
ಬಿಗ್ ಬಾಸ್ (Bigg Boss) ಮನೆಯಲ್ಲಿ ಈ ವಾರ ಅತಿಥಿಗಳು ಬಂದಿದ್ದಾರೆ. ಕಳೆದ ಸೀಸನ್ ಸ್ಪರ್ಧಿಗಳಾದ ಗಿಲ್ಲಿ ನಟ, ಮಂಜು ಮೊದಲಾದವರು ಅತಿಥಿಗಳು. ಬಂದವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದು ಬಿಗ್ ಬಾಸ್ ಆದೇಶ ಆಗಿತ್ತು. ಆದರೆ, ಅದನ್ನು ಗಿಲ್ಲಿ ಮೀರಿದ್ದಾರೆ. ಎಲ್ಲರೂ ಅವರನ್ನು ಚೆನ್ನಾಗಿ ನೋಡಿಕೊಂಡರೆ ಗಿಲ್ಲಿ ಮಾತ್ರ ಅವರಿಗೆ ಟಾರ್ಚರ್ ಕೊಟ್ಟಿದ್ದಾರೆ. ಇದರಿಂದ ಸಿಟ್ಟಾದ ಅತಿಥಿಗಳು ಕೂಗಾಡಿದ್ದಾರೆ. ಇದರಿಂದ ಬೇಸರಗೊಂಡು ಗಿಲ್ಲಿ ಹಾಗೂ ಅಶ್ವಿನಿ ಗೌಡ ಒಂದಾಗಿದ್ದಾರೆ. ಇವರ ಮಧ್ಯೆ ಗೆಳೆತನ ಮೂಡಿದೆ. ಅಶ್ವಿನಿ ಅವರು ಸ್ವತಃ ಗಿಲ್ಲಿಯನ್ನು ಸಮಾಧಾನ ಮಾಡಿದ್ದಾರೆ.
ಗಿಲ್ಲಿ ಹಾಗೂ ಅಶ್ವಿನಿ ಅವರ ಮಧ್ಯೆ ಮೊದಲಿನಿಂದಲೂ ಕಿತ್ತಾಟ ನಡೆದೇ ಇದೆ. ಇವರು ಒಮ್ಮೆಯೂ ಪ್ರೀತಿಯಿಂದ ಮಾತನಾಡಿಕೊಂಡ ಉದಾಹರಣೆಯೇ ಇಲ್ಲ. ಆದರೆ, ಈ ವಾರ ಎಲ್ಲವೂ ಅದಲುಬದಲಾಗಿದೆ. ಮನೆಯವರ ತಂಟೆಗೆ ಅತಿಥಿಗಳು ಬಂದಿರೋದು ಅಶ್ವಿನಿ ಹಾಗೂ ಗಿಲ್ಲಿಗೆ ಕೋಪ ತರಿಸಿದೆ. ಈ ಕಾರಣದಿಂದಲೇ ಇಬ್ಬರೂ ಒಂದಾಗಿದ್ದಾರೆ. ಇವರ ಮಧ್ಯೆ ಇದೇ ಗೆಳೆತನ ಮುಂದುವರಿಯಲಿ ಎಂಬುದು ಫ್ಯಾನ್ಸ್ ಕೋರಿಕೆ.
AG TO GILLI ” cool agi eru ,hang yenadru himse kotre nana kari nanu bartini”!!!#bbk12 pic.twitter.com/AJLhVPeTV8
— !!!IN MY POV!!! (@roxxxxy9) November 26, 2025
ಗಿಲ್ಲಿ ನಡುವಳಿಕೆಯಿಂದ ಬೇಸರಗೊಂಡ ಅತಿಥಿಗಳು ಅಸಮಧಾನ ಹೊರಹಾಕಿದರು. ಆ ಬಳಿಕ ಇಡೀ ಮನೆ ಗಿಲ್ಲಿ ವಿರುದ್ಧ ತಿರುಗಿಬಿತ್ತು. ಈ ಕಾರಣದಿಂದಲೇ ಗಿಲ್ಲಿ ಅವರು ಸೈಲೆಂಟ್ ಆದರು. ಗಿಲ್ಲಿ ಸೈಲೆಂಟ್ ಆಗಿರೋದನ್ನು ಅಶ್ವಿನಿ ಅವರಿಗೆ ನೋಡೋಕೆ ಆಗಿಲ್ಲ. ಗಿಲ್ಲಿಯನ್ನು ಕರೆದು ಅಶ್ವಿನಿ ಸಮಧಾನ ಮಾಡಿದ್ದಾರೆ.
ಇದನ್ನೂ ಓದಿ: ಗಿಲ್ಲಿ ಆಟ ಹನುಮಂತನ 10 ಪರ್ಸೆಂಟ್ ಇಲ್ಲ; ನೇರವಾಗಿ ಹೇಳಿದ ಬಿಗ್ ಬಾಸ್ ಅತಿಥಿಗಳು
‘ಸಾಮಾನ್ಯವಾಗಿರು. ಕೂಲ್ ಆಗಿರು. ಹಿಂಸೆ ಆದರೆ ಕರಿ ಜೊತೆಗೆ ಬರ್ತೀನಿ’ ಎಂದು ಗಿಲ್ಲಿಗೆ ಬಲ ತುಂಬಿದ್ದಾರೆ. ಅವರ ಮಾತು ಕೇಳಿ ಅನೇಕರಿಗೆ ಅಚ್ಚರಿ ಆಗಿದೆ. ಕೆಲವರು ಅತಿಥಿಗಳದ್ದು ಅತಿಯಾಯಿತು ಎನ್ನುತ್ತಿದ್ದಾರೆ. ಇನ್ನೂ ಕೆಲವರು ಗಿಲ್ಲಿ ಮೇಲೆ ಆರೋಪ ಮಾಡಿದ್ದಾರೆ. ಒಟ್ಟಿನಲ್ಲಿ ಆರೋಪ-ಪ್ರತ್ಯಾರೋಪ ಮುಂದುವರಿದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:37 am, Thu, 27 November 25