Seetha Raama Serial: ಸೀತಾ, ರಾಮರ ಗೆಳತನಕ್ಕೆ ಭಾರ್ಗವಿಯೇ ಅಡ್ಡಗೋಡೆಯಾಗುತ್ತಾಳಾ?

Seetha Raama Serial: ರಾಮನ ಬದುಕಿನಲ್ಲಿ ಯಾರೋ ಹುಡುಗಿ ಬಂದಿದ್ದಾಳೆ ಎಂಬುದು ಭಾರ್ಗವಿಗೆ ಅನುಮಾನವಿದ್ದರೂ ಯಾರು? ಏನು? ಎಂಬುದು ತಿಳಿದಿಲ್ಲದ ಕಾರಣ ಅವಳ ಕುತುಹೂಲ ದಿನೇ ದಿನೇ ಹೆಚ್ಚುತ್ತದೆ. ಸೀತಾ, ರಾಮರ ಗೆಳತನಕ್ಕೆ ಭಾರ್ಗವಿಯೇ ಅಡ್ಡಗೋಡೆಯಾಗುತ್ತಾಳಾ? ಮನೆ ಬಿಡಿಸಿಕೊಳ್ಳುವಲ್ಲಿ ರಾಮ್, ಸೀತಾಗೆ ಹೇಗೆ ಸಹಾಯ ಮಾಡಬಹುದು? ಕಾದು ನೋಡೋಣ.

Seetha Raama Serial: ಸೀತಾ, ರಾಮರ ಗೆಳತನಕ್ಕೆ ಭಾರ್ಗವಿಯೇ ಅಡ್ಡಗೋಡೆಯಾಗುತ್ತಾಳಾ?
ಸೀತಾ ರಾಮ
Follow us
ಪ್ರೀತಿ ಭಟ್​, ಗುಣವಂತೆ
| Updated By: ಮಂಜುನಾಥ ಸಿ.

Updated on: Sep 02, 2023 | 7:59 AM

ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 35: ಸೀತಾಳ ಗಂಡನ ಬಗ್ಗೆ ಕೇಳಿದ್ದ ರಾಮನಿಗೆ ಅದಕ್ಕೆ ಸರಿಯಾದ ಉತ್ತರ ಸಿಗದಿದ್ದರೂ ಸೀತಾಳ ಜೊತೆಗಿನ ಗೆಳೆತನ ಮಾತ್ರ ಗಟ್ಟಿಯಾಗುತ್ತದೆ. ಇದಕ್ಕೆಲ್ಲಾ ಸಿಹಿಯೇ ಕೊಂಡಿಯಾದರೂ ಸೀತಾ, ರಾಮರ ಬಂಧ ಅನುಬಂಧವಾಗುವ ಸಮಯ ಹತ್ತಿರವಾಗುತ್ತಿರುವುದರಲ್ಲಿ ಸಂಶಯವೇ ಇಲ್ಲ. ಇನ್ನು ಸೀತಾ ಮನೆ ಮಾರುವ ವಿಷಯ ರಾಮನನ್ನು ಕೊರಗುವಂತೆ ಮಾಡಿರುತ್ತದೆ ಹಾಗಾಗಿ ಆ ಬಗ್ಗೆ ಸೀತಾ ಬಳಿ ಮಾತನಾಡುತ್ತಾನೆ. ಆದರೆ ಅವಳು ಮಾತ್ರ ಆ ವಿಷಯ ಬಿಟ್ಟು ಬೇರೆ ಯಾವ ದಾರಿಯನ್ನೂ ಒಪ್ಪುವುದಿಲ್ಲ. ಈ ಸಮಸ್ಯೆ ಬಗೆಹರಿಸಲು ಹೇಗಾದರೂ ಅವಳಿಗೆ ಸಹಾಯ ಮಾಡಬೇಕು ಎಂದು ಅಂದುಕೊಳ್ಳುತ್ತಾನೆ. ಇನ್ನು ಈ ವಿಷಯವನ್ನು ಅಶೋಕನಿಗೂ ತಿಳಿಸುತ್ತಾನೆ. ಸೀತಾ, ಸಿಹಿಯೊಂದಿಗೆ ಕಳೆದ ಸಂತೋಷದ ಘಳಿಗೆಯನ್ನೂ ಹಂಚಿಕೊಳ್ಳುತ್ತಾನೆ.

ಭಾರ್ಗವಿ ಮತ್ತೆ ರಾಮನ ಚಿಕ್ಕಪ್ಪ ಸತ್ಯನ ಜೊತೆ ನಡೆದ ಜಗಳ ಮನೆಯವರ ಮನೆ ಮುಂದೆ ಬಯಲಾಗುತ್ತದೆ. ಆದರೆ ತನ್ನದೇನೂ ತಪ್ಪೇ ಇಲ್ಲ ಎಂಬಂತೆ ಭಾರ್ಗವಿ ಅದನ್ನೆಲ್ಲಾ ಸಲಿಸಾಗಿ ಮುಚ್ಚಿ ಹಾಕುತ್ತಾಳೆ. ಅದನ್ನು ನೋಡಿದ ದೇಸಾಯಿ ಮನೆಯವರೂ ಕೂಡ ಸತ್ಯ ಗೊತ್ತಿಲ್ಲದೇ ಸತ್ಯನನ್ನೇ ಸುಳ್ಳುಗಾರನನ್ನಾಗಿ ನೋಡುತ್ತಾರೆ. ಆದರೆ ರಾಮ ಮಾತ್ರ ಚಿಕ್ಕಪ್ಪನನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಅವನು ಸಮಾಧಾನದಿಂದಲೇ ಅವರನ್ನು ಮಾತನಾಡಿಸಿ ಕಾಳಜಿ ತೋರಿಸುತ್ತಾನೆ.

ಎಲ್ಲವೂ ಇದ್ದು ಏನು ಇಲ್ಲದ ಪರಿಸ್ಥಿತಿ ರಾಮನದ್ದು. ಅದೇ ಸಮಯಕ್ಕೆ ಬಂದ ಭಾರ್ಗವಿಯೂ ರಾಮನನ್ನು ಸಮಾಧಾನ ಪಡಿಸಲು ನೋಡುತ್ತಾಳೆ. ಅವನ ಮದುವೆ ವಿಚಾರವನ್ನೂ ಪ್ರಸ್ತಾಪ ಮಾಡುತ್ತಾಳೆ. ಆದರೆ ರಾಮನ ಬಳಿ ಅದಾವುದಕ್ಕೂ ಉತ್ತರವಿರುವುದಿಲ್ಲ. ಭಾರ್ಗವಿ ಅಂದುಕೊಂಡ ಹಾಗೇ ರಾಮ್ ನಡೆದುಕೊಳ್ಳುವುದಿಲ್ಲ. ಅವನ ಬದುಕಿನಲ್ಲಿ ಯಾರೋ ಹುಡುಗಿ ಬಂದಿದ್ದಾಳೆ ಎಂಬುದು ಭಾರ್ಗವಿಗೆ ಅನುಮಾನವಿದ್ದರೂ ಯಾರು? ಏನು? ಎಂಬುದು ತಿಳಿದಿಲ್ಲದ ಕಾರಣ ಅವಳ ಕುತುಹೂಲ ಇನ್ನು ಹೆಚ್ಚುತ್ತದೆ. ಸೀತಾ, ರಾಮರ ಗೆಳತನಕ್ಕೆ ಭಾರ್ಗವಿಯೇ ಅಡ್ಡಗೋಡೆಯಾಗುತ್ತಾಳಾ? ಮನೆ ಬಿಡಿಸಿಕೊಳ್ಳುವಲ್ಲಿ ರಾಮ್, ಸೀತಾಗೆ ಹೇಗೆ ಸಹಾಯ ಮಾಡಬಹುದು? ಕಾದು ನೋಡೋಣ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು