಬೇಸರಕ್ಕೆ ಕಾರಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ