AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೀಕ್ಷಕರಿಗೆ ಕಣ್ಣೀರು ತರಿಸಿತು ಆ ಒಂದು ನಾಟಕ; ‘ಗಿಚ್ಚಿ ಗಿಲಿಗಿಲಿ 2’ ವೇದಿಕೆ ಮೇಲೆ ಅಂಥದ್ದೇನಾಯ್ತು?

‘ಗಿಚ್ಚಿ ಗಿಲಿಗಿಲಿ’ ಮೊದಲ ಸೀಸನ್ ಯಶಸ್ಸು ಕಂಡಿತು. ಆ ಬಳಿಕ ‘ಗಿಚ್ಚಿ ಗಿಲಿಗಿಲಿ ಸೀಸನ್ 2’ ಬಂದಿದೆ. ನಿರಂಜನ್​ ದೇಶಪಾಂಡೆ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.

ವೀಕ್ಷಕರಿಗೆ ಕಣ್ಣೀರು ತರಿಸಿತು ಆ ಒಂದು ನಾಟಕ; ‘ಗಿಚ್ಚಿ ಗಿಲಿಗಿಲಿ 2’ ವೇದಿಕೆ ಮೇಲೆ ಅಂಥದ್ದೇನಾಯ್ತು?
ಶಿವು-ಸೃಜನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Feb 06, 2023 | 2:49 PM

ಇತ್ತೀಚೆಗೆ ಹಲವು ರೀತಿಯ ರಿಯಾಲಿಟಿ ಶೋಗಳು ಬರುತ್ತಿವೆ. ಎಲ್ಲಾ ವಾಹಿನಿಗಳ ಮಧ್ಯೆ ಕಾಂಪಿಟೇಷನ್ ಇದೆ. ವಾರಾಂತ್ಯಕ್ಕೆ ಮನೆಯಲ್ಲೇ ಇರುವ ವೀಕ್ಷಕರಿಗೆ ಮನರಂಜನೆ ನೀಡಬೇಕು ಎನ್ನುವ ಕಾರಣಕ್ಕೆ ಭಿನ್ನ ರೀತಿಯಲ್ಲಿ ಕಾರ್ಯಕ್ರಮಗಳನ್ನು ತರಲಾಗುತ್ತದೆ. ಕಲರ್ಸ ಕನ್ನಡ ವಾಹಿನಿ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಹಲವು ಧಾರಾವಾಹಿಗಳನ್ನು ಪ್ರಸಾರ ಮಾಡುವುದರ ಜೊತೆಗೆ ವೀಕೆಂಡ್​ನಲ್ಲಿ ಹಲವು ರಿಯಾಲಿಟಿ ಶೋಗಳನ್ನು ಪ್ರಸಾರ ಮಾಡುತ್ತದೆ. ಆ ಪೈಕಿ ‘ಗಿಚ್ಚಿ ಗಿಲಿಗಿಲಿ 2’ (Gichchi GiliGili) ಕೂಡ ಒಂದು. ‘ಗಿಚ್ಚಿ ಗಿಲಿಗಿಲಿ’ ಮೊದಲ ಸೀಸನ್ ಹಿಟ್ ಆದ ನಂತರ ‘ಗಿಚ್ಚಿ ಗಿಲಿ 2’ ಪ್ರಸಾರ ಕಾಣುತ್ತಿದೆ. ಈ ರಿಯಾಲಿಟಿ ಶೋನ ಭಾನುವಾರದ ಎಪಿಸೋಡ್​ನಲ್ಲಿ ಒಂದು ನಾಟಕ ಮಾಡಲಾಗಿದೆ. ಇದು ಅನೇಕರಿಗೆ ಕಣ್ಣೀರು ತರಿಸಿದೆ.

ಶಿವು, ಮಹಿತಾ ಅವರು ಈ ನಾಟಕ ಮಾಡಿದ್ದಾರೆ. ಈ ನಾಟಕದಲ್ಲಿ ಶಿವು ಮಧ್ಯಮ ವರ್ಗದ ಕುಟುಂಬದ ವ್ಯಕ್ತಿ. ಆತ ಡ್ರಾಮಾಗಳಲ್ಲಿ ಕರ್ಣನ ಪಾತ್ರ ಮಾಡಿ ಜೀವನ ನಡೆಸುತ್ತಾನೆ. ಒಮ್ಮೆ ಆತನಿಗೆ ಶಾಲೆಯೊಂದರಿಂದ ‘ಕರ್ಣ ಪರ್ವ ನಾಟಕ ಇದೆ. ಬಂದು ಕರ್ಣನ ಪಾತ್ರ ಮಾಡಿ ಬನ್ನಿ’ ಎನ್ನುವ ಆಹ್ವಾನ ಬರುತ್ತದೆ. ಆತ ಹೋಗುತ್ತಾನೆ. ಕಾರಣಾಂತರಗಳಿಂದ ಶಾಲೆಗೆ ರಜೆ ಘೋಷಣೆ ಆಗುತ್ತದೆ. ನಾಟಕ ರದ್ದಾಗುತ್ತದೆ. ಆತ ಮಗನನ್ನೂ ಕರೆದುಕೊಂಡು ಬಂದಿರುತ್ತಾನೆ. ಹಸಿವಿನಿಂದ ಬಳಲುತ್ತಿರುವ ಮಗನಿಗೆ ಇಡ್ಲಿ ತಿನ್ನಿಸಿ ತಾನು ಹಸಿವಿನಿಂದ ಒದ್ದಾಡುತ್ತಾನೆ. ಹೋಟೆಲ್​ನಲ್ಲಿ ಕೆಲಸ ಮಾಡುವ ಬಾಲಕಿ ಆತನಿಗೆ ಇಡ್ಲಿ ಕೊಡ್ತಾಳೆ. ಆತ ಪ್ರತಿಯಾಗಿ ಕರ್ಣನ ಪಾತ್ರ ಮಾಡಿ ತೋರಿಸ್ತಾನೆ.

ಈ ಪರ್ಫಾರ್ಮೆನ್ಸ್ ನೋಡಿ ಶ್ರುತಿ ಖುಷಿಪಟ್ಟರು. ಅವರಿಗೆ ತಂದೆ-ತಾಯಿ ನೆನಪಾದರು. ‘ರಂಗಭೂಮಿ, ನಾಟಕ ಎಂದಾಗ ನನ್ನ ತಂದೆ-ತಾಯಿ ನೆನಪಿಗೆ ಬರುತ್ತಾರೆ. ಅವರೂ ನಾಟಕ ಅಂತ ಹಲವು ಊರುಗಳಿಗೆ ಸುತ್ತಾಟ ನಡೆಸುತ್ತಿದ್ದರು. ಆ ಊರಲ್ಲಿ ಯಾರಿಗೋ ತೊಂದರೆ ಆಗಿ ನಾಟಕ ನಡೆದಿಲ್ಲ ಎಂದಾಗ ಅವರ ಮುಖದಲ್ಲಿ ಕಾಣುತ್ತಿದ್ದ ನೋವು ಮತ್ತೆ ಕಣ್ಣೆದುರಿಗೆ ಬಂತು. ಬಲವೇ ಬದುಕು, ಬಲಹೀನತೆಯ ಸಾವು. ನಂಬಿಕೆ ಇಟ್ಟವರನ್ನು ಈ ಕಲೆ ಕೈಬಿಟ್ಟಿಲ್ಲ’ ಎಂದರು ಶ್ರುತಿ.

‘ಕಲೆಯನ್ನು ನಂಬಿಕೊಂಡು ಯಾರಾದರೂ ಬದುಕು ಕಟ್ಟಿಕೊಳ್ತೀನಿ ಎಂದರೆ ಈ ನಾಟಕದ ಮೆಸೇಜ್ ನಿಜಕ್ಕೂ ಸಹಕಾರಿ. ಈ ನಾಟಕನ ಸೂಪರ್ ಆಗಿ ಮಾಡಿದ್ರಿ. ನೀನು ಯೋಗ್ಯತೆ ಇದ್ದವರಿಗೆ ವಿನ್ ಆಗಿದ್ದೀಯಾ. ಶ್ರದ್ಧೆ ಇಲ್ಲ ಎಂದವರಿಗೆ ಕಲೆ ತಿರುಗಿ ಕೊಡುತ್ತೆ’ ಎಂದು ಶಿವು ಅವರ ಶ್ರದ್ಧೆಯನ್ನು ಸೃಜನ್​ ಲೋಕೇಶ್ ಹೊಗಳಿದರು.

‘ಗಿಚ್ಚಿ ಗಿಲಿಗಿಲಿ’ ಮೊದಲ ಸೀಸನ್ ಯಶಸ್ಸು ಕಂಡಿತು. ಆ ಬಳಿಕ ‘ಗಿಚ್ಚಿ ಗಿಲಿಗಿಲಿ ಸೀಸನ್ 2’ ಬಂದಿದೆ. ನಿರಂಜನ್​ ದೇಶಪಾಂಡೆ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಸೃಜನ್ ಲೋಕೇಶ್, ಶ್ರುತಿ ಜಡ್ಜ್​ ಸ್ಥಾನದಲ್ಲಿ ಇದ್ದಾರೆ. ಈ ಸೀಸನ್​ಗೆ ಮೆಚ್ಚುಗೆ ವ್ಯಕ್ತವಾಗಿದೆ. ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಕಾರ್ಯಕ್ರಮ ಪ್ರಸಾರ ಆಗುತ್ತಿದೆ.

ಶ್ರೀಲಕ್ಷ್ಮಿ ಎಚ್​.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:49 pm, Mon, 6 February 23

ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ
ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ
ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ
ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್